ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ -ಸಚಿವ ಎಸ್​​.ಟಿ ಸೋಮಶೇಖರ್​​

ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ -ಸಚಿವ ಎಸ್​​.ಟಿ ಸೋಮಶೇಖರ್​​

ಚಾಮರಾಜನಗರ: ಸಿಎಂ ಬಸವರಾಜ್​​​ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ ಎಂದು ಸಚಿವ ಎಸ್​​​​​.ಟಿ ಸೋಮಶೇಖರ್​​ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಮಾತಾಡಿದ ಎಸ್​.ಟಿ ಸೋಮಶೇಖರ್​​​, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರ ಮಾತೇ ಅಂತಿಮ. ಅಮಿತ್​​​​​​ ಶಾ ಅವರು ಹೇಳಿದಂತೆ 2023ರ ವಿಧಾನಸಭಾ ಚುನಾವಣೆ ಸಿಎಂ ಬಸವರಾಜ್​​ ಬೊಮ್ಮಾಯಿ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದರು.

ಸಿಎಂ ಬಸವರಾಜ್​ ಬೊಮ್ಮಾಯಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತಾರೆ. ಇವರು ಬಹಳ ಬುದ್ಧಿವಂತರು ಮತ್ತು ಸಮರ್ಥರು. ಈಗಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಬೊಮ್ಮಾಯಿ ಪರ ಸೋಮಶೇಖರ್​​ ಫುಲ್​​ ಬ್ಯಾಟಿಂಗ್​ ಮಾಡಿದರು.

ಈ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್​​ ಶಾ, ಬೊಮ್ಮಾಯಿ ಮತ್ತೆ ಸಿಎಂ ಆಗಲಿದ್ದಾರೆ. 2023ರಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚನೆ ಆಗುತ್ತದೆ ಅನ್ನೋ ಮೂಲಕ ಬೊಮ್ಮಾಯಿ ಆಡಳಿತ ಚತುರತೆಯನ್ನು ಅಮಿತ್​ ಶಾ ಹೊಗಳಿದ್ದರು.

ಇದನ್ನೂ ಓದಿ: 2023ರ ರಾಜ್ಯ ಚುನಾವಣೆಗೆ ಶಾ ಮಾಸ್ಟರ್​​ ಪ್ಲಾನ್.. ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ‘ಫ್ರೀ ಹ್ಯಾಂಡ್​​’!

Source: newsfirstlive.com Source link