ಬೆಂಗಳೂರು ವಕೀಲರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಬೆಂಗಳೂರು ವಕೀಲರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಬೆಂಗಳೂರು: ಸಿವಿಲ್ ಕೋರ್ಟ್ ಆವರಣದಲ್ಲಿರುವ ಬೆಂಗಳೂರು ವಕೀಲರ ಸಂಘಕ್ಕೆ ತಾತ್ಕಾಲಿಕವಾಗಿ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶದ ಪ್ರಕಾರ ಸಹಕಾರ ಇಲಾಖೆ ಪದನಿಮಿತ್ತ ಜಂಟಿ ಕಾರ್ಯದರ್ಶಿ ಎಂ. ವೆಂಕಟಸ್ವಾಮಿ ಅವರು, ಬೆಂಗಳೂರು ಜಿಲ್ಲಾಧಿಕಾರಿಯನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬೈಲಾ ಪ್ರಕಾರ ಆಡಳಿತ ಮಂಡಳಿ ಅಧಿಕಾರ ಅವಧಿಯು ಮುಕ್ತಾಯವಾಗಿದ್ದು, ಆದರೆ ಕೋವಿಡ್ ಹಿನ್ನಲೆ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆ ಆಡಳಿತಾಧಿಕಾರಿ ನೇಮಕ ಮಾಡಲು ಅನೇಕ ವಕೀಲರಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಕೆಯಾಗಿವೆ.

ಸದ್ಯ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ -1960, ಸೆಕ್ಷನ್ 27 ಎ ಅನ್ವಯ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಈ ಅಧಿಕಾರವು 6 ತಿಂಗಳ ಅವಧಿಗೆ ಸೀಮಿತವಾಗಿರಲಿದೆ. ಪುನಃ ಚುನಾವಣೆ ನಡೆದು, ಹೊಸ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರತನಕ ಜಾರಿಯಲ್ಲಿರಲಿದೆ.

ಆಡಳಿತಾಧಿಕಾರಿ ಚಾರ್ಜ್ ತಗೊಂಡು ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಸಬೇಕು. ಸಂಘದ ಆಡಳಿತ ಮಂಡಳಿಗೆ ಅದಷ್ಟೂ ಬೇಗ ಚುನಾವಣೆ ನಡೆಸಬೇಕು. ಅಧಿಕಾರಕ್ಕೆ ಬಂದ ಮಂಡಳಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಅಂತಾ ಸಹಕಾರ ಇಲಾಖೆ ಪದನಿಮಿತ್ತ ಜಂಟಿ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.

blank

blank

blank

Source: newsfirstlive.com Source link