‘ನನ್ನ ಮದುವೆಯಾಗು ನಿನ್ನ ಗಂಡನಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ’ ಎಂದು ವಕೀಲೆಯ ಬೆನ್ನುಬಿದ್ದ ವ್ಯಕ್ತಿ

‘ನನ್ನ ಮದುವೆಯಾಗು ನಿನ್ನ ಗಂಡನಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ’ ಎಂದು ವಕೀಲೆಯ ಬೆನ್ನುಬಿದ್ದ ವ್ಯಕ್ತಿ

ಬೆಂಗಳೂರು: ನನ್ನ ಮದುವೆಯಾಗು.. ನಿನ್ನ ಗಂಡನಿಗಿಂತ ಹೆಚ್ಚಾಗಿ ನಿನ್ನನ್ನ ಚೆನ್ನಾಗಿ ನೋಡಿಕೊಳ್ತೇನೆ ಅಂತ ವಕೀಲೆಗೆ ಹಿಂದೆ ಬಿದ್ದು ಟಾರ್ಚರ್ ನೀಡಿದ ವ್ಯಕ್ತಿಯ ವಿರುದ್ಧ ವಕೀಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

2019 ರಲ್ಲಿ ಫಿಲ್&ಚಿಲ್ ರೆಸ್ಟೋರೆಂಟ್​ಗೆ ವಕೀಲೆ ಭೇಟಿ ನೀಡಿದ್ದರಂತೆ.. ಈ ವೇಳೆ ಪ್ರವೀಣ್ ಕರಮಡ್ಡಿ ಎಂಬಾತ ಆ ರೆಸ್ಟೋರೆಂಟ್​​ನಲ್ಲಿ ಕೆಲಸ ಮಾಡ್ತಿದ್ದ.. ತನಗೆ ಯಾವುದೋ ಕೇಸ್​​ನಲ್ಲಿ ಸಲಹೆ ಬೇಕು ಎಂದು ವಕೀಲೆಯ ನಂಬರ್​ ತೆಗೆದುಕೊಂಡಿದ್ದನಂತೆ. ನಂಬರ್ ಸಿಕ್ಕ ಕೂಡಲೇ ಬೇರೆ ಬೇರೆ ನಂಬರ್​ನಿಂದ ವಕೀಲೆಗೆ ಕರೆ ಮಾಡೋದು.. ಮಧ್ಯರಾತ್ರಿ ಕರೆ ಮಾಡಿ ಅಸಭ್ಯವಾಗಿ ವರ್ತಿಸೋದು ಮಾಡ್ತಿದ್ದನಂತೆ. ಅಲ್ಲದೇ ತನ್ನನ್ನ ಮದುವೆಯಾಗುವಂತೆ.. ಮದುವೆಯಾಗದಿದ್ರೆ ಗಂಡನನ್ನ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದನಂತೆ.
ಎಷ್ಟು ಬಾರಿ ಹೇಳಿದರೂ ಪದೇ ಪದೇ ಮದುವೆಯಾಗು ಅಂತ ಟಾರ್ಚರ್ ಮಾಡ್ತಿದ್ದಾನೆ ಎಂದು ವಕೀಲೆ ಆರೋಪಿಸಿದ್ದಾರೆ. ಸದ್ಯ ಪ್ರವೀಣ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Source: newsfirstlive.com Source link