ಫುಡ್​​ಕಿಟ್​ನಲ್ಲಿದ್ದ ರವೆಯಲ್ಲಿ ಹುಳು ಪತ್ತೆ; ರಸ್ತೆ ಮಧ್ಯೆಯೇ ತಹಶೀಲ್ದಾರ್​​ಗೆ ಬೆವರಿಳಿಸಿದ ಮಹಿಳೆ

ಫುಡ್​​ಕಿಟ್​ನಲ್ಲಿದ್ದ ರವೆಯಲ್ಲಿ ಹುಳು ಪತ್ತೆ; ರಸ್ತೆ ಮಧ್ಯೆಯೇ ತಹಶೀಲ್ದಾರ್​​ಗೆ ಬೆವರಿಳಿಸಿದ ಮಹಿಳೆ

ದಾವಣಗೆರೆ: ಜಿಲ್ಲೆಯ ಹೊನ್ನಳಿಯಲ್ಲಿ ಇಂದು ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ನೀಡಲಾಗ್ತಾ ಇತ್ತು.. ಕಾರ್ಮಿಕರಿಗೆ 7 ಸಾವಿರ ಫುಡ್ ಕಿಟ್ ಕಾರ್ಮಿಕರಿಗೆ ವಿತರಣೆ ಮಾಡಲಾಗಿತ್ತು.

ಈ ವೇಳೆ ಫುಡ್​ ಕಿಟ್​ನಲ್ಲಿ ಏನಿದೆ ಎಂದು ಕಾರ್ಮಿಕ ಮಹಿಳೆ ಪರಿಶೀಲಿಸಿದಾಗ ರವೆಯಲ್ಲಿ ಹುಳು ಪತ್ತೆಯಾಗಿದೆ. ಇದಕ್ಕೆ ಮಹಿಳೆ ಹೊನ್ನಾಳಿಯ ತಹಶೀಲ್ದಾರರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ರಸ್ತೆಯಲ್ಲೇ ಹೊನ್ನಾಳಿ ತಹಶೀಲ್ದಾರ್​ನ್ನ ತರಾಟೆಗೆ ತೆಗೆದುಕೊಂಡ ಕಾರ್ಮಿಕ ಮಹಿಳೆ ರವೆಯಲ್ಲಿ ಹುಳು ಆಗಿವೆ ನಿಮಗಾದ್ರೂ ನೋಡಿ ಕೊಡಬೇಕು ಅನಿಸಲಿಲ್ವಾ? ಇಂತಹ ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡಿ ಪ್ರಚಾರ ಪಡೆಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇದರಿಂದ ಹೊನ್ನಾಳಿ ತಹಶೀಲ್ದಾರ್ ಬಸವನಗೌಡ ಕೋಟುರ ಕ್ಷಣಕಾಲ ತಬ್ಬಿಬ್ಬಾಗಿದ್ದಾರೆ.

Source: newsfirstlive.com Source link