ಗಣೇಶ ಹಬ್ಬಕ್ಕೆ ತಯಾರಿ ಜೋರಾ..? ಮೊದಲು ಸರ್ಕಾರದ ಗೈಡ್​ಲೈನ್ಸ್ ತಿಳಿಯಿರಿ..

ಗಣೇಶ ಹಬ್ಬಕ್ಕೆ ತಯಾರಿ ಜೋರಾ..? ಮೊದಲು ಸರ್ಕಾರದ ಗೈಡ್​ಲೈನ್ಸ್ ತಿಳಿಯಿರಿ..

ಬೆಂಗಳೂರು: ಕೊರೊನಾ ಹಿನ್ನೆಲೆ ಬಹಿರಂಗ ಆಚರಣೆಗೆ ಈ ಹಿಂದೆ ಸರ್ಕಾರ ನಿರ್ಬಂಧ ಹೇರಿತ್ತು. ಈ ಹಿನ್ನೆಲೆ ಹಲವರು ನಿರ್ಬಂಧದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಹಾಕಿದ್ದರು. ಈ ಹಿನ್ನೆಲೆ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಹೊಸ ಗೈಡ್‌ಲೈನ್ಸ್ ಹೊರಡಿಸಿದೆ.

ಹೊಸ ಗೈಡ್​ಲೈನ್ಸ್​​ನಲ್ಲಿ ಗಣೇಶ ಆಚರಣೆಗೆ ಅವಕಾಶ ಮಾಡಿಕೊಡಲಾಗಿದ್ದರೂ ಆಚರಣೆಗೆ ಕೆಲವು ದಿನಗಳ ಸೀಮಿತಾವಧಿಯನ್ನಷ್ಟೇ ನೀಡಲಾಗಿದೆ. ಅಲ್ಲದೆ ಮನರಂಜನಾ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದೆ.

ರಾಜ್ಯ ಸರ್ಕಾರದ ಹೊಸ ಗೈಡ್​​ಲೈನ್ಸ್​​ನ ಮುಖ್ಯಾಂಶಗಳು ಹೀಗಿವೆ.
1. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತಿನ ಅನುಮತಿ
2. ಗರಿಷ್ಠ 5 ದಿನ ಗಣೇಶೋತ್ಸವ ಆಚರಣೆಗೆ ಸರ್ಕಾರದ ಅನುಮತಿ
3. ನಗರ ಪ್ರದೇಶಗಳಲ್ಲಿ ವಾರ್ಡ್‌ಗೆ 1 ಗಣೇಶ ಪ್ರತಿಷ್ಠಾಪನೆಗೆ ಸಮ್ಮತಿ
4. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ಥಳೀಯ ಆಡಳಿತದಿಂದ ನಿರ್ಧಾರ
5. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಇರುವುದಿಲ್ಲ
6. ಡಿ.ಜೆ., ವಾದ್ಯಮೇಳ, ಮನರಂಜನಾ ಕಾರ್ಯಕ್ರಮಕ್ಕಿಲ್ಲ ಅವಕಾಶ
7. ಗಣೇಶನ ಪ್ರತಿಷ್ಠಾಪನೆಗೆ 50-50 ಪೆಂಡಾಲ್‌ ಹಾಕಲು ಅವಕಾಶ
8. ನಿಗದಿತ ಸ್ಥಳದಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು
9. ಸಾರ್ವಜನಿಕ ಗಣೇಶೋತ್ಸವ ಸ್ಥಳಗಳಲ್ಲಿ ಲಸಿಕೆ ಅಭಿಯಾನ ಕಡ್ಡಾಯ
10. ಗಣೇಶ ವಿಸರ್ಜನೆ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು
11. ಗಡಿಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 2ಕ್ಕಿಂತ ಕಡಿಮೆ ಇದ್ದರೆ ಮಾತ್ರ ಹಬ್ಬ
12. ಶೇ.2ಕ್ಕಿಂತ ಹೆಚ್ಚಿನ ಪಾಸಿಟಿವಿ ದರ ಇರುವ ಕಡೆ ಗಣೇಶೋತ್ಸವ ಇರಲ್ಲ
13. ಶಾಲೆ-ಕಾಲೇಜುಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಇರಲ್ಲ

Source: newsfirstlive.com Source link