‘ನಾನು ಹೋರಾಟ ಮಾಡಿ ಜೈಲಿಗೆ ಹೋದವನು, ಭ್ರಷ್ಟಾಚಾರದಿಂದಲ್ಲ’- ಸಿ.ಟಿ ಹೀಗೆ ಟಾಂಗ್​ ಯಾರಿಗೆ?

‘ನಾನು ಹೋರಾಟ ಮಾಡಿ ಜೈಲಿಗೆ ಹೋದವನು, ಭ್ರಷ್ಟಾಚಾರದಿಂದಲ್ಲ’- ಸಿ.ಟಿ ಹೀಗೆ ಟಾಂಗ್​ ಯಾರಿಗೆ?

ಚಿಕ್ಕಮಗಳೂರು: ನಾನು ಭಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಸಿ.ಟಿ ರವಿ, ನನ್ನ ಮೇಲು ಸಾಕಷ್ಟು ಕೇಸುಗಳಿವೆ. ನಾನು ಹೋರಾಟ ಮಾಡಿ ಜೈಲಿಗೆ ಹೋದವನು, ಭ್ರಷ್ಟಾಚಾರದಿಂದಲ್ಲ ಎಂದು ಕಾಂಗ್ರೆಸ್​​ ನಾಯಕರಿಗೆ ಪರೋಕ್ಷ ತಿರುಗೇಟು ನೀಡಿದರು.

ನಾನಂತೂ ಕೊತ್ವಾಲ್ ರಾಮಚಂದ್ರ ಶಿಷ್ಯನಲ್ಲ. ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್​​ನಲ್ಲಿ ಓದುತ್ತಿದ್ದೆ. ಯಾವುದೋ ಒಂದು ಪುಸ್ತಕದಲ್ಲಿ ಯಾರು ಯಾರೋ ಶಿಷ್ಯರು ಎಂದು ಉಲ್ಲೇಖ ಮಾಡಿದ್ದರು ಎಂದರು.

ಇದೇ ವೇಳೆ ರಾಜ್ಯದ ಎಲ್ಲಾ ಕಡೆ ಗಣೇಶನ ಉತ್ಸವ ವಿಜೃಂಭಣೆಯಿಂದ ಬೇಕು ಎಂದು ನನ್ನಾಸೆ. ಕೊರೋನಾ ಕಡಿಮೆ ಇರೋ ಕಡೆ ಅವಕಾಶ ನೀಡಲಿ. ಕೊರೋನಾ ಜಾಸ್ತಿ ಇರೋ ಕಡೆ ನಿರ್ಬಂಧ ಹಾಕಲಿ. ಸಿಎಂ ಜತೆಗೆ ನನ್ನ ಅಭಿಪ್ರಾಯ ಇದೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

Source: newsfirstlive.com Source link