ಅಕ್ರಮವಾಗಿ ಶ್ರೀಗಂಧ ಮರ ಕಡಿಯುತ್ತಿದ್ದ ಗ್ಯಾಂಗ್​​ ಮೇಲೆ ಫೈರಿಂಗ್

ಅಕ್ರಮವಾಗಿ ಶ್ರೀಗಂಧ ಮರ ಕಡಿಯುತ್ತಿದ್ದ ಗ್ಯಾಂಗ್​​ ಮೇಲೆ ಫೈರಿಂಗ್

ತುಮಕೂರು: ಅಕ್ರಮವಾಗಿ ಶ್ರೀಗಂಧ ಮರ ಕಡಿಯಲು ಯತ್ನಿಸಿದವರ ಮೇಲೆ ಫೈರಿಂಗ್ ನಡೆಸಿದ ಘಟನೆ ಜಿಲ್ಲೆಯ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

blank

ನಿನ್ನೆ 12 ಜನರ ತಂಡವೊಂದು ಶ್ರೀಗಂಧದ ಮರ ಕಡಿಯಲು ಯತ್ನಿಸಿತ್ತು ಎನ್ನಲಾಗಿದ್ದು, ಈ ವೇಳೆ ಕಳ್ಳರ ತಂಡವನ್ನ ಸುತ್ತುವರೆದ ಫಾರೆಸ್ಟ್‌ ಗಾರ್ಡ್‌ಗಳು ಸೆರೆಂಡರ್ ಆಗಲು ಸೂಚಸಿದ್ದಾರೆ. ಆದರೆ ಕಳ್ಳರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಫೈರಿಂಗ್ ಮಾಡಿರುವುದಾಗಿ ತಿಳಿದುಬಂದಿದೆ.

blank

ಈ ವೇಳೆ ಕಳ್ಳರನ್ನು ಚೇಸ್​ ಮಾಡಿದ ಅರಣ್ಯಾಧಿಕಾರಿಗಳು ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸಿದ್ದು, ಓರ್ವ ಕಳ್ಳ ಗಾಯಗೊಂಡಿದ್ದಾನೆ. ಸದ್ಯ ಗಾಯಗೊಂಡ ಗಂಧ ಚೋರನನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link