ಧನಂಜಯ್ ನಟನೆಯ ‘ಹೆಡ್​ ಬುಷ್’ ಚಿತ್ರಕ್ಕೆ  ಲೂಸ್ ಮಾದ ಜೊತೆಗೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ!

ಧನಂಜಯ್ ನಟನೆಯ ‘ಹೆಡ್​ ಬುಷ್’ ಚಿತ್ರಕ್ಕೆ  ಲೂಸ್ ಮಾದ ಜೊತೆಗೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ!

ಸ್ಯಾಂಡಲ್​ವುಡ್​ನಲ್ಲಿ ಸದ್ಯ ಡಾಲಿ ಧನಂಜಯ್​ ಅಭಿನಯದ ಹೆಡ್​ ಬುಷ್ ಚಿತ್ರದ ಸೌಂಡ್ ಜೋರಾಗಿದೆ. ಹೆಡ್​ ಬುಷ್ ಚಿತ್ರದ ಭೂಗತ ಲೋಕದ ದೊರೆ ಡಾನ್​ ಜಯರಾಜ್​ ಪಾತ್ರದಲ್ಲಿ ಡಾಲಿ ಕಾಣಿಸ್ತಿದ್ದು ಚಿತ್ರದ ಮೇಲಿನ ಕುತೂಹಲ ಇಮ್ಮಡಿಯಾಗುವಂತೆ ಮಾಡಿದೆ. ಈ ಚಿತ್ರದಲ್ಲಿ ಡಾಲಿ ಎದುರು ನಿಲ್ಲೋಕೆ ಲೂಸ್​ ಮಾದ ಯೋಗಿಶ್ ರೆಡಿಯಾಗಿದ್ದಾರೆ. ಯೋಗಿ ಹೆಡ್​ ಬುಷ್ ಅಖಾಡಕ್ಕೆ ಇಳಿಯೋಕು ಮುನ್ನವೇ ಈಗ ಮತ್ತೋಬ್ಬ ಸ್ಟಾರ್​ ನಟ ಹೆಡ್​ ಬುಷ್ ಅಂಗಳದಲ್ಲಿ ಕಾಣಿಸೋದು ಪಕ್ಕಾ ಆಗಿದೆ.

blank

ಡಾನ್​ ಜಯರಾಜ್​ ಪಾತ್ರದಲ್ಲಿ ಟಗರು ಪೊಗರಿನ ಡಾಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಬಹು ದೊಡ್ಡ ತಾರಾಬಳಗವೇ ಇರಲಿದ್ದು, ಚಿತ್ರತಂಡ ಒಂದೊಂದೇ ಪಾತ್ರವನ್ನು ರಿವೀಲ್​ ಮಾಡುತ್ತಿದೆ. ಮೊನ್ನೆಯಷ್ಟೇ ಹೆಡ್​ ಬುಷ್​ ಚಿತ್ರದಲ್ಲಿ ಲೂಸ್​ ಮಾದ ಯೋಗಿ ಕಾಣಿಸಲಿದ್ದಾರೆ ಎಂದು ಚಿತ್ರತಂಡ ಅನೌನ್ಸ್​ ಮಾಡಿದೆ.
ಯೋಗಿ ಹೆಡ್​ ಬುಷ್​ ಅಂಗಳಕ್ಕೆ ಕಾಲಿಡುವ ಮುನ್ನವೇ ಈಗ ಚಿತ್ರತಂಡ ಮತ್ತೊಬ್ಬ ಸ್ಟಾರ್​ ನಟ ಚಿತ್ರದಲ್ಲಿ ನಟಿಸುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಲೂಸ್​ ಮಾದ ಯೋಗಿ ನಂತ್ರ ಕಂಚಿನ ಕಂಠದ ನಟ ಖಳನಟ, ಗಾಯಕ ಕಮ್ ನಾಯಕ ಚಿಟ್ಟೆ ವಸಿಷ್ಠ ಸಿಂಹ ಹೆಡ್​ ಬುಷ್​ ಆಟಕ್ಕೆ ಜೊತೆಯಾಗಿರುವ ಬಗ್ಗೆ ಚಿತ್ರತಂಡ ಹೇಳಿದೆ.

ಟಗರು ಸಿನಿಮಾದ ನಂತರ ಡಾಲಿ-ಚಿಟ್ಟೆ ಒಟ್ಟಿಗೆ ನಟಿಸುತ್ತಾರೆ ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಆದರೆ ಅವೆಲ್ಲ ಕೇವಲ ಊಹಾಪೋಹವಾಗಿತ್ತು. ಅದ್ರೆ ಈಗ ಕೊನೆಗೂ ಚಿತ್ರಪ್ರೇಮಿಗಳ ಆಸೆಯಂತೆ ಟಗರಿನ ಈ ಮಸ್ತ್ ಜೋಡಿ ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸದಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಅಲ್ಲದೆ ತುಂಬಾ ದಿನಗಳ ನಂತ್ರ ಈ ಜೋಡಿ ಒಂದಾಗ್ತಿರೋದಕ್ಕೆ ಸಿನಿರಸಿಕರಲ್ಲಿ ನಿಗಿನಿಗಿ ನಿರೀಕ್ಷೆ ಹೆಚ್ಚಿದೆ.

blank

ವಸಿಷ್ಠ ಸಿಂಹ ಹೆಡ್​ ಬುಷ್​ ಚಿತ್ರದಲ್ಲಿ ನಟಿಸುವ ಬಗ್ಗೆ ಚಿತ್ರತಂಡ ರಿವೀಲ್​ ಮಾಡಿದೆ. ಆದ್ರೆ ವಸಿಷ್ಠ ಈ ಸಿನಿಮಾದಲ್ಲಿ ಯಾವ ಪಾತ್ರ ನಿಭಾಯಿಸ್ತಾರೆ ಅನ್ನೋದರ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟು ಕೊಟ್ಟಿಲ್ಲ. ಮುಂದಿನ ದಿಒನಗಳಲ್ಲಿ ಯೋಗಿ ಮತ್ತು ವಸಿಷ್ಠ ಯಾವ ಡಾನ್​ಗಳ ಪಾತ್ರಗಳಲ್ಲಿ ಕಾಣಿಸ್ತಾರೆ ಅನ್ನೋದನ್ನ ರಿವೀಲ್​ ಮಾಡಲು ನಿರ್ದೇಶಕ ಶೂನ್ಯ ಪ್ಲಾನ್​ ಮಾಡಿಕೊಂಡಿದ್ದಾರ

Source: newsfirstlive.com Source link