ಮೆಗಾ ಫ್ಯಾನ್ಸ್​ಗೆ ಗುಡ್​​ ನ್ಯೂಸ್​​: ಸದ್ಯದಲ್ಲೇ ಸೆಟ್ಟೇರಲಿದೆ ರಾಮ್​​ ಚರಣ್​​ ಹೊಸ ಸಿನಿಮಾ

ಮೆಗಾ ಫ್ಯಾನ್ಸ್​ಗೆ ಗುಡ್​​ ನ್ಯೂಸ್​​: ಸದ್ಯದಲ್ಲೇ ಸೆಟ್ಟೇರಲಿದೆ ರಾಮ್​​ ಚರಣ್​​ ಹೊಸ ಸಿನಿಮಾ

ಟಾಲಿವುಡ್​ ಸ್ಟಾರ್​ ರಾಮ್​ ಚರಣ್- ಕಾಲಿವುಡ್​ ಸ್ಟಾರ್ ಡೈರೆಕ್ಟರ್​ ಶಂಕರ್ ಅವರ ಮೆಗಾ ಕಾಂಬೋ ಸೌತ್​ ಇಂಡಿಯಾದಲ್ಲಿ ಸೆನ್ಸೆಶನ್ ಕ್ರಿಯೇಟ್​ ಮಾಡಿದೆ.. ಈ ಜೋಡಿ ಒಂದಾಗ್ತಿದಂತೆ ಈ ಸಿನಿಮಾ ಯಾವಾಗ ಸೆಟ್ಟೇರುತ್ತೆ ಅಂತ ಸಿನಿರಸಿಕರು ಬಕಪಕ್ಷಿಗಳತರ ಕಾಯ್ತಿದ್ದಾರೆ. ಆದ್ರೆ ಈಗ ಸದ್ದಿಲ್ಲದೆ ಆ ಸುದಿನ ಮೆಗಾ ಕುಟುಂಬದ ಅಭಿಮಾನಿಗಳ ಪಾಲಿಗೆ ಒದಗಿ ಬಂದಿದೆ.

ಟಾಲಿವುಡ್​ನ ಮಗಧೀರ ರಾಮ್​ ಚರಣ್ ಅಭಿನಮಯದ 15ನೇ ಚಿತ್ರದ ಅಪ್ಟೇಡ್​ಗಾಗಿ ಕಾಯ್ತಿದ್ದ ಅಭಿಮಾನಿ ಬಳಗಕ್ಕೆ ಕೊನೆಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ವಿಶೇಷ ಅಂದ್ರೆ ಗಣಪತಿ ಹಬ್ಬಕ್ಕೂ ಮೊದಲೇ ಮೆಗಾ ಫ್ಯಾಮಿಲಿ ಆರಾಧಕರಿಗೆ ಈ ಸ್ವೀಟ್​ ನ್ಯೂಸ್​ ಸಿಕ್ಕಿರೋದು ಗಣಪತಿ ಹಬ್ಬದ ಸಂಭ್ರಮವನ್ನು ಡಬಲ್​ ಮಾಡಿದೆ.

blank

ಅಷ್ಟಕ್ಕೂ ಮೆಗಾ ಫ್ಯಾಮಿಲಿ ಫ್ಯಾನ್ಸ್​ಗಳಿಗೆ ಹಬ್ಬಕ್ಕೂ ಮೊದಲೇ ಸಿಕ್ಕಿರುವ ಸಿಹಿ ಸುದ್ದಿ ಏನಪ್ಪ ಅಂದ್ರೆ. ಗೌರಿ ಗಣೇಶ ಹಬ್ಬಕ್ಕೂ ಒಂದು ದಿನ ಮೊದಲೇ ರಾಮ್​ ಚರಣ್ ಅಭಿನಯದ 1ನೇ ಚಿತ್ರ ಸೆಟ್ಟೇರಲಿದೆ. ಸ್ಟಾರ್​ ಡೈರೆಕ್ಟರ್​ ಶಂಕರ್​ ನಿರ್ದೇಶನ ಈ ಸಿನಿಮಾದ ಮುಹೂರ್ತ ಸೆಪ್ಟೆಂಬರ್​ 8ಕ್ಕೆ ಹೈದರಬಾದ್​ನಲ್ಲಿ ಅದ್ದೂರಿಯಾಗಿ ನೇರವೇರಲಿದೆ.

ಹೆಸರಿಡದ ಈ ಚಿತ್ರದ ಮುಹೂರ್ತಕ್ಕೆ ಬಾಲಿವುಡ್​ ಸ್ಟಾರ್​ ರಣ್​ವೀರ್ ಸಿಂಗ್​ ಅತಿಥಿ ಅನ್ನೋದು ಸ್ಪೆಷಲ್​ ಆಗಿದೆ.. ಹೌದು ಇದೇ ತಿಂಗಳ 8ನೇ ತಾರೀಖು ಸೆಟ್ಟೇರುವ RC15ಚಿತ್ರದ ಮುಹೂರ್ತಕ್ಕೆ ರಣ್ವೀರ್​ ಸಿಂಗ್​ ಚಾಲನೇ ನೀಡಿಲಿದ್ದಾರೆ.

blank

ಇದನ್ನೂ ಓದಿ: ಧುವ ಚಿತ್ರಕ್ಕೆ ‘ಗಣೇಶ’ನ ಹಬ್ಬದಂದು ಪ್ರೇಮ್ ಮುನ್ನುಡಿ; ಅದ್ದೂರಿ ಸಂಗೀತ ಲೋಕ ಸೃಷ್ಟಿ ಪಕ್ಕಾ..!

RC15 ಚಿತ್ರದ ಸಾಕಷ್ಟು ವಿಶೇಷಗಳ​ ಕೇಳಿ ಈಗಾಗಲೇ ಥ್ರಿಲ್​ ಆಗಿರುವ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್​ ಸುದ್ದಿ ಸಿಕ್ಕಿದೆ. 5 ಭಾಷೆಗಳಲ್ಲಿ ಮೂಡಿಬರಲಿರುವ ಈ ಚಿತ್ರದ ಬಜೆಟ್ ಬರೋಬರಿ 150 ಕೋಟಿಯಂತೆ. ಈ ಹಿಂದೆ ಶಂಕರ್ ರೋಬೊ 2.0 ಸಿನಿಮಾ ಬಜೆಟ್​ 200ಕೋಟಿ ಮೀರಿತ್ತು. ಈಗ ಮತ್ತೆ ಶಂಕರ್​ ಈ ಚಿತ್ರವನ್ನು 150 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ತೆರೆ ಮೇಲೆ ತರಲು ಪ್ಲಾನ್​ ಮಾಡಿದ್ದಾರೆ ಎಂಬ ಮಾತು ಟಾಲಿವುಡ್​ನಲ್ಲಿ ಟಾಕ್​ ಆಪ್​ ದಿ ಟೌನ್ ಆಗಿದೆ.

Source: newsfirstlive.com Source link