ಪತ್ನಿ ಫೋನ್​ನಲ್ಲಿ ಮಾತನಾಡಿದ ಸಣ್ಣ ಕಾರಣಕ್ಕೆ ಶೂಟ್ ಮಾಡಿ ಕೊಂದ ಗಂಡ

ಪತ್ನಿ ಫೋನ್​ನಲ್ಲಿ ಮಾತನಾಡಿದ ಸಣ್ಣ ಕಾರಣಕ್ಕೆ ಶೂಟ್ ಮಾಡಿ ಕೊಂದ ಗಂಡ

ಮೀರತ್: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ತನ್ನ ಪತ್ನಿ ಫೋನ್​ನಲ್ಲಿ ಮಾತನಾಡುತ್ತಿದ್ದುದಕ್ಕೆ ಅನುಮಾನಿಸಿ ಪತಿ ಪತ್ನಿಯನ್ನ ಶೂಟ್ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ. ಶಮಾ(36) ಪತಿಯಿಂದ ಕೊಲೆಯಾದ ಮಹಿಳೆ.

ಶಮಾ ತನ್ನ ಮೊದಲ ಪತಿ ತೀರಿಕೊಂಡ ಒಂದು ವರ್ಷದ ಅಂತರದಲ್ಲಿ ಫಜಿಲ್​ ಎಂಬಾತನನ್ನ ಮದುವೆಯಾಗಿದ್ದರು. ಶಮಾ ಮತ್ತು 14 ವರ್ಷದ ಮಗ ಫಜಿಲ್ ಮನೆಯಲ್ಲಿ ವಾಸವಾಗಿದ್ದರು. ಶಮಾ ಸಹೋದರಿ ಫರ್ಹಾ ಸಹ ಇವರ ಜೊತೆಯಲ್ಲೇ ವಾಸವಿದ್ದಳು ಎನ್ನಲಾಗಿದೆ.

ಶುಕ್ರವಾರ ರಾತ್ರಿ ಶಮಾ ಫೋನ್​ನಲ್ಲಿ ಮಾತನಾಡುತ್ತಿದ್ದಳು.. ಈ ವೇಳೆ ತನ್ನ ಪತ್ನಿ ಬೇರೊಬ್ಬನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನಿಸಿ ಫಜಿಲ್ ಆಕೆಯನ್ನ ಕೊಂದಿದ್ದಾನೆಂದು ಆರೋಪಿಸಲಾಗಿದೆ.

ಇನ್ನ ಸ್ಥಳೀಯರು ನಡೆದ ಘಟನೆಯ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಘಟನೆ ನಡೆದ ಸ್ಥಳದಲ್ಲಿ ಮೂರು ಬಳಕೆಯಾದ ಕಾರ್ಟ್​ರಿಡ್ಜ್​​ಗಳನ್ನ ವಶಕ್ಕೆ ಪಡೆದಿದ್ದಾರೆ.

Source: newsfirstlive.com Source link