3 ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ -ವಿಜಯೋತ್ಸವ, ಹೆಚ್ಚು ಜನ ಸೇರುವುದಕ್ಕೆ ಜಿಲ್ಲಾಡಳಿತ ಬ್ರೇಕ್​​​​

3 ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ -ವಿಜಯೋತ್ಸವ, ಹೆಚ್ಚು ಜನ ಸೇರುವುದಕ್ಕೆ ಜಿಲ್ಲಾಡಳಿತ ಬ್ರೇಕ್​​​​

ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿರೋ ರಾಜ್ಯದ 3 ಮಹಾನಗರ ಪಾಲಿಕೆಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಚುನಾವಣಾ ಮತ ಎಣಿಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಪಾಲಿಕೆಯ ಗದ್ದುಗೆ ಏರೋದ್ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.

ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತಎಣಿಕೆಗೆ ಕ್ಷಣಗಣನೆ
ಬೆಳಗ್ಗೆ 8 ಗಂಟೆಯಿಂದ ಮೂರು ಮಹಾನಗರ ಪಾಲಿಕೆಗಳ ಮತ ಎಣಿಕೆ ಆರಂಭ

ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮೂರೂ ಮಹಾನಗರ ಪಾಲಿಕೆಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿತ್ತು. ಹುಬ್ಬಳ್ಳಿ – ಧಾರವಾಡ 82 ವಾರ್ಡ್, ಬೆಳಗಾವಿಯ 58 ವಾರ್ಡ್, ಕಲಬುರಗಿಯ 52 ವಾರ್ಡ್​ ಸೇರಿ ಮೂರೂ ಪಾಲಿಕೆಗಳ ಒಟ್ಟು 195 ವಾರ್ಡ್​​ಗಳಿಗೆ ನಡೆದ ಚುನಾವಣೆಯಲ್ಲಿ 1,105 ಅಭ್ಯರ್ಥಿಗಳು ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಸದ್ಯ ಬೆಳಗ್ಗೆ 8 ಗಂಟೆಗೆ ಮೂರು ಪಾಲಿಕೆಗಳ ಮತ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತಗಳು ಅಗತ್ಯ ತಯಾರಿ ಮಾಡಿಕೊಂಡಿವೆ. ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿಂಗ್ ನಡೆಯಲಿದೆ. ಕೊರೊನಾ ಹಿನ್ನೆಲೆ ವಿಜಯೋತ್ಸವ ಹಾಗೂ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಜಮಾವಣೆಗೆ ನಿರ್ಭಂಧ ವಿಧಿಸಲಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ 1,105 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ಮೂಲಕ ಪಾಲಿಗೆ ಗದ್ದುಗೆ ಯಾರ ಪಾಲಾಗುತ್ತೆ ಅನ್ನೋದು ಗೊತ್ತಾಗಲಿದೆ.

ಒಟ್ಟಿನಲ್ಲಿ ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮೂರೂ ಮಹಾನಗರ ಪಾಲಿಕೆಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ 1105 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ಮೂಲಕ ಪಾಲಿಗೆ ಗದ್ದುಗೆ ಯಾರ ಪಾಲಾಗುತ್ತೆ ಅನ್ನೋದು ಗೊತ್ತಾಗಲಿದೆ.

blank

ಬೆಳಗಾವಿ ಪಾಲಿಕೆ ಚುನಾವಣೆ – 2021

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್​ಗಳಲ್ಲಿ 585 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ – 55, ಕಾಂಗ್ರೆಸ್ – 45, ಜೆಡಿಎಸ್ – 11, ಎಂಇಎಸ್ – 21, ಎಎಪಿ – 27, ಪ್ರಜಾಕೀಯ – 1, ಎಐಎಂಐ- 7, ಎಸ್​​ಡಿಪಿಐ- 1, ಪಕ್ಷೇತರಾಗಿ 217 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಲ್ಲರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಹುಬ್ಬಳ್ಳಿ – ಧಾರವಾಡ ಪಾಲಿಕೆ ಚುನಾವಣೆ – 2021

ಇನ್ನು ಇತ್ತ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ 82 ವಾರ್ಡ್​ಗಳಲ್ಲಿ 420 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ – 82, ಕಾಂಗ್ರೆಸ್ – 82, ಎಎಪಿ – 41, ಜೆಡಿಎಸ್ – 49, ಪ್ರಜಾಕೀಯ – 11, ಸಿ.ಪಿ.ಐ(ಎಂ) – 01, ಬಿಎಸ್​​ಪಿ – 07, ಕರ್ನಾಟಕ ರಾಷ್ಟ್ರ ಸಮಿತಿ – 04, ಎ.ಐ.ಎಂ.ಐ.ಎಂ – 12, ಎಸ್​​ಡಿಪಿಐ – 04, ಕರ್ನಾಟಕ ಶಿವಸೇನೆ – 04, ಕರ್ನಾಟಕ ಸೇವಾ ಪಾರ್ಟಿ – 01, ಹಾಗೂ 122 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

blank

ಕಲಬುರಗಿ ಪಾಲಿಕೆ ಚುನಾವಣೆ – 2021

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ 55 ವಾರ್ಡ್​ಗಳಲ್ಲಿ 300 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್-55, ಬಿಜೆಪಿ- 47, ಜೆಡಿಎಸ್- 46, ಆಮ್ ಆದ್ಮಿ – 26, ಬಿಎಸ್ ಪಿ- 6 ಹಾಗೂ 120 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಯಲ್ಲಿ ಬಂಧಿಯಾಗಿದ್ದು, ಇಂದು ಮತ ಎಣಿಕೆ ನಡೆಯಲಿದೆ. ಇನ್ನು 3 ಮಹಾನಗರ ಪಾಲಿಕೆಗಳಲ್ಲಾದ ಮತದಾನದ ಪ್ರಮಾಣ ಮತ್ತು ಮತ ಎಣಿಕೆಯ ಕೇಂದ್ರದ ಬಗ್ಗೆ ನೋಡೋದಾದ್ರೆ..

ಮತ ಎಣಿಕೆಗೆ ಕ್ಷಣಗಣನೆ

ಹುಬ್ಬಳ್ಳಿ-ಧಾರವಾಡ ಪಾಲಿಕೆಯ 82 ವಾರ್ಡ್​​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 53.81%ರಷ್ಟು ಮತದಾನವಾಗಿದ್ದು, ಇಂದು ಧಾರವಾಡ ಕೃಷಿ ವಿವಿಯಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗಾವಿ ಪಾಲಿಕೆಯ 58 ವಾರ್ಡ್​​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 50.42%ರಷ್ಟು ಮತದಾನವಾಗಿದ್ದು, ಇಂದು ಬಿ.ಕೆ ಮಾಡೆಲ್ ಸ್ಕೂಲ್​​​ನಲ್ಲಿ ಮತ ಎಣಿಕೆ ನಡೆಯಲಿದೆ. ಇನ್ನು ಕಲಬುರಗಿ ಪಾಲಿಕೆಯ 55 ವಾರ್ಡ್​​ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 49.92%ರಷ್ಟು ಮತದಾನವಾಗಿದ್ದು, ಇಂದು ನೂತನ ವಿದ್ಯಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.

blank

ಬೆಳಗ್ಗೆ 8 ಗಂಟೆಗೆ ಮೂರು ಪಾಲಿಕೆಗಳ ಮತ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತಗಳು ಅಗತ್ಯ ತಯಾರಿ ಮಾಡಿಕೊಂಡಿವೆ. ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿಂಗ್ ನಡೆಯಲಿದೆ. ಕೊರೊನಾ ಹಿನ್ನೆಲೆ ವಿಜಯೋತ್ಸವ ಹಾಗೂ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಜಮಾವಣೆಗೆ ನಿರ್ಭಂಧ ವಿಧಿಸಲಾಗಿದೆ.

ಒಟ್ಟಿನಲ್ಲಿ ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಮೂರೂ ಮಹಾನಗರ ಪಾಲಿಕೆಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ 1105 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ಮೂಲಕ ಪಾಲಿಗೆ ಗದ್ದುಗೆ ಯಾರ ಪಾಲಾಗುತ್ತೆ ಅನ್ನೋದು ಗೊತ್ತಾಗಲಿದೆ.

Source: newsfirstlive.com Source link