5 ತಿಂಗಳ ನಂತ್ರ ಕರ್ನಾಟಕದಲ್ಲಿ ಅತೀ ಕಡಿಮೆ ಕೇಸ್ ಪತ್ತೆ -ದೇಶದ 69 ಕೋಟಿ ಜನರಿಗೆ ಲಸಿಕೆ

5 ತಿಂಗಳ ನಂತ್ರ ಕರ್ನಾಟಕದಲ್ಲಿ ಅತೀ ಕಡಿಮೆ ಕೇಸ್ ಪತ್ತೆ -ದೇಶದ 69 ಕೋಟಿ ಜನರಿಗೆ ಲಸಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಸುಮಾರು 5 ತಿಂಗಳ ನಂತ್ರ ರಾಜ್ಯದಲ್ಲಿ ಅತೀ ಕಡಿಮೆ ಕೊರೊನಾ ಕೇಸ್ ಪತ್ತೆಯಾಗಿದೆ. ಈ ನಡುವೆ ಹರಿಯಾಣದಲ್ಲಿ ಮತ್ತೆ 14 ದಿನ ಕೋವಿಡ್ ರೂಲ್ಸ್​ ವಿಸ್ತರಣೆಗೆ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ.

ಮೊದಲೆರಡು ಅಲೆಯಿಂದ ಈಗಷ್ಟೇ ಸುಧಾರಿಸಿಕೊಳ್ತಿರೋ ಭಾರತಕ್ಕೆ ಮತ್ತೆ ಕೊರೊನಾ ಕಂಟಕ ಎದುರಾಗಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಭಣಿಸುತ್ತಿದೆ. ಮಹಾರಾಷ್ಟ್ರ, ಕೇರಳ ಸೇರಿ ವಿವಿಧ ರಾಜ್ಯಗಳಲ್ಲಿ ನಿತ್ಯವೂ ಸೋಂಕು ಏರಿಕೆಯಾಗಿದೆ. ಈ ನಡುವೆ 3ನೇ ಅಲೆ ಆತಂಕ ಹೆಚ್ಚಾಗ್ತಿರೋ ಕಾರಣ ಕೆಲ ರಾಜ್ಯಗಳಲ್ಲಿ ಕೋವಿಡ್ ರೂಲ್ಸ್​ ಮತ್ತೆ ವಿಸ್ತರಿಸಲಾಗ್ತಿದೆ.

blank

ಹರಿಯಾಣದಲ್ಲಿ ಮತ್ತೆ 14 ದಿನ ಕೋವಿಡ್ ರೂಲ್ಸ್ ವಿಸ್ತರಣೆ
ಹರಿಯಾಣದಲ್ಲಿ ಕೊರೊನಾ ಭೀತಿ ಹೆಚ್ಚಾಗ್ತಿದೆ, ನಿತ್ಯವೂ ಸಾವಿರಕ್ಕೂ ಹೆಚ್ಚು ಸೋಂಕು ಕಾಣಿಸಿಕೊಳ್ತಿರೋದ್ರಿಂದ ಹರಿಯಾಣ ಸರ್ಕಾರ ಫುಲ್ ಅಲರ್ಟ್ ಆಗಿದೆ. ರಾಜ್ಯದಲ್ಲಿ ಮತ್ತೆ 14 ದಿನ ಕೋವಿಡ್ ರೂಲ್ಸ್ ವಿಸ್ತರಣೆ ಮಾಡಿ ಹರಿಯಾಣ ಸರ್ಕಾರ ಆದೇಶಿಸಿದೆ. ಇದರ ಜೊತೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ.

5 ತಿಂಗಳ ನಂತ್ರ ಕರ್ನಾಟಕದಲ್ಲಿ ಅತೀ ಕಡಿಮೆ ಕೇಸ್ ಪತ್ತೆ
ಇನ್ನು ಕರ್ನಾಟಕದಲ್ಲಿ ಅತೀ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ 1,117 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿದೆ. ಕಳೆದ ಮಾರ್ಚ್​ ನಂತರ ಕಡಿಮೆ ಕೊರೊನಾ ಪ್ರಕರಣ ಪತ್ತೆಯಾಗಿದ್ದು ಇದೇ ಮೊದಲು..

ಇದರ ಜೊತೆ ದೇಶದ ಯಾವ್ಯಾವ ಭಾಗದಲ್ಲಿ ಏನೇನು ರೂಲ್ಸ್ ಇದೆ, ಏನು ಕ್ರಮ ಕೈಗೊಳ್ಳಲಾಗಿದೆ ಅನ್ನೋದನ್ನ ನೋಡುವುದಾದರೆ, ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 26,701 ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 4,057 ಕೇಸ್ ಹಾಗೂ ಆಂಧ್ರದಲ್ಲಿ 1,623 ಪ್ರಕರಣ ಕಾಣಿಸಿಕೊಂಡಿದೆ. ಹರಿಯಾಣ, ಗೋವಾ ಮತ್ತು ರಾಜಸ್ಥಾನದಲ್ಲಿ ಕೋವಿಡ್ ಕಂಟ್ರೋಲ್​ ಬಂದಿದೆ. ಜಮ್ಮು- ಕಾಶ್ಮೀರದಲ್ಲಿ 12ನೇ ತರಗತಿ ಆರಂಭಿಸಲು ಆದೇಶ ಹೊರಡಿಸಲಾಗಿದೆ.

blank

ಈ ನಡುವೆ ಡಿಸೆಂಬರ್ ಅಂತ್ಯದಲ್ಲಿ ದೇಶದ ಎಲ್ಲಾ ಜನರು ಲಸಿಕೆ ಪಡೆಯಲಿದ್ದಾರೆ ಅಂತ ಕೇಂದ್ರ ಸಚಿವ ಕೃಷ್ಣ ರೆಡ್ಡಿ ಮಾಹಿತಿ ನೀಡಿದ್ದಾರೆ. ಈಗಾಗಲೇ ದೇಶದ 69 ಕೋಟಿ ಜನ ಲಸಿಕೆ ಪಡೆದಿದ್ದಾರೆ. ಈ ಮೂಲಕ ಭಾರತ ಅತೀ ಹೆಚ್ಚು ಕೊರೊನಾ ಲಸಿಕೆ ವಿತರಣೆ ಮಾಡಿದ ದೇಶ ಎಂಬ ಹೆಗ್ಗಳಿಕೆ ಪಡೆದಿದೆ. ಒಟ್ನಲ್ಲಿ ಕೊರೊನಾ ಎರಡನೆಯ ಅಲೆ ಅಂತ್ಯದಲ್ಲಿದೆ. 3ನೇ ಅಲೆಯ ಭೀತಿ ಹೆಚ್ಚಾಗ್ತಿದೆ. ಹೀಗಾಗಿ ಲಸಿಕಾ ಅಭಿಯಾನದ ಜೊತೆಗೆ ಕೊರೊನಾ ಬಿಗಿ ನಿಯಮಗಳ ಜಾರಿಗೆ ಹಲವು ರಾಜ್ಯ ಸರ್ಕಾರಗಳು ಮುಂದಾಗಿವೆ.

Source: newsfirstlive.com Source link