ಗೋಲ್ಡನ್ ಸ್ಟಾರ್ ಅಭಿನಯಕ್ಕೆ ‘ಸಖತ್’ ಆಗಿಯೇ ಭವಿಷ್ಯ ನುಡಿದ ಮಾಳವಿಕಾ

ಗೋಲ್ಡನ್ ಸ್ಟಾರ್ ಅಭಿನಯಕ್ಕೆ ‘ಸಖತ್’ ಆಗಿಯೇ ಭವಿಷ್ಯ ನುಡಿದ ಮಾಳವಿಕಾ

ಗೋಲ್ಡನ್​ ಸ್ಟಾರ್​ ಗಣೇಶ್ ಅಭಿನಯದ ಸಿಂಪಲ್​ ಸುನಿ ನಿರ್ದೇಶನದ ‘ಸಖತ್​‘ ಸಿನಿಮಾ ಚಿತ್ರಪ್ರೇಮಿಗಳಲ್ಲಿ ಭಾರಿ ನಿರೀಕ್ಷೇ ಹುಟ್ಟುಹಾಕಿದೆ. ಫಸ್ಟ್​ ಟೈಂ ಗಣಿ ಅಂಧನ ಪಾತ್ರದಲ್ಲಿ ಕಾಣಿಸಿದ್ದು, ಚಿತ್ರದ ಪೋಸ್ಟರ್​ ನೋಡಿದವರು ಸಖತ್​ ಚಿತ್ರ ಪಕ್ಕಾ ಹಿಟ್​ ಆಗುತ್ತೆ ಅನ್ನೊ ಭವಿಷ್ಯ ನುಡಿದಿದ್ರು. ಅದೇ ರೀತಿ ಈಗ ಸಖತ್​ ಚಿತ್ರದಲ್ಲಿ ನಟಿಸಿರುವ ಮಾಳವಿಕ ಕೂಡ ಸಖತ್​ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Image

ಚಮಕ್​ ಚಿತ್ರದ ಸಕ್ಸಸ್​ ನಂತ್ರ ಗಣಿ ಮತ್ತು ಸುನಿ ‘ಸಖತ್​’ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ. ಈ ಹಿಟ್​ ಜೋಡಿ ಒಂದಾಗ್ತಿದಂತೆ ಸಖತ್​ ಚಿತ್ರ ಖಂಡಿತಾ ಮಳೆ ಹುಡುಗನ ಸೋಲಿನ ಕೊಳೆಯನ್ನು ತೊಳೆಯುತ್ತೆ ಅಂತ ಗಾಂಧಿನಗರದ ಸಿನಿ ಪಂಡಿತರು ಮಾತನಾಡಿದ್ರು. ಅಷ್ಟೇ ಅಲ್ಲಾ ಮಳೆ ಹುಡುಗ ತುಂಬಾ ವರ್ಷಗಳ ನಂತ್ರ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದು, ಚಿತ್ರಪ್ರೇಮಿಗಳಲ್ಲಿಯೂ ಈ ಚಿತ್ರದ ಮೇಲೆ ಭರವಸೆ ಮೂಡಿದೆ.

ಗೋಲ್ಡನ್​ ಸ್ಟಾರ್​ ಗಣೇಶ್ ಚೆಲ್ಲಾಟ ಚಿತ್ರದಿಂದ ಗೀತಾ ಚಿತ್ರದವರೆಗೂ ಲವರ್​ ಬಾಯ್ ಆಗೆ ಮಿಂಚಿದ್ರು. ಆದ್ರೆ ಸಖತ್​ ಚಿತ್ರದಲ್ಲಿ ಗಣಿ ಕೊಂಚ ಚೇಂಜ್​ ಇರ್ಲಿ ಅಂತ ಕುರುಡನ ಪಾತ್ರದಲ್ಲಿ ಕಾಣಿಸಿದ್ದು, ಪಾತ್ರವನ್ನು ಹೇಗೆ ನಿಭಾಯಿಸ್ತಾರೋ ಅನ್ನೊ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದ್ರೆ ಗಣಿನ ಅಂಧನ ಪಾತ್ರದ ಬಗ್ಗೆ ನಟಿ ಮಾಳವಿಕ ಮೆಚ್ಚುಗೆಯ ಮಾತು ಕೇಳಿದ ಗಣಿಯ ಅಭಿಮಾನಿಗಳು ಪುಲ್​ ಥ್ರಿಲ್​ ಆಗಿದ್ದಾರೆ.

ಗಣೇಶ್​ ಅಭಿನಯದ ‘ಸಖತ್​’ ಚಿತ್ರದಲ್ಲಿ ನಟಿ ಮಾಳವಿಕ ಜಡ್ಜ್​ ಪಾತ್ರದಲ್ಲಿ ಕಾಣಿಸಿದ್ದು, ನಿನ್ನೆ ಅವರ ಪಾತ್ರಕ್ಕೆ ಮಾಳವಿಕ ಡಬ್ಬಿಂಗ್ ಮಾಡಿದ್ದಾರೆ. ಮಾಳವಿಕ ಡಬ್ಬಿಂಗ್​ ಮಾಡುವ ವೇಳೆ ಸಖತ್​ ಚಿತ್ರದ ಕೆಲವು ಸೀನ್​ಗಳಲ್ಲಿ ಗಣೇಶ್ ಅವರ ಅಭಿನಯ ನೋಡಿ ಥ್ರಿಲ್​ ಆಗಿದ್ದಾರೆ. ಅಷ್ಟೇ ಅಲ್ಲ ಗಣೇಶ್ ಪಾತ್ರ ಮೆಚ್ಚುಗೆಯ ಮಾತುಗಳನಾಡಿ ಟ್ವಿಟರ್​ನಲ್ಲಿ ಬರೆದು ಕೊಂಡಿದ್ದಾರೆ. ಅಲ್ಲದೆ ಈ ಚಿತ್ರದ ಖಂಡಿತಾ ಹಿಟ್​ ಆಗುತ್ತೆ ಅಂತ ಭವಿಷ್ಯ ನುಡಿದ್ದಾರೆ.

Image

ಸಖತ್​ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದ್ದು, ಗಣಿಗೆ ನಾಯಕಿಯಾಗಿ ನಿಶ್ವಿಕ ನಾಯ್ದು ನಟಿಸಿದ್ರೆ. ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್​ ಕೂಡ ಒಂದು ಸ್ಪೆಷಲ್​ ರೋಲ್​ ನಿಭಾಯಿಸಿದ್ದಾನೆ. ಚಿತ್ರದ ಶೂಟಿಂಗ್​ ಈಗಾಗಲೇ ಬಹುತೇಕ ಮುಗಿದಿದ್ದು, ನಿರ್ದೇಶಕ ಸುನಿ ಪೋಸ್ಟ್​ ಪ್ರೊಡಕ್ಷನ್​ ವರ್ಕ್​ನಲ್ಲಿ ಬ್ಯುಸಿಯಾಗಿದ್ದು, ಗಣೇಶ ಹಬ್ಬಕ್ಕೆ ಗಣಿಯ ಅಭಿಮಾನಿಗಳಿಗೆ ಸ್ಪೆಷಲ್​ ಗಿಫ್ಟ್​ ಕೊಡ್ತಾರ ಕಾದು ನೋಡ ಬೇಕು.

 

Source: newsfirstlive.com Source link