ಧುವ ಚಿತ್ರಕ್ಕೆ ‘ಗಣೇಶ’ನ ಹಬ್ಬದಂದು ಪ್ರೇಮ್ ಮುನ್ನುಡಿ; ಅದ್ದೂರಿ ಸಂಗೀತ ಲೋಕ ಸೃಷ್ಟಿ ಪಕ್ಕಾ..!

ಧುವ ಚಿತ್ರಕ್ಕೆ ‘ಗಣೇಶ’ನ ಹಬ್ಬದಂದು ಪ್ರೇಮ್ ಮುನ್ನುಡಿ; ಅದ್ದೂರಿ ಸಂಗೀತ ಲೋಕ ಸೃಷ್ಟಿ ಪಕ್ಕಾ..!

ಜೋಗಿ ಪ್ರೇಮ್​ ಸಿನಿಮಾ ಮಾಡ್ತಾರೆ ಅಂದ್ರೆ ಗಾಂಧಿನಗರದಿಂದ ಚಂದ್ರಲೇಔಟ್​ವರೆಗೂ ಸೌಂಡ್​ ಆಗುತ್ತೆ. ಅಷ್ಟೂ ಭರ್ಜರಿಯಾಗಿ ಸಿನಿಮಾ ಮಾಡ್ತಾರೆ ಬೆಸಗರಹಳ್ಳಿಯ ಕಿರಣ್​ ಕುಮಾರ್. ಅಷ್ಟೇ ಅಲ್ಲ, ಸಿನಿಮಾದಷ್ಟೇ ಅದ್ದೂರಿಯಾಗಿ ಸಂಗೀತ ಇರುತ್ತೆ ಪ್ರೇಮ್​ ಅವರ ಸಿನಿಮಾದಲ್ಲಿ.. ಅದರೆ ಈ ವಿಷಯ ಈಗ್ಯಾಕಪ್ಪ ಬಂತು ಅಂದ್ರೆ.. ಹ್ಯಾಟ್ರಿಕ್​ ಡೈರೆಕ್ಟರ್​ ಪ್ರೇಮ್​ ನಿರ್ದೇಶನದ, ಪೊಗರು ಪೋರ ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಕಾಂಬಿನೇಷನ್​ ಸಿನಿಮಾ ಈಗಾಗಲೇ ಅನೌನ್ಸ್​ ಆಗಿದೆ.. ಅಲ್ಲದೆ ಈಗ ಪ್ರೇಮ್​ ಗಣೇಶ ಹಬ್ಬದ ದಿನವೇ ಯುದ್ದಕ್ಕೆ ಮುನ್ನುಡಿ ಬರೆಯೋಕೆ ಸಜ್ಜಾಗಿದ್ದಾರೆ.

blank

ಜೋಗಿ ಪ್ರೇಮ್ ಸಂಗೀತ ಪ್ರೇಮಿ ಅಂದ್ರೆ ತಪ್ಪಲ್ಲ. ಯಾಕಂದ್ರೆ ಕರಿಯ ಚಿತ್ರದಿಂದ ಏಕ್​ ಲವ್​ ಯಾ ಚಿತ್ರದವರೆಗೂ ಎಲ್ಲಾ ಚಿತ್ರಗಳಲ್ಲೂ ಸಂಗೀತ ಸೂಪರ್​ ಡೂಪರ್​ ಹಿಟ್​ ಆಗಿದೆ. ಸಿನಿಮಾಗೆ ಹಾಕುವ ಎಫರ್ಟ್ ಅನ್ನೆ ಪ್ರೇಮ್​ ಸಂಗೀತಕ್ಕೂ ಹಾಕ್ತಾರೆ ಅಂತಾರೆ ಅವರನ್ನು ಅರಿತವರು. ಪ್ರತಿಯೊಂದು ಹಾಡನ್ನು ಕತೆಗೆ ತಕ್ಕಂತೆ ಟ್ಯೂನ್​ ಹಾಕಿಸಿ ತೆರೆ ಮೇಲೆಮ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತಾರೆ ಪ್ರೇಮ್​.

ಪ್ರೇಮ್​ ಸಿನಿಮಾ ಕೆರಿಯರ್​ನಲ್ಲಿ ಅಜಯ್​ ರಾವ್​ ಮತ್ತು ಅವರ ಬಾಮೈದ ರಾಣ ಜೊತೆಯೂ ಸಿನಿಮಾ ಮಾಡಿ ಹಿಟ್​ ಸಾಂಗ್​ಗಳ ಕೊಟ್ಟಿದ್ದಾರೆ. ಜೊತೆಗೆ ಸ್ಟಾರ್​ಗಳ ಚಿತ್ರದಲ್ಲಿಯೂ ಹಾಡುಗಳ ಮೆರವಣಿಗೆಯೆ ಆಗಿದೆ. ಸಂಗೀತಕ್ಕೆ ಇಷ್ಟೇಲ್ಲ ಎಫರ್ಟ್​ ಹಾಕುವ ಪ್ರೇಮ್​ ಈಗ ತಮ್ಮ 9 ನೇ ಚಿತ್ರದ ಹಾಡುಗಳ ಬಗ್ಗೆ ತುಂಬಾನೆ ತಲೆಕೆಡಿಸಿಕೊಂಡಿದ್ದಾರಂತೆ. ಯಾಕಂದ್ರೆ ಪ್ರೇಮ್ ಫಸ್ಟ್​ ಟೈಮ್​ ಧ್ರುವ ಸರ್ಜಾ ಜೊತೆ ಪ್ಯಾನ್​ ಇಂಡಿಯಾ ಸಿನಿಮಾ ಮಾಡಲು ಹೊರಟಿದ್ದು, ಚಿತ್ರದ ಸಂಗೀತ ಎಲ್ಲಾ ಬಾಷೆಯ ಸಂಗೀತ ಪ್ರಿಯರಿಗೆ ತಲುಪಿಸಲು ಪ್ರೇಮ್ ಪಣತೊಟ್ಟಂತೆ ಕಾಣ್ತಿದೆ.

