ಪ್ಯಾರಾ ಒಲಿಂಪಿಕ್ಸ್​ನಲ್ಲಿ ಭಾರತದ ಮುಡಿಗೆ 19 ಪದಕ; ಹೇಗಿತ್ತು ರಿಯಲ್ ಹೀರೋಗಳ ಪದಕ ಬೇಟೆ..?

ಪ್ಯಾರಾ ಒಲಿಂಪಿಕ್ಸ್​ನಲ್ಲಿ ಭಾರತದ ಮುಡಿಗೆ 19 ಪದಕ; ಹೇಗಿತ್ತು ರಿಯಲ್ ಹೀರೋಗಳ ಪದಕ ಬೇಟೆ..?

‘‘ಮುಂದುವರೆಯೋಣ ನಮಗೆ ರೆಕ್ಕೆಗಳಿವೆ’’ ಯೆಸ್​.. ಇದು ಈ ಬಾರಿಯ ಪ್ಯಾರಾಂಪಿಕ್ಸ್​​ನ ಧ್ಯೇಯ ವಾಕ್ಯ. ಆಗಸ್ಟ್​ 23 ರಂದು ಪ್ಯಾರಾ ಕ್ರೀಡಾಪಟುಗಳು “ಮುಂದುವರೆಯೋಣ ನಮಗೆ ರೆಕ್ಕೆಗಳಿವೆ ಅನ್ನೋ ಧ್ಯೇಯ ವಾಕ್ಯಗಳೊಂದಿಗೆ ಟೋಕಿಯೋ ಅಂಗಳದಲ್ಲಿ ಹೆಜ್ಜೆ ಹಾಕಿದಾಗ ಇಡೀ ಜಗತ್ತೆ ಅವರತ್ತ ಕುತೂಹಲದ ಕಣ್ಣಿನಿಂದ ನೋಡಿತ್ತು. ಮನುಕುಲದಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ ಎನ್ನುವ ಸಂದೇಶವನ್ನ ಜಗತ್ತಿಗೆ ಸಾರುವ ಐತಿಹಾಸಿಕ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್​​ ಕ್ರೀಡೆಯಲ್ಲಿ ಭಾರತೀಯ ಅನರ್ಘ್ಯ ರತ್ನಗಳು 19 ಪದಕಳಿಗೆ ಹೊಳಪು ತುಂಬಿದ್ದಾರೆ.

ಹೊಸ ಚೈತನ್ಯದೊಂದಿಗೆ ಟೋಕಿಯೋ ಅಂಗಳಲ್ಲಿ ಚಿನ್ನ ಬೆಳ್ಳಿಯ ಹೆಜ್ಜೆ ಹಾಕಿದ್ದಾರೆ. ಕನಸುಗಳ ಮೂಟೆ ಹೊತ್ತು ಟೋಕಿಯೋಗೆ ತೆರಳಿದ್ದ ಭಾರತೀಯ ಅಥ್ಲೆಟಿಕ್​ಗಳು ನಿರಾಸೆ ಮೂಡಿಸಲಿಲ್ಲ. ಪದಕಗಳನ್ನ ಗೊಂಚಲನ್ನ ಬೇಟೆಯಾಡುವ ಮೂಲಕ ತಮ್ಮ ದಾಖಲೆಗಳನ್ನ ಬಂಗಾರದ ಹಾಳೆಯಲ್ಲಿ ಹಚ್ಚೊತ್ತಿದ್ದಾರೆ.

