ನನ್ನ ವಿರುದ್ಧದ ಆರೋಪ ಸಾಬೀತಾದ್ರೆ ಸಾರ್ವಜನಿಕವಾಗಿ ನೇಣಿಗೆ ಶರಣಾಗ್ತೇನೆ- ಮಮತಾ ಬ್ಯಾನರ್ಜಿ ಅಳಿಯ

ನನ್ನ ವಿರುದ್ಧದ ಆರೋಪ ಸಾಬೀತಾದ್ರೆ ಸಾರ್ವಜನಿಕವಾಗಿ ನೇಣಿಗೆ ಶರಣಾಗ್ತೇನೆ- ಮಮತಾ ಬ್ಯಾನರ್ಜಿ ಅಳಿಯ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್​ನ ನಾಯಕ, ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪ ಸಾಬೀತಾದರೆ ಬಹಿರಂಗವಾಗಿ ನೇಣಿಗ ಶರಣಾಗ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಜಾರಿ ನಿರ್ದೇಶನಾಲಯದ ನೋಟಿಸ್ ಹಿನ್ನೆಲೆ ವಿಚಾರಣೆಗೆ ಹೊರಟಿದ್ದ ವೇಳೆ ಕೊಲ್ಕತ್ತಾ ಏರ್​ಪೋರ್ಟ್​​ನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಭಿಷೇಕ ಬ್ಯಾನರ್ಜಿ.. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸೋತಿದ್ದರಿಂದ ರಾಜಕೀಯ ವೈಷಮ್ಯ ಮಾಡುತ್ತಿದೆ ಎಂದಿದ್ದಾರೆ.

ನಾನು ಅಕ್ರಮವಾಗಿ 10 ಪೈಸೆಯನ್ನೂ ವರ್ಗಾವಣೆ ಮಾಡಿಲ್ಲ. ಯಾವುದೇ ಕೇಂದ್ರದ ಏಜೆನ್ಸಿ ನಾನು 10 ಪೈಸೆ ಅಕ್ರಮ ಹಣ ವರ್ಗಾವಣೆ ಮಾಡಿರೋದನ್ನ ಸಾಬೀತು ಮಾಡಿದ್ರೆ ನಾನೇ ಮುಂದೆ ಬಂದು ಸಾರ್ವಜನಿಕವಾಗಿ ನೇಣಿಗೆ ಶರಣಾಗ್ತೇನೆ ಎಂದಿದ್ದಾರೆ.

Source: newsfirstlive.com Source link