blank

ಯೆಸ್​.. ಪ್ರೇಮ್​ ಸದ್ಯ ಬಾಮೈದನ ಸಿನಿಮಾ ರಿಲೀಸ್​ ಮಾಡುವ ಕೆಲಸದಲ್ಲಿ ಬ್ಯುಸಿ ಇದ್ರು. ಗ್ಯಾಪ್​ನಲ್ಲಿ ಇನ್ನು ಹೆಸರಿಡದ ಧ್ರುವ ಸರ್ಜಾ ಸಿನಿಮಾದ ಸಂಗೀತದ ಕೆಲಸದ ಕಡೆ ಈಗಾಗಲೇ ಗಮನ ಹರಿಸಿದ್ದಾರೆ. ಆದ್ರೆ ಯಾರು ಈ ಚಿತ್ರಕ್ಕೆ ಸಂಗೀತ ನೀಡ್ತಾರೆ ಅನ್ನೋ ಪ್ರಶ್ನೆ ಚಿತ್ರಪ್ರೇಮಿಗಳಲ್ಲಿ ಹುಟ್ಟಿತ್ತು. ಆದ್ರೆ ಈಗ ಈ ಕುತೂಹಲದ ಕ್ವಶ್ಚನ್​ಗೆ ಉತ್ತರ ಸಿಕ್ಕಿದ್ದು, ಆ ಉತ್ತರವೇ ಅರ್ಜುನ್​ ಜನ್ಯ. ಹೌದು ಪ್ರೇಮ್ ಏಕ್​ ಲವ್​ ಯಾ ಚಿತ್ರದ ನಂತ್ರ ಧ್ರುವ ಚಿತ್ರಕ್ಕಾಗಿ ಮತ್ತೆ ಅರ್ಜುನ್​ ಜನ್ಯ ಜೊತೆ ಹೊಸ ಹೆಜ್ಜೆ ಇಡೋಕೆ ರೆಡಿಯಾಗಿದ್ದಾರೆ.. ಧ್ರುವ ಸರ್ಜಾರ 6ನೇ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ಇರಲಿದೆ.

ಪ್ರೇಮ್​ ಮತ್ತೆ ಸಂಗೀತ ಮಾಂತ್ರಿಕ ಅರ್ಜುನ್​ ಜನ್ಯ ಜೊತೆಯಾಗಿದ್ದಾರೆ ಅಂದ್ರೆ ಕೇಳಬೇಕಾ? ವೈಬವ ಪೂರಿತ ಹಾಡುಗಳ ದಿಬ್ಬಣವೇ ಸಂಗೀತ ಪ್ರಿಯರ ಬತ್ತಳಿಗೆ ಸೇರಲಿವೆ. ಅದರೆ ಈ ಮಾಸ್ಟರ್​ ಪೀಸ್​ಗಳು ಯಾವಾಗ ಹೊಸ ಚಿತ್ರಕ್ಕೆ ಕೆಲಸ ಶುರು ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿತ್ತು. ಅದ್ರೆ ಆ ಕುತೂಹಲ ತಣಿಸುವ ವಿಷಯ ಚಿತ್ರಪ್ರೇಮಿಗಳೇ ತಂಡಕ್ಕೆ ಸಿಕ್ಕಿದ್ದು, ಇದೇ ಗಣೇಶ ಹಬ್ಬಕ್ಕೆ ಪ್ರೇಮ್ ಅವರ 9ನೇ ಚಿತ್ರದ ಸಂಗೀತದ ಪೂಜೆ ಮಾಡೊಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

blank

ಗಣೇಶ ಹಬ್ಬಕ್ಕೆ ಸಂಗೀತದ ಕೆಲಸಕ್ಕೆ ಚಾಲನೆ ಕೊಡುವ ಪ್ರೇಮ್​, ದಸರಾ ಹಬ್ಬಕ್ಕೆ ಚಿತ್ರದ ಟೈಟಲ್​ ರಿವೀಲ್​ ಮಾಡಿ. ಚಿತ್ರಕ್ಕೆ ನಾಯಕಿ ಫೈನಲ್​ ಮಾಡ್ಕೊಂಡ್​ ಆಕ್ಷನ್​ ಪ್ರಿನ್ಸ್​ ಜೊತೆ ಶೂಟಿಂಗ್​ ಅಖಾಡಕ್ಕೆ ಇಳಿಯಲು ಪ್ಲಾನ್​ ಮಾಡಿದ್ದಾರೆ.

Source: newsfirstlive.com Source link