blank
ಜೀವನ, ನಮಗೆ ಸವಾಲೊಡ್ಡದಿದ್ರೆ ಅದು ಜೀವನವನೆ ಅಲ್ಲ, ಹಾಗಂತ ಜೀವನದ ಎಲ್ಲಾ ಸವಾಲುಗಳನ್ನ ಗೆಲ್ಲೋಕೆ ಆಗಲ್ಲ. ಆದ್ರೆ ಇವರೆಲ್ಲ ಜೀವನದ ಪ್ರತಿ ಹೆಜ್ಜೆಗಳಲ್ಲೂ ಸವಾಲನ್ನ ಎದುರಿಸಿದವರು. ಸವಾಲುಗಳ ಸರಮಾಲೆಗಳನ್ನ ಎದುರಿಸಿ ಸಾಧನೆಗಳ ಶಿಖರ ಕಟ್ಟಿದ್ದ ಸಾಧಕರು. ಎಸ್ ಜಪಾನ್​​ನ ಟೋಕಿಯೋದಲ್ಲಿ ನಡೆದ ಈ ಬಾರಿಯ ಪ್ಯಾರಾಲಿಂಪಿಕ್ಸ್​​ನಲ್ಲಿ ಭಾರತದ ಪ್ಯಾರಾ ಅಥ್ಲೀಟಿಕ್​​ಗಳು, ಬರೋಬ್ಬರಿ 19ಕ್ಕೂ ಹೆಚ್ಚು ಪದಕಗಳಿಗೆ ಕೊರೊಳೊಡ್ಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಪ್ಯಾರಾಲಿಂಪಿಕ್ಸ್​​ನಲ್ಲಿ ಭಾರತೀಯರಿಂದ 19 ಪದಕಗಳ ಬೇಟೆ
ಪದಕಗಳ ಬೇಟೆಯ ವೇಗಕ್ಕೆ ಹಳೆಯ ದಾಖಲೆಗಳೆಲ್ಲಾ ಉಡೀಸ್

ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪ್ಯಾರಾ ಅಥ್ಲಿಟಿಕ್​ಗಳು ವಿಶಿಷ್ಠ ಸಾಧನೆ ಮಾಡಿದ್ದಾರೆ. ಭಾನುವಾರವು ಪದಕಗಳ ಬೇಟೆ ಮುಂದುವರೆಸಿದ ಅಥ್ಲೆಟಿಕ್​​ಗಳು ಹೊಸ ಇತಿಹಾಸ ಸೃಷ್ಟಿಸಿ ಬಿಟ್ಟಿದ್ದಾರೆ. ಪ್ಯಾರಾಲಿಂಪಿಕ್ಸ್​ ಇತಿಹಾದಲ್ಲಿಯೇ ಭಾರತೀಯ ಕ್ರೀಡಾಪಟುಗಳು ಬರೋಬ್ಬರಿ 5 ಚಿನ್ನವನ್ನ ಬೇಟೆಯಾಡುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. 2016 ರಲ್ಲಿ ಎರಡು ಚಿನ್ನ ಗೆದಿದ್ದೇ ಇದುವರೆಗಿನ ಐತಿಹಾಸಿಕ ದಾಖಲೆಯಾಗಿತ್ತು. ಆದ್ರೆ ಈ ಬಾರಿ 5 ಬಂಗಾರವನ್ನ ಬೇಟೆಯಾಡುವ ಮೂಲಕ ಹೊಸ ಹಿಸ್ಟ್ರಿ ಕ್ರಿಯೇಟ್ ಮಾಡಿದ್ದಾರೆ.

ಭಾವಿನಾಬೆನ್​​ ಬೆಳ್ಳಿ ಬೇಟೆಯ ಮೂಲಕ ಖಾತೆ ಆರಂಭ
ಆಗಸ್ಟ್​ 29 ರಂದು ಪ್ಯಾರಾಲಿಂಪಿಕ್ಸ್ ಟೇಬಲ್ ಟೆನ್ನಿಸ್​ನಲ್ಲಿ ಹೆಮ್ಮೆಯ ಕ್ರೀಡಾಪಟು ಭಾವಿನಾಬೆನ್​ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಖಾತೆ ಆರಂಭವಾಯಿತು. ಈ ಮೂಲಕ ಭಾವಿನಾಬೆನ್​​,ಪ್ಯಾರಾಲಿಂಪಿಕ್ಸ್​ ಟೇಬಲ್​ ಟೆನ್ನಿಸ್​ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತದ ಮಹಿಳಾ ಕ್ರೀಡಾ ಪಟು ಅನ್ನೋ ಹಿರಿಮೆಗೆ ಪಾತ್ರರಾದ್ರು. ಭಾವಿನಾಬೆನ್ ಬೆಳ್ಳಿಯ ಬೇಟೆಯೊಂದಿಗೆ ಶುರುವಾದ ಪದಕದ ಬೇಟೆ ನಂತರ 5 ಬಂಗಾರವನ್ನ ಕೂಡ ತಮ್ಮ ತೆಕ್ಕೆಗೆ ಹಾಕಿಕೊಂಡಿದೆ.

