ಕಾರ್ಯಕರ್ತನ ಅಂತಿಮ ದರ್ಶನ ವೇಳೆ ಹೆಚ್​.ಡಿ.ಕುಮಾರಸ್ವಾಮಿ ಭಾವುಕ

ಕಾರ್ಯಕರ್ತನ ಅಂತಿಮ ದರ್ಶನ ವೇಳೆ ಹೆಚ್​.ಡಿ.ಕುಮಾರಸ್ವಾಮಿ ಭಾವುಕ

ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಜೆಡಿಎಸ್ ಮುಖಂಡನ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಅಂತಿಮ ದರ್ಶನ ಪಡೆದು ಭಾವುಕರಾಗಿದ್ದಾರೆ.

ನಿನ್ನೆ ನಾಗಮಂಗಲ ತಾಲೂಕಿನ ಗುಡ್ಡೇನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಜೆಡಿಎಸ್ ಮುಖಂಡ ಆನಂದಕುಮಾರ್ (62), ಸೇರಿದಂತೆ ಮೊಮ್ಮಕ್ಕಳಾದ ಆರಾಧ್ಯ (10), ಗೌರವ್ (5) ಮೃತ ಪಟ್ಟಿದ್ದರು.

ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು

ಇಂದು ಅತ್ಯಕ್ರಿಯೆಗೂ ಮುನ್ನ ಮೃತ ಜೆಡಿಎಸ್ ಮುಖಂಡನ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಪಕ್ಷದ ನಿಷ್ಟಾವಂತ ಕಾರ್ಯಕರ್ತನನ್ನು ಕಳೆದುಕೊಂಡ ನೋವಿನಲ್ಲಿ ಭಾವುಕರಾದರು. ಅಂತಿಮ ದರ್ಶನದ ಬಳಿಕ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆನಂದ್‌ ಕುಮಾರ್ ಅವರನ್ನು ಕಳೆದುಕೊಂಡು ತುಂಬಾ ನೋವುಂಟಾಗಿದೆ. ಆ ಪುಟ್ಟ ಮಕ್ಕಳು ಸಾವನ್ನಪ್ಪಿರುವುದು ನೋಡಿದರೆ ಕರುಳು ಚುರುಕ್ ಅನ್ನಿಸುತ್ತದೆ. ದೇವರು ಯಾಕೆ ಇಷ್ಟು ಬೇಗ ಕರೆದುಕೊಳ್ಳುತ್ತಾನೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Source: newsfirstlive.com Source link