ಅಂಪೈರ್​ ವಿರುದ್ಧ ಅಸಮಾಧಾನ-ರಾಹುಲ್​​​ಗೆ ಬಿತ್ತು ದಂಡದ ಬರೆ..!

ಅಂಪೈರ್​ ವಿರುದ್ಧ ಅಸಮಾಧಾನ-ರಾಹುಲ್​​​ಗೆ ಬಿತ್ತು ದಂಡದ ಬರೆ..!

ಪ್ರಸ್ತುತ ನಡೆಯುತ್ತಿರುವ ಇಂಡೋ-ಇಂಗ್ಲೆಂಡ್​ನ ನಾಲ್ಕನೇ ಟೆಸ್ಟ್​​​ನಲ್ಲಿ ಭಾರತದ ಆರಂಭಿಕ ಆಟಗಾರ ಕೆ.ಎಲ್​.ರಾಹುಲ್​ ದಂಡ ವಿಧಿಸಲಾಗಿದೆ. ಅಂಪೈರ್​​ಗಳ ವಿರುದ್ಧ ಅಸಮಾಧಾನ ತೋರಿದ ಪರಿಣಾಮ, ರಾಹುಲ್​​ಗೆ ಐಸಿಸಿ ದಂಡ ವಿಧಿಸಿ ಆದೇಶಿಸಿದೆ. ಪಂದ್ಯದ ಶೇಕಡಾ 15ರಷ್ಟು ದಂಡವನ್ನ ಪಾವತಿಸಬೇಕಿದೆ.

ಅಷ್ಟಕ್ಕೂ ನಡೆದಿದ್ದೇನು..?
2ನೇ ಇನ್ನಿಂಗ್ಸ್‌ನ 34ನೇ ಓವರ್‌ನಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್​​​ನಲ್ಲಿ ರಾಹುಲ್ ವಿಕೆಟ್​ಗಾಗಿ ಮನವಿ ಮಾಡಲಾಗಿತ್ತು. ಚೆಂಡು ಬ್ಯಾಟ್​​ಗೆ ತಗುಲಿ ವಿಕೆಟ್​​ ಕೀಪರ್​ ಜಾನಿ ಬೈರ್​​ಸ್ಟೋ​ ಕೈ ಸೇರಿತ್ತು. ಹಾಗಾಗಿ ಇಂಗ್ಲೆಂಡ್ ತಂಡದ ಆಟಗಾರರು ಅಂಪೈರ್​​​​ ಬಳಿ ಮನವಿ ಮಾಡಿದ್ರು. ಆದರೆ ಅಂಪೈರ್​ ನಾಟೌಟ್​ ನೀಡಿದ್ರು.
ಹೀಗಾಗಿ ಇಂಗ್ಲೆಂಡ್ ನಾಯಕ ಜೋ ರೂಟ್, ಡಿಆರ್​ಎಸ್ ಮೊರೆ ಹೋದ್ರು. ರಿವ್ಯೂನಲ್ಲಿ ಔಟಾಗಿರೋದು ಸ್ಪಷ್ಟವಾಗುತ್ತಿದ್ದಂತೆ ಅಂಪೈರ್​ ಔಟ್ ಎಂದು ತೀರ್ಪು ನೀಡಿದ್ರು. ಆಗ ಅಂಪೈರ್​​ ವಿರುದ್ಧ ಅಸಮಾಧಾನ ಹೊರಹಾಕಿ ರಾಹುಲ್​ ಪೆವಲಿಯನ್​ ಸೇರಿದ್ರು. 101 ಎಸೆತಗಳನ್ನ ಎದುರಿಸಿದ ರಾಹುಲ್​ 46 ರನ್​ ಗಳಿಸಿದ್ರು. ಅದರಲ್ಲಿ ಬೌಂಡರಿ, 1 ಸಿಕ್ಸರ್​ ಕೂಡ ಇದೆ.

ಆದರೆ ಈ ಬಗ್ಗೆ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಮ್ಯಾಚ್ ರೆಫ್ರಿಗೆ ದೂರು ಕೊಟ್ಟಿದ್ರು. ಆದ್ದರಿಂದ ದಂಡ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಪ್ರಕಾರ ಅಂಪೈರ್ ನಿರ್ಧಾರದ ವಿರುದ್ಧದ ನಡೆಯಾಗಿದೆ ಎಂದು ಐಸಿಸಿ ತಿಳಿಸಿದೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಆಟಗಾರರ ಶಿಸ್ತಿನ ದಾಖಲೆ ಪಟ್ಟಿಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ ಎಂದು ತಿಳಿಸಿದೆ.

Source: newsfirstlive.com Source link