Image
ಭಾವಿನಾಬೆನ್

ನಿಶಾದ್ ‘ಹೈ’ ಜಂಪ್​ಗೆ ಒಲಿದ ಸಿಲ್ವರ್ ಮೆಡಲ್​​
ಡಿಸ್ಕಸ್​​ ಥ್ರೋನಲ್ಲಿ ಭಾರತಕ್ಕೆ ಮೊದಲ ಕಂಚು

ಆಗಸ್ಟ್ 29 ರ ಸೂಪರ್​​ ಸಂಡೆಯಂದು ಭಾವಿನಾಬೆನ್​​​ ಮಾತ್ರವಲ್ಲದೇ ನಿಶಾದ್ ಹಾಗೂ ವಿನೋದ್ ಕುಮಾರ್ ಕೂಡ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನ ತಮ್ಮ ಕೊರಳಿಗೆ ಹಾಕಿಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಹುಲ್ಲು ಕತ್ತರಿಸುವ ಯಂತ್ರದಿಂದಾಗಿ ಬಲಗೈಯನ್ನ ಕಳ್ಕೊಂಡಿದ್ದ ನಿಶಾದ್, ಮತ್ತೆ ಕ್ರೀಡಾ ಅಂಗಳಕ್ಕೆ ಬಂದು ಮರಳಿ ಅರಳಿದ ಪ್ರತಿಭೆ. ಇವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.

Image
ನಿಶಾದ್ ಕುಮಾರ್

ಭಾರತದ ಮುಡಿಗೆ ಐದು ಚಿನ್ನದ ಪದಕ
‘ಬಂಗಾರ’ದ ದಾಖಲೆ ಬರೆದ ಅಥ್ಲೆಟಿಕ್​​ಗಳು

ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಭಾರತೀಯ ಆಟಗಾರರು ಸುವರ್ಣ ಅಕ್ಷದಲ್ಲಿ ದಾಖಲಾಗುವಂತಹ ಸಾಧನೆ ಮಾಡಿದ್ದು, ಚಿನ್ನದ ಸಿಹಿ ಉಣಬಡಿಸಿದ್ದಾರೆ. ಮಹಿಳಾ ಶೂಟಿಂಗ್ ವಿಭಾಗದಲ್ಲಿ ಅವನಿ ಲೇಖರಾ ಚಿನ್ನ ಗೆದ್ದರೆ, ಸುಮಿತ್ ಅಂತಿಲ್ ಪುರುಷರ ಜಾವೆಲಿನ್ ಥ್ರೋನಲ್ಲಿ ಕೂಡ ಸ್ವರ್ಣವನ್ನ ಬಾಚಿಕೊಂಡ್ರು. ಪುರುಷರ ಶೂಟಿಂಗ್ ವಿಭಾಗದಲ್ಲಿ ಮನೀಶ್ ನರ್ವಾಲ್ ಕೂಡ ಚಿನ್ನದ ಪದಕವನ್ನ ಕೊರಳಿಗೇರಿಸಿಕೊಂಡಿದ್ರು. ಬ್ಯಾಡ್ಮಿಂಟನ್​ನಲ್ಲೂ ಭಾರತದ ಪ್ರಮೋದ್ ಭಗತ್ ಬಂಗಾರವನ್ನ ಬೇಟೆಯಾಡಿದ್ರು. ಇಂದು ಕೂಡ ಭಾರತದ ಸ್ವರ್ಣದ ಬೇಟೆ ಮುಂದುವರೆದಿದ್ದು, ಪುರುಷರ ಬ್ಯಾಡ್ಮಿಂಟನ್ ಎಸ್​ಹೆಚ್​6 ವಿಭಾಗದಲ್ಲಿ ಕೃಷ್ಣ ನಗರ್ ಗೋಲ್ಡ್​​ ಮೆಡಲ್ ಗೆಲ್ಲುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆ ಮಾಡಿದ್ದಾರೆ.

