ಕೃಷಿ ಕಾನೂನು ವಿರೋಧಿಸಿ ಹೋರಾಟ: ರೈತರ ಪರ ಬ್ಯಾಟ್ ಬೀಸಿದ ಬಿಜೆಪಿ ಸಂಸದ ವರುಣ್ ಗಾಂಧಿ

ಕೃಷಿ ಕಾನೂನು ವಿರೋಧಿಸಿ ಹೋರಾಟ: ರೈತರ ಪರ ಬ್ಯಾಟ್ ಬೀಸಿದ ಬಿಜೆಪಿ ಸಂಸದ ವರುಣ್ ಗಾಂಧಿ

ನವದೆಹಲಿ: ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಿರುವ ರೈತರ ಪರ ಬಿಜೆಪಿ ಸಂಸದ ವರುಣ್ ಗಾಂಧಿ ಬ್ಯಾಟ್ ಬೀಸಿದ್ದಾರೆ. ಟ್ವೀಟ್ ಒಂದನ್ನು ಮಾಡಿರುವ ವರುಣ್ ಗಾಂಧಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಲಕ್ಷಾಂತರ ರೈತರು ಮುಜಾಫ್ಫರ್​ನಗರದಲ್ಲಿ ಇಂದು ಪ್ರತಿಭಟನೆಗೆ ಇಳಿದಿದ್ದಾರೆ. ಅವರು ನಮ್ಮದೇ ರಕ್ತ ಮಾಂಸವಾಗಿದ್ದಾರೆ. ಗೌರವಯುತವಾಗಿ ನಾವು ಅವರ ಜೊತೆ ಮತ್ತೆ ಮಾತುಕತೆ ಮುಂದುವರೆಸಬೇಕಿದೆ. ಅವರ ನೋವನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರ ದೂರದೃಷ್ಟಿಯನ್ನು ಅರಿತು ಅವರೊಂದಿಗೆ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ್, ಮಧ್ಯಪ್ರದೇಶ, ಉತ್ತರಾಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಕೃಷಿ ಕಾನೂನುಗಳನ್ನು ವಿರೋಧಿಸಿ ಮಹಾಪಂಚಾಯತ್​​ಗಳನ್ನು ನಡೆಸಿದ ಬೆನ್ನಲ್ಲೇ ವರುಣ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಶೀಘ್ರದಲ್ಲೇ ಚುನಾವಣೆ ಎದುರಾಗುತ್ತಿರುವ ಬೆನ್ನಲ್ಲೇ ವರುಣ್ ಗಾಂಧಿ ರೈತರ ಪರವಾಗಿ ಮಾತನಾಡಿರುವುದು ಗಮನ ಸೆಳೆದಿದೆ.

Source: newsfirstlive.com Source link