18 ತಿಂಗಳ ಬಳಿಕ ಶಾಲೆ ಆರಂಭ.. ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

18 ತಿಂಗಳ ಬಳಿಕ ಶಾಲೆ ಆರಂಭ.. ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

6 ರಿಂದ 8 ನೇ ತರಗತಿ ವಿದ್ಯಾರ್ಥಿಗಳ 18 ತಿಂಗಳ ಮನೆವಾಸ ಇಂದಿಗೆ ಅಂತ್ಯವಾಗಿದೆ. ಇಂದಿನಿಂದ ವಿದ್ಯಾದೇಗುಲಗಳ ಬಾಗಿಲುಗಳು ತೆರೆಯುತ್ತಿದ್ದು, ಮಕ್ಕಳು ಶಾಲೆಗಳತ್ತ ಮುಖಮಾಡಿದ್ದಾರೆ. ಕೊರೊನಾದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ ವಿದ್ಯಾದೇಗುಲಗಳ ಬಾಗಿಲು ಒಂದೊಂದಾಗೇ ತೆರೆಯುತ್ತಿವೆ. ಆಗಸ್ಟ್​​ 23ರಂದು 9, 10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಿತ್ತು. ಇಂದಿನಿಂದ 6ರಿಂದ 8 ನೇ ತರಗತಿ ಮಕ್ಕಳಿಗೂ ಶಾಲೆಗಳ ಬಾಗಿಲು ತೆರೆದಿದೆ.

blank

ದೇಶದ ಭವಿಷ್ಯ ರೂಪೂಗೊಳ್ಳೋ ದೇಗುಲವಿದು.. ತಪ್ಪು ಸರಿಯ ತಿದ್ದಿ, ತಿಳಿ ಹೇಳಿ ಸಮ ಬುದ್ಧಿ, ಎಲ್ಲರ ಚಿತ್ತ ಶುದ್ಧಿಯಾಗೋ ದೇಗುಲ.. ಅದೇ ನಮ್ಮೆಲ್ಲರ ನೆಚ್ಚಿನ ಶಾಲೆ.. ಆದ್ರೆ, ವಿಶ್ವಕ್ಕೆ ಕೊರೊನಾ ವಕ್ರದೃಷ್ಟಿ ಬಿಳ್ತಿದ್ದಂತೆ ಶಾಲೆಗಳ