Image
ಸುಮಿತ್ ಅಂತಿಲ್

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಇಂದಿನ ಫೈನಲ್​​ ಪಂದ್ಯದಲ್ಲಿ ಕೃಷ್ಣ ನಗರ್ ಮೊದಲ ಸೆಟ್​ನಲ್ಲೇ 21-17 ಅಂಕಗಳ ಮುನ್ನಡೆ ಸಾಧಿಸಿದರು. ಎರಡನೇ ಸೆಟ್​ನಲ್ಲಿ ನಿರಾಸೆ ಮೂಡಿಸಿದ್ರೂ, ಅಂತಿಮ ಸೆಟ್​ನಲ್ಲಿ ಮತ್ತೆ ಗ್ರೇಟ್​ ಕಮ್​ ಬಾಕ್ ಮಾಡಿದ್ರೂ. ಕಡೆಯ ಕ್ಷಣದಲ್ಲಿ ಊಹಿಸಲಾಗದ ರೀತಿ ಆಟವಾಡಿದ ಕೃಷ್ಣ 21-17 ಅಂತರದಿಂದ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಪ್ಯಾರಾಲಿಂಪಿಕ್ಸ್​​ನಲ್ಲಿ ಭಾರತದಕ್ಕೆ ಒಟ್ಟು ಎಂಟು ಬೆಳ್ಳಿ ಪದಕ ಕೂಡ ಬಂದಿದೆ. ಮಹಿಳಾ ಟೇಬಲ್ ಟೆನ್ಸಿಸ್​ನಲ್ಲಿ ಭಾವಿನಾ ಪಟೇಲ್, ಪುರುಷರ ಹೈಜಂಪ್ ನಲ್ಲಿ ನಿಶಾದ್ ಕುಮಾರ್, ಡಿಸ್ಕಸ್ ಥ್ರೋ ಯೋಗೇಶ್ ಕಠುನಿಯಾ ಸಿಲ್ವರ್ ಮೆಡಲ್​​ ಬೇಟೆಯಾಡಿದ್ದಾರೆ. ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಜಜಾರಿಯಾ, ಹೈಜಂಪ್​ನಲ್ಲಿ ಮರಿಯಪ್ಪನ್ ತಂಗವೇಲು, ಪ್ರವೀಣ್ ಕುಮಾರ್ ಕೂಡ ಬೆಳ್ಳಿ ಪದಕಗಳನ್ನ ಕೊರಳಿಗೇರಿಸಿಕೊಂಡಿದ್ದಾರೆ. ಇನ್ನೂ ಪುರುಷರ ಶೂಟಿಂಗ್ ಹಾಗೂ ಬ್ಯಾಡ್ಮಿಂಟನ್​​ಲ್ಲೂ ಭಾರತಕ್ಕೆ ಬೆಳ್ಳಿ ಗೆದಿದ್ದು, ಶೂಟಿಂಗ್​ನಲ್ಲಿ ಸಿಂಗರಾಜ್ ಅಧಾನ, ಬ್ಯಾಡ್ಮಿಂಟನ್​ನಲ್ಲಿ, ಸುಹಾಸ್ ಎಲ್ ಯತಿರಾಜ್ ಬೆಳ್ಳಿ ಗೆದ್ದು ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ಮೂಲಕ ಭಾರತ ಒಟ್ಟು 8 ರಜತ ಪದಕಗಳನ್ನ ಗೆದ್ದು ಹೊಸ ಭಾಷ್ಯ ಬರೆದಿದೆ.

blank

6 ಕಂಚುಗಳೊಂದಿಗೆ ಭಾರತ ನೂತನ ದಾಖಲೆ
ಜಾವೆಲಿನ್ ಥ್ರೋ ನಲ್ಲಿ ಸುಂದರ್ ಸಿಂಗ್ ಗುರ್ಜರ್, ಶೂಟಿಂಗ್ ನಲ್ಲಿ ಸಿಂಗರಾಜ್ ಅಧಾನ, ಹೈಜಂಪ್ ನಲ್ಲಿ ಶರದ್ ಕುಮಾರ್, ಮಹಿಳಾ ಶೂಟಿಂಗ್ ಅವನಿ ಲೇಖರ ಕಂಚಿನ ಪಕದಗಳನ್ನ ಕೊರಳಿಗೇರಿಸಿಕೊಂಡಿದ್ದಾರೆ. ಆರ್ಚರಿ ಹರ್ವಿಂದರ್ ಸಿಂಗ್, ಬ್ಯಾಡ್ಮಿಂಟನ್​​ನಲ್ಲಿ ಮನೋಜ್ ಸರ್ಕಾರ್ ಕೂಡ ಟೋಕಿಯೋ ಅಂಗಳದಲ್ಲಿ ದರ್ಬಾರ್ ನಡೆಸಿ, ಕಂಚು ಗೆದ್ದಿದ್ದಾರೆ. ಈ ಮೂಲಕ ಭಾರತದ ಹಿರಿಮೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.
ಅವನಿ ಲೇಖರ ಡಬಲ್ ಧಮಾಕ

