ಕೇಂದ್ರದ ವಿರುದ್ಧ ತೀವ್ರಗೊಂಡ ರೈತರ ಹೋರಾಟ; ಸೆ.27ಕ್ಕೆ ಭಾರತ ಬಂದ್​ಗೆ ಕರೆ

ಕೇಂದ್ರದ ವಿರುದ್ಧ ತೀವ್ರಗೊಂಡ ರೈತರ ಹೋರಾಟ; ಸೆ.27ಕ್ಕೆ ಭಾರತ ಬಂದ್​ಗೆ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್​​ 27ನೇ ತಾರೀಕಿನಂದು ಭಾರತ್​​ ಬಂದ್​ಗೆ ಸಂಯುಕ್ತ ಕಿಸಾನ್​​​​ ಮೋರ್ಚಾ ಸಂಘಟನೆ ಕರೆ ನೀಡಿದೆ. ಈ ಮೂಲಕ ಸಂಯುಕ್ತ ಕಿಸಾನ್​​ ಮೋರ್ಚಾ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರದ ವಿರುದ್ಧ ಮತ್ತಷ್ಟು ಪರಿಣಾಮಕಾರಿಯಾಗಿ ಹೋರಾಟ ನಡೆಸಲು ಮುಂದಾಗಿದೆ.

ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಇಂದು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ‘ರೈತರ ಮಹಾ ಪಂಚಾಯತ್’ ಆಯೋಜಿಸಿದ್ದವು. ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಆಯೋಜಿಸಿದ್ದ ಈ ಮಹಾ ಪಂಚಾಯತ್‌ನಲ್ಲಿ ವಿವಿಧ ರಾಜ್ಯಗಳಿಂದ ಹತ್ತಾರು ಸಾವಿರ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 300ಕ್ಕೂ ಹೆಚ್ಚು ರೈತ ಸಂಘಟನೆಗಳ ಕಾರ್ಯಕರ್ತರು ಮಹಾ ಪಂಚಾಯತ್​​ನಲ್ಲಿ ಭಾಗವಹಿಸಿದ್ದರು. ಮಹಾ ಪಂಚಾಯತ್​​ನಲ್ಲಿ ಸೆಪ್ಟೆಂಬರ್​​​ 27ಕ್ಕೆ ಭಾರತ್​​ ಬಂದ್​​ಗೆ ಕರೆ ನೀಡಿದರು.

ಇದನ್ನೂ ಓದಿ: ನಮ್ಮ ಬೇಡಿಕೆ 2 ತಿಂಗಳಲ್ಲಿ ಈಡೇರದಿದ್ದರೆ ದೇಶದಲ್ಲಿ ಯುದ್ಧವಾಗುತ್ತೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ

ಇನ್ನು, ಮಾಧ್ಯಮಗಳೊಂದಿಗೆ ಮಾತಾಡಿದ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್​​ ಟಿಕಾಯತ್​​, ಸೆಪ್ಟೆಂಬರ್​​ 27ಕ್ಕೆ ಭಾರತ್​​​ ಬಂದ್​​​​ಗೆ ನೀಡಲಾಗಿದೆ. ಕೇಂದ್ರದ ವಿರುದ್ಧ ಬಹಳ ಪರಿಣಾಮಕಾರಿಯಾಗಿ ನಮ್ಮ ಹಕ್ಕುಗಳನ್ನು ಮಂಡಸಲಿದ್ದೇವೆ. ಪಂಜಾಬ್‌ನ 32 ರೈತ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಕೇಸುಗಳು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಸೆಪ್ಟೆಂಬರ್ 8ನೇ ತಾರೀಕಿನವರೆಗೂ ಗಡುವು ನೀಡಿದ್ದೇವೆ ಎಂದರು.

Source: newsfirstlive.com Source link