ಕುರಿಗಾಹಿಗಳ ಹಟ್ಟಿಯಲ್ಲಿ ಕುಳಿತು ಊಟ ಸವಿದು ಸರಳತೆ ಮೆರೆದ ಪುನೀತ್​ ರಾಜ್​​​ಕುಮಾರ್

ಕುರಿಗಾಹಿಗಳ ಹಟ್ಟಿಯಲ್ಲಿ ಕುಳಿತು ಊಟ ಸವಿದು ಸರಳತೆ ಮೆರೆದ ಪುನೀತ್​ ರಾಜ್​​​ಕುಮಾರ್

ಕೊಪ್ಪಳ: ನಟ ಪವರ್ ಸ್ಟಾರ್ ಪುನೀತ್ ಸಾಮಾನ್ಯರಂತೆ ಜಮೀನಿನಲ್ಲಿ ಕುರಿಗಾರರ ಹಾಕಿರುವ ಹಟ್ಟಿಯಲ್ಲಿ ಕುಳಿತು ಭಾನುವಾರ ಊಟ ಮಾಡಿ ಸರಳತೆ ಮೆರೆದಿದ್ದು, ಅಪ್ಪು ಅಭಿಮಾನಿಗಳ ಹೃದಯ ಗೆದ್ದಿದೆ.

ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್ ರಾಜಕುಮಾರ ಕೋವಿಡ್ ಹಿನ್ನೆಲೆ ದರ್ಶನಕ್ಕೆ ನಿಷೇಧ ಇರುವುದರಿಂದ ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪುರ, ಬಂಡಿ ಹರ್ಲಾಪುರ, ನಾರಾಯಣ ಪೇಟೆ ಊರುಗಳಿಗೆ ಭೇಟಿ ನೀಡಿದ್ದಾರೆ.

blank

ಗಂಗಾವತಿ ಸುತ್ತಾಟ ನಡೆಸಿ ವಿಜಯನಗರಕ್ಕೆ ಹೋಗುವ ವೇಳೆ ದಾರಿಯ ಜಮೀನಿನಲ್ಲಿ ಕುರಿಗಾರರು ಹಾಕಿರುವ ಕುರಿ ಹಟ್ಟಿಗೆ ಭೇಟಿ ನೀಡಿದ್ದಾರೆ. ಕುರಿಗಾರರ ಜೊತೆ ಮಾತುಕತೆ ನಡೆಸಿದ ಪುನೀತ್ ಅವರ ಕಂಬಳಿ ಮೇಲೆ ಕುಳಿತು, ಕುರಿಗಾರರ ಜೊತೆ ಸಂಗಟಿ, ಹಾಲು ಊಟ ಮಾಡಿ ಸರಳತೆಯನ್ನು ಮೆರೆದಿದ್ದಾರೆ. ನಂತರ ಕುರಿಗಾರರ ಮಕ್ಕಳ ಹಾಗೂ ಕುರಿಗಾರರ ಜೊತೆಗೆ ತಮ್ಮ ಕಾರಿನ ಮುಂದೆ ನಿಂತುಕೊಂಡು ಫೋಟೊ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

Source: newsfirstlive.com Source link