Image
ಅವನಿ ಲೇಖ

ಚಿನ್ನ&ಕಂಚು ಬಾಚಿಕೊಂಡ ಲೇಖರ
ಜಪಾನ್​ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್​ನಲ್ಲಿ 19 ವರ್ಷದ ಯುವ ಶೂಟರ್ ಅವನಿ ಲೇಖರ ಎರಡು ಪದಕ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ. 10 ಮೀಟರ್ ಏರ್​ ಲೈಫಲ್ಸ್​​ನಲ್ಲಿ ಸ್ಟ್ಯಾಂಡಿಗ್ ಎಸ್​.ಎಚ್ ವಿಭಾಗದಲ್ಲಿ ಚಿನ್ನ ಹಾಗೂ 50 ಮೀಟರ್ ರೈಫಲ್ಸ್​​ ಎಸ್​.ಎಚ್.1 ವಿಭಾಗದಲ್ಲೂ ಕಂಚು ಗೆದಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನ ಅವನಿ ಲೇಖರ ತಮ್ಮ ಹೆಸರಿಗೆ ಹಚ್ಚೊತ್ತಿದ್ದಾರೆ.

ಪ್ಯಾರಾಲಿಂಪಿಕ್ಸ್​​ನಲ್ಲಿ ಭಾರತ ಒಟ್ಟು 19 ಪದಕಗಳೊಂದಿಗೆ 54ನೇ ಸ್ಥಾನ ಪಡೆದುಕೊಂಡಿದೆ. ಪ್ಯಾರಾಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಗೆ ಪ್ರಶಂಸೆಗಳ ಸುರಿಮಳೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಕರೆ ಮಾಡಿ ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪದಕಗಳು ಎಂಬ ದಾರದಲ್ಲಿ ದಾಖಲೆಗಳನ್ನ ಮಲ್ಲಿಗಯಂತೆ ಪೋಣಿಸಿಕೊಂಡಿರುವ ಇವರ ಸಾಹಸಗಾಥೆ ದೇಶದ ಮುಂದಿನ ಪೀಳಿಗೆಯ ಯಶಸ್ವಿ ಅಧ್ಯಾಯಕ್ಕೆ ಸೊಗಸಾದ ಮುನ್ನುಡಿ ಬರೆಯಲಿದೆ. ಜೀವನದಲ್ಲಿ ಹಲವಾರು ಎಡರು ತೊಡರುಗಳನ್ನ ಗೆದ್ದು ಬಂದಿರುವ ಈ ವಿಕಲಚೇತನ ಕ್ರೀಡಾಪಟುಗಳು ಇದೀಗ ದೇಶದ ಹಿರಿಮೆಯನ್ನ ಕೂಡ ಹೆಚ್ಚಿಸಿದ್ದಾರೆ.

ಪ್ಯಾರಾಲಿಂಪಿಕ್ಸ್​​ನಲ್ಲಿ ಪದಕಗಳನ್ನ ಬೇಟೆಯಾಡಿದ ಈ ಸಾಧಕರು ನಡೆದು ಬಂದ ಹಾದಿ ನಿಜಕ್ಕೂ ಸುಲಭವಾಗಿರ್ಲಿಲ್ಲ. ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನ ಕಂಡ ಇವರು , ಯಶಸ್ವಿನ ಮೌಂಟ್​ ಎವರೆಸ್ಟ್​ ಏರಿದ್ದರ ಹಿಂದೆ ಕಣ್ಣೀರು, ನೋವು ನಿದ್ದೆ ಇಲ್ಲದೆ ಕಳೆದ ರಾತ್ರಿಗಳ ಆಕ್ರಂದನ, ನಿನ್ನೆ ನಾಳೆಗಳ ನೆನೆದು ಹಾಕಿದ ಎಲ್ಲವು ಇತ್ತು. ಒಟ್ಟಿನಲ್ಲಿ ಪ್ಯಾರಾಲಿಂಪಿಕ್ಸ್​​ನಲ್ಲಿ ಕೆಲವರಷ್ಟೇ ಪದಕ ಗೆದ್ದಿರ ಬಹುದು.ಆದ್ರೆ ನೋಡುಗರ ಮನವನ್ನ ಮಾತ್ರ ಎಲ್ಲರನ್ನ ಗೆದ್ದಿದ್ದಾರೆ.. ಸೋ ಇಲ್ಲಿ ಯಾರು ಸೋತಿಲ್ಲ.. ನಿಜಕ್ಕೂ ಇಲ್ಲಿ ಯಾರು ಸೋತಿಲ್ಲ.

Source: newsfirstlive.com Source link