ಬೆಂಗಳೂರಿನ ಶೇ.70ರಷ್ಟು ಜನ ಕೊರೊನಾದಿಂದ ಸೇಫ್!​ ಹೇಗೆ..?

ಬೆಂಗಳೂರಿನ ಶೇ.70ರಷ್ಟು ಜನ ಕೊರೊನಾದಿಂದ ಸೇಫ್!​ ಹೇಗೆ..?

ಬೆಂಗಳೂರು: ಕೊರೊನಾ 3ನೇ ಅಲೆ ನಡುವೆಯೇ ಸಿಲಿಕಾನ್​ ಸಿಟಿ ಮಂದಿಗೆ ಗುಡ್​ನ್ಯೂಸ್​ ಲಭ್ಯವಾಗಿದ್ದು, ಬೆಂಗಳೂರಿನ ಶೇ.70ರಷ್ಟು ಮಂದಿ ಸದ್ಯ ಕೊರೊನಾದಿಂದ ಸೇಫ್​ ಎನ್ನಲಾಗ್ತಿದೆ. ಹೌದು ಸೇರೋ ಸರ್ವೇ ವೇಳೆ ಈ ಸಾಮಾಧಾನದ ಸಂಗತಿ ಬೆಳಕಿಗೆ ಬಂದಿದ್ದು, ಸೆರೋ ಸರ್ವೇಯ ಪ್ರಾಥಮಿಕ ವರದಿಯಿಂದ ಈ ಫಲಿತಾಂಶ ಬಂದಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್​ ಹೇಳಿದ್ದಾರೆ.

ಏನಿದು ಸೆರೋ ಸರ್ವೇ?
ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಿ ಸಾಕಷ್ಟು ದಿನಗಳೆ ಕಳೆದಿವೆ. ಚರ್ಚೆಗಳ ಪ್ರಕಾರ ಲಸಿಕೆ ಪಡೆದವರಿಗೆ ಸೋಂಕು ತಗಲುವುದಿಲ್ಲ ಅಥವಾ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆ ಎನ್ನಲಾಗಿತ್ತು. ಆದರೆ ಕೆಲ ತಿಂಗಳಗಳ ಹಿಂದೆ ಬಿಬಿಎಂಪಿ ಈ ಸರ್ವೇಯನ್ನು ಆರಂಭಿಸಿ 2000 ನಮೂನೆಗಳನ್ನು ಕಲೆಕ್ಟ್​ ಮಾಡಿದೆ. ಅದರಲ್ಲಿ 1000 ಲಸಿಕೆ ಪಡೆದವರ ಮತ್ತು 1000 ಲಸಿಕೆ ಪಡಿಯದೇ ಇದ್ದವರ ಸ್ಯಾಂಪಲ್​ಗಳನ್ನು ಕಲೆಕ್ಟ್​ ಮಾಡಿದೆ. ಇದರಲ್ಲಿ 1800 ಸ್ಯಾಂಪಲ್​ಗಳು ಬೆಂಗಳೂರಿಗರ ಸ್ಯಾಂಪಲ್​ ಕಲೆಕ್ಟ್​ ಮಾಡಲಾಗಿತ್ತು. ಸದ್ಯ ಸರ್ವೇಯ ಪ್ರಾಥಮಿಕ ವರದಿಯ ಪ್ರಕಾರ ಬೆಂಗಳೂರಿಗರ 1800 ಸ್ಯಾಂಪಲ್​ಗಳ ಪೈಕಿ 1400 ಸ್ಯಾಂಪಲ್​ಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡು ಬಂದಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಡಾ.ರಂದೀಪ್​ ತಿಳಿಸಿದ್ದು ಸಿಲಿಕಾನ್​ ಸಿಟಿಯ ಶೇ.70ರಷ್ಟು ಮಂದಿ ಸದ್ಯ ಕೊರೊನಾದಿಂದ ಸೇಫ್​ ಆದಂತಿದೆ.

ಇದನ್ನೂ ಓದಿ: 20 ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜನಿಯರ್ ಕೊನೆಗೂ ಎತ್ತಂಗಡಿ

Source: newsfirstlive.com Source link