DGIGP & CM ಆದೇಶಕ್ಕೆ ಡೋಟ್​ ಕೇರ್​.. ಆದೇಶ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲೇ ಬರ್ತ್​​ಡೇ ಸೆಲೆಬ್ರೇಷನ್

DGIGP & CM ಆದೇಶಕ್ಕೆ ಡೋಟ್​ ಕೇರ್​.. ಆದೇಶ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲೇ ಬರ್ತ್​​ಡೇ ಸೆಲೆಬ್ರೇಷನ್

ರಾಮನಗರ: ಒಂದೆಡೆ ರಾಜ್ಯದಲ್ಲಿ ಮೂರನೇ ಕೊರೊನಾ ಅಲೆಯ ಭೀತಿ ಶುರುವಾಗಿದೆ. ಈಗಾಗಲೇ ಕೊರೊನಾದಿಂದ ಬಳಲಿ ಬೆಂಡಾಗಿರುವ ರಾಜ್ಯದಲ್ಲಿ ಮತ್ತೆ ದೊಡ್ಡಮಟ್ಟದ ಅನಾಹುತ ಸೃಷ್ಟಿಯಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮ, ಸೆಲೆಬ್ರೇಷನ್​​ಗಳಿಗೆ ಹಲವು ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಹಾಗೂ ಡಿಜಿಐಜಿಪಿ ಆದೇಶ ಹೊರಡಿಸಿದ್ದರು.

blank

ಆದರೆ ಪೊಲೀಸ್​ ಅಧಿಕಾರಿಗಳೇ ಈ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ.. ಹೌದು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ, ಅಕ್ಕೂರು ಪೊಲೀಸ್ ಠಾಣೆಯ ಪಿಎಸ್ಐ ಸರಸ್ವತಿ ಠಾಣೆಯಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಪಿಎಸ್​ಐ ಸರಸ್ವತಿ ಅವರು ತಮ್ಮದೇ ಚೇಂಬರ್ ನಲ್ಲಿ ಕೇಕ್ ಕತ್ತರಿಸಿ ಕೇಕ್ ತಿನ್ನಿಸುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಗ್ರಾಮದ ಹಲವು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಪಿಎಸ್​ಐ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್​​​ಡೇ ಫೋಟೋಗಳು ವೈರಲ್​ ಆಗ್ತಿವೆ.

blank

ಇದನ್ನೂ ಓದಿ: 3 ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ -ವಿಜಯೋತ್ಸವ, ಹೆಚ್ಚು ಜನ ಸೇರುವುದಕ್ಕೆ ಜಿಲ್ಲಾಡಳಿತ ಬ್ರೇಕ್​​​​

Source: newsfirstlive.com Source link