ಟೂತ್ ಪೇಸ್ಟ್, ಪೇಪರ್ ಬಾಕ್ಸ್​ನಲ್ಲಿ ಡ್ರಗ್ಸ್​​ ತಂದಿದ್ದ ಪೆಡ್ಲರ್​ನ ಹೆಡೆಮುರಿ ಕಟ್ಟಿದ ಸಿಸಿಬಿ

ಟೂತ್ ಪೇಸ್ಟ್, ಪೇಪರ್ ಬಾಕ್ಸ್​ನಲ್ಲಿ ಡ್ರಗ್ಸ್​​ ತಂದಿದ್ದ ಪೆಡ್ಲರ್​ನ ಹೆಡೆಮುರಿ ಕಟ್ಟಿದ ಸಿಸಿಬಿ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮಾದಕ ವಸ್ತುಗಳ ಹಾವಳಿ ಜೋರಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಐ.ಟಿ ಉದ್ಯೋಗಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಆರೋಪದಡಿಯಲ್ಲಿ ವಿದೇಶಿ ಡ್ರಗ್​ ಪೆಡ್ಲರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಡ್ರಗ್​ ಮಾರಾಟದಲ್ಲಿ ತೊಡಗಿದ್ದ ಯುವತಿ ಸೇರಿ ಇಬ್ಬರು ಡ್ರಗ್​ ಪೆಡ್ಲರ್​ಗಳ ಬಂಧನ

blank

ಟೂರಿಸ್ಟ್ ವೀಸಾ ಅಡಿ ಬೆಂಗಳೂರಿಗೆ ಬಂದಿದ್ದ ಆರೋಪಿ ವಿದ್ಯಾರ್ಥಿಗಳಿಗೆ ಮತ್ತು ಐ.ಟಿ ಉದ್ಯೋಗಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಎನ್ನಲಾಗಿದ್ದು, ಕೋಲ್ಗೆಟ್ ಟೂತ್ ಪೇಸ್ಟ್, ಪೇಪರ್ ಬಾಕ್ಸ್, ಫಿಯಾಮಾ ಜೆಲ್ ಕ್ರೀಮ್, ಬಾಟೆಕ್ ನಲ್ಲಿ ಡ್ರಗ್ಸ್ ತಂದಿದ್ದ ಎನ್ನಲಾಗಿದೆ. ಬಾಣಸವಾಡಿಯಲ್ಲಿರೋ ಆರೋಪಿ‌ ಮನೆ ಮೇಲೆ ದಾಳಿ‌ ನಡೆಸಿದ ಸಿಸಿಬಿ ಬಂಧಿತನಿಂದ 1ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 500 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 400 ಗ್ರಾಂ ಎಂಡಿಎಂಎ ಎಕ್ಸ್ಟೆಸಿ, ಸೇರಿದಂತೆ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

Source: newsfirstlive.com Source link