ಸ್ಟೈಲಿಶ್ ಸ್ಟಾರ್ ಜೊತೆ ಜಬರ್ದಸ್ತ್ ಡ್ಯಾನ್ಸ್ ಮಾಡೋಕೆ ವರ್ಕೌಟ್ ಮಾಡ್ತಿದ್ದಾರೆ ರಶ್ಮಿಕಾ

ಸ್ಟೈಲಿಶ್ ಸ್ಟಾರ್ ಜೊತೆ ಜಬರ್ದಸ್ತ್ ಡ್ಯಾನ್ಸ್ ಮಾಡೋಕೆ ವರ್ಕೌಟ್ ಮಾಡ್ತಿದ್ದಾರೆ ರಶ್ಮಿಕಾ

ಪುಷ್ಪ ಟಾಲಿವುಡ್​ ಅಷ್ಟೇ ಅಲ್ಲ ಸ್ಯಾಂಡಲ್​ವುಡ್​ನಲ್ಲಿಯೂ ಸದ್ದು ಮಾಡ್ತಿರೋ ಪ್ಯಾನ್​ ಇಂಡಿಯಾ ಸಿನಿಮಾ.. ಪುಷ್ಪ ಚಿತ್ರಕ್ಕೆ ಸುಕುಮಾರ್ ಆಕ್ಷನ್​ ಕಟ್​ ಹೇಳ್ತಿದ್ದಾರೆ ಅಂದ್ರೆ ಒಂದೊಳ್ಳೆ ಸರಕಿನೊಂದಿಗೆ ಅಖಾಡಕ್ಕೆ ಇಳ್ದಿರ್ತಾರೆ.. ಇನ್ನು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಹೀರೋ ಅಂದ್ಮೇಲೆ ಸಖತ್​ ಡ್ಯಾನ್ಸ್​ ಇದ್ದೇ ಇರುತ್ತೆ.. ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ.. ಸ್ಟೈಲಿಶ್​ ಸ್ಟಾರ್​ ಜೊತೆ ನಟಿಸ್ತಾರೆ ಅಂದ್ಮೇಲೆ ರಶ್ಮಿಕಾ ಆಕ್ಟಿಂಗ್​ ಜೊತೆ ಜಬರ್ದ್ದಸ್ತ್ ಡ್ಯಾನ್ಸ್​ ಮಾಡ್ಲೇ ಬೇಕಲ್ವಾ.. ಅದಕ್ಕೆ ಕೊಡಗಿನ ಕುವರಿ ಏನ್​ ಮಾಡಿದ್ದಾರೆ ಗೊತ್ತಾ..?

blank

ಕರ್ನಾಟಕ ಕ್ರಶ್ ರಶ್ಮಿಕಾ ತಮ್ಮ ಲುಕ್​ನಿಂದಲೇ ಕಿಕ್​ ಏರಿಸಿ ಪಡ್ಡೆಗಳ ರಾಣಿಯಾಗಿದ್ದಾರೆ.. ಕರ್ನಾಟಕ ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯಗಳಲ್ಲೂ ರಶ್ಮಿಕಾ ಹವಾ ಬಲು ಜೋರಾಗಿದೆ.. ಇತ್ತೀಚೆಗಷ್ಟೇ ಹಿಂದಿಯ ಮೊದಲ ಸಿನಿಮಾ ಮಿಷನ್​ ಮಜ್ನು ಸಿನಿಮಾ ಕಂಪ್ಲೀಟ್​ ಮಾಡಿ ಬಂದಿರುವ ರಶ್ಮಿಕಾ. ಈಗ ಟಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಪ್ಯಾನ್​ ಇಂಡಿಯಾ ಸಿನಿಮಾಗಾಗಿ ಸಖತ್​ ಆಗಿ ಬೆವರು ಸುರಿಸ್ತಿದ್ದಾರೆ..

ಅಯ್ಯೋ ಇದ್ಯಾಕಪ್ಪ ಬಬ್ಲಿ ಗರ್ಲ್ ರಶ್ಮಿಕಾ ಪುಷ್ಪ ಚಿತ್ರಕ್ಕಾಗಿ ಬೆವರು ಸುರಿಸ್ತಿದ್ದಾರೆ.. ಮಾಸ್​ ಚಿತ್ರ ಪುಷ್ಟ ಸಿನಿಮಾದಲ್ಲಿ ಆಕ್ಷನ್​ ಸೀನ್​ ನಲ್ಲಿ ಕಾಣಿಸ್ತಾರ ಅಂತ ಕನ್ಪ್ಯೂಸ್​ ಆಗಬೇಡಿ.. ಯಾಕಂದ್ರೆ ರಶ್ಮಿಕಾ ಬೆವರು ಸುರಿಸ್ತಿರೋದು ಆಕ್ಷನ್​ ಸೀನ್​ಗಲ್ಲ, ಬದಲಿಗೆ ಪುಷ್ಪ ಚಿತ್ರದ ಹಾಡಿನಲ್ಲಿ ಸ್ಟೈಲಿಶ್​ ಡ್ಯಾನ್ಸರ್ ಅಲ್ಲು ಅರ್ಜುನ್​ ಜೊತೆ ಕುಣಿಯೋದಕ್ಕೆ..

blank

ಯೆಸ್​.. ಅಲ್ಲು ಅರ್ಜುನ್ ಸಖತ್​ ಆಗಿ ಡ್ಯಾನ್ಸ್​ ಮಾಡ್ತಾರೆ.. ಅಲ್ಲು ಜೊತೆ ಕಾಂಪಿಟ್​ ಮಾಡಬೇಕಾದ್ರೆ ಅದಕ್ಕೆ ಸಖತ್​ ತಯಾರಿ ಮಾಡ್ಲೇ ಬೇಕು. ಹೀಗಾಗಿ ಪುಷ್ಪ ಚಿತ್ರದ ಹಾಡಿಗಾಗಿ ರಶ್ಮಿಕಾ ಸಖತ್ ರಿಹರ್ಸಲ್​ ಮಾಡ್ತಿದ್ದಾರೆ. ಅಲ್ಲದೆ ಈ ವಿಷಯವನ್ನು ರಿಹರ್ಸಲ್​ ಮಾಡ್ತಿರುವ ಪೋಟೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ರಿಹರ್ಸಲ್​ ವಿಷಯವನ್ನು ತಿಳಿಸಿದ್ದಾರೆ..

ಇನ್ನು ಈ ಹಾಡಿನ ಚಿತ್ರೀಕರಣ ಗಣೇಶ ಹಬ್ಬದ ನಂತ್ರ ಶುರುವಾಗಲಿದ್ದು, ಈ ಹಾಡು ರೊಮ್ಯಾನ್ಸ್​ ಸಾಂಗ್ ಇಲ್ಲ ಟಪಾಂಗುಚ್ಚಿ ಸಾಂಗಾ.. ಅನ್ನೋದರ ಬಗ್ಗೆ ಚಿತ್ರತಂಡವಾಗಲೀ ರಶ್ಮಿಕಾ ಆಗಲಿ ಸುಳಿವು ಬಿಟ್ಟು ಕೊಟ್ಟಿಲ್ಲ.

 

Source: newsfirstlive.com Source link