ಕಳ್ಳತನ ತಡೆಗೆ ಪೊಲೀಸರ ಹೊಸ ಪ್ಲಾನ್ -ಮೆಸೇಜ್ ಮಾಡಿದ್ರೆ ಸಾಕು ನಿಮ್ಮ ಮನೆ ಮುಂದೆ ಹಾಜರ್​​

ಕಳ್ಳತನ ತಡೆಗೆ ಪೊಲೀಸರ ಹೊಸ ಪ್ಲಾನ್ -ಮೆಸೇಜ್ ಮಾಡಿದ್ರೆ ಸಾಕು ನಿಮ್ಮ ಮನೆ ಮುಂದೆ ಹಾಜರ್​​

ಪೊಲೀಸರು ಚಾಪೆ ಕೆಳಗೆ ನುಗ್ಗಿದ್ರೆ, ಕಳ್ಳರು ರಂಗೋಲಿ ಕೆಳಗೆ ನುಗ್ತಾರೆ ಅನ್ನೋ ಮಾತು ಎಲ್ಲರಿಗೂ ಗೊತ್ತೇ ಇದೆ. ಹಾಗಂತ ಪೊಲೀಸರು ಸುಮ್ನೆ ಕೂತ್ರೆ, ಜನರು ಹೇಗೆ ನೆಮ್ಮದಿಯಾಗಿ ನಿದ್ದೆ ಮಾಡೋಕ್ಕಾಗುತ್ತೆ ಅಲ್ವಾ? ಹೀಗಾಗಿ, ಕಳ್ಳರಿಗೆ ಕಡಿವಾಣ ಹಾಕಲೆಂದೇ, ಯಾದಗಿರಿ ಪೊಲೀಸರು ಹೊಸ ಮಾರ್ಗೋಪಾಯ ಕಂಡು ಹಿಡಿದಿದ್ದಾರೆ.

blank

ಗೃಹ ಸುರಕ್ಷಾ ಪೊಲೀಸ್ ವಾಟ್ಸ್​ಆ್ಯಪ್ ಸೇವೆ. ನಿಮ್ಮ ಮನೆ, ನಿಮ್ಮ ಸುರಕ್ಷೆ, ನಮ್ಮ ಆದ್ಯತೆ. ಕೇವಲ ಪೊಲೀಸ್ ವಾಟ್ಸ್​ಆ್ಯಪ್​​ಗೆ ಮೆಸೇಜ್ ಮಾಡಿದ್ರೆ ಸಾಕು, ನಿಮ್ಮ ಮನೆಯನ್ನ ಕಳ್ಳರಿಂದ ರಕ್ಷಿಸಲು ಪೊಲೀಸರು ಸಜ್ಜಾಗ್ತಾರೆ. ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ಗೃಹ ಸುರಕ್ಷಾ ಪೊಲೀಸ್ ವಾಟ್ಸ್​ಆ್ಯಪ್ ಸೇವೆಯನ್ನ ಜಾರಿಗೆ ತರಲಾಗಿದೆ.

ಜನರು ತಮ್ಮ ಮನೆ ಬಿಟ್ಟು ತೆರಳುವಾಗ, 9480803600ಗೆ ಮನೆಯ ಫೋಟೋ, ಮನೆಯ ಸಂಪೂರ್ಣ ವಿಳಾಸ, ಮನೆಯ ಜಿಪಿಎಸ್ ಲೋಕೇಶನ್, ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಮನೆಗೆ ಬೀಗ ಹಾಕಲಾಗುವುದು ಅಂತ ಮೆಸೇಜ್ ಹಾಕಬೇಕು. ಹೀಗೆ ಮೆಸೇಜ್ ಮಾಡೋದ್ರಿಂದ, ಪ್ರತಿದಿನ ಲಾಕ್ ಇರೋ ಮನೆಗೆ ಪೊಲೀಸ್ ಸಿಬ್ಬಂದಿ, ರಾತ್ರಿ ಮತ್ತು ಹಗಲಿನಲ್ಲಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇದ್ರಿಂದ, ಕಳ್ಳತನ ಪ್ರಕರಣಗಳನ್ನ ತಡೆಗಟ್ಟಲು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

blank

ಜನರು ರಾತ್ರಿ ಮಲಗಿದ್ರೆ, ಬೆಳಗ್ಗೆ ಏಳೋವಷ್ಟೊತ್ತಿಗೆ, ಹಣ, ಬಂಗಾರ ಇರೋದೇ ಗ್ಯಾರಂಟಿ ಇರಲ್ಲ. ಇನ್ನು, ಸಂಬಂಧಿಕರ ಮನೆಲಿ ಪಂಕ್ಷನ್ ಅಂತ 2 ದಿನ ಹೋಗಿ ಬರೋನ ಅನ್ಕೊಂಡ್ರೆ, ಮುಗಿದೇ ಹೋಯ್ತು. ಮನೆಗಳಿಗೆ ಯಾವಾಗ ಬೀಗ ಬಿತ್ತೋ, ಕಳ್ಳರ ಹಾವಳಿ ಹೆಚ್ಚಾಗ್ತಿತ್ತು. ಇದು ಯಾದಗಿರಿ ನಗರದಲ್ಲಿ ಸರ್ವೆ ಸಾಮಾನ್ಯವಾಗಿತ್ತು. ಒಂದೇ ವರ್ಷದಲ್ಲಿ ಕೇವಲ ನಗರ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಕಳ್ಳತನ ಕೇಸ್​ಗಳು ದಾಖಲಾಗಿದ್ವು. ಅದ್ರಲ್ಲಿ, ಹಲವು ಪ್ರಕರಣಗಳನ್ನ ಪೊಲೀಸರು ಪತ್ತೆ ಮಾಡಿದ್ರು ಕಳ್ಳತನ ಮಾತ್ರ ನಿಂತಿರಲಿಲ್ಲ.

ಒಟ್ಟಾರೆ, ಪೊಲೀಸರು ಎಷ್ಟೇ ಕಟ್ಟುನಿಟ್ಟಾಗಿ ನಗರದ ಮೇಲೆ ನಿಗಾ ಇಟ್ರೂ, ಕಳ್ಳರು ಮಾತ್ರ ತಮ್ಮ ಕೈ ಚಳಕ ತೋರಿಸ್ತಾನೆ ಇದ್ರು. ಹೀಗಾಗಿ, ಕಳ್ಳತನಕ್ಕೆ ಬ್ರೇಕ್ ಹಾಕಲೆಂದೇ, ಯಾದಗಿರಿ ಪೊಲೀಸರು ಗೃಹ ಸುರಕ್ಷಾ ಪೊಲೀಸ್ ವಾಟ್ಸ್​ಆ್ಯಪ್ ಸೇವೆಯನ್ನ ಜಾರಿಗೆ ತಂದಿದ್ದಾರೆ. ಇನ್ನೇನಿದ್ರೂ, ಪೊಲೀಸರ ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅಂತ ಕಾದು ನೋಡಬೇಕಿದೆ.

blank

Source: newsfirstlive.com Source link