ಮೊಬೈಲ್ ಕದ್ದವನು ಮತ್ತೆ ಸಿಕ್ಕಾಗ ಕಪಾಳಮೋಕ್ಷ ಮಾಡಿದ ಮಹಿಳೆ

ಮೊಬೈಲ್ ಕದ್ದವನು ಮತ್ತೆ ಸಿಕ್ಕಾಗ ಕಪಾಳಮೋಕ್ಷ ಮಾಡಿದ ಮಹಿಳೆ

ಗದಗ: ಎರಡು ದಿನಗಳ ಹಿಂದೆ ಮೊಬೈಲ್ ಕದ್ದೊಯ್ದಿದ್ದ ಕಳ್ಳ ಮತ್ತೆ ಸಿಕ್ಕಾಗ ಮೊಬೈಲ್ ಕಳೆದುಕೊಂಡ ಮಹಿಳೆ ಕಳ್ಳನಿಗೆ ಕಪಾಳಮೋಕ್ಷ ಮಾಡಿದ ಘಟನೆ ಗದಗದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಕಲಾಮಂದಿರ ರೋಡ್​ನಲ್ಲಿ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಹೋಟೆಲ್ ಯಜಮಾನಿ ಬಳಿ ಮಾತನಾಡಲು ಮೊಬೈಲ್ ಇಸ್ಕೊಂಡಿದ್ದ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದನಂತೆ. ಇಂದು ಮೊಬೈಲ್ ಅಂಗಡಿ ಬಳಿ ಕಳ್ಳ ದಿಢೀರ್ ಪ್ರತ್ಯಕ್ಷವಾಗಿದ್ದಾನೆ. ಈ ವೇಳೆ ಆತನನ್ನ ಮಹಿಳೆ ಗುರುತುಹಚ್ಚಿ ಕಪಾಳಕ್ಕೆ ಬಾರಿಸಿದ್ದಾಳೆ.

ಇನ್ನು ಕಳ್ಳ ಮೊಬೈಲ್ ಅಷ್ಟೇ ಅಲ್ಲದೆ ಬೈಕ್​ಗಳನ್ನೂ ಕೂಡ ಕದಿಯುತ್ತಿದ್ದ ಎನ್ನಲಾಗಿದೆ, ಸ್ಥಳೀಯರು ಮೊಬೈಲ್ ಕಳ್ಳನನ್ನ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Source: newsfirstlive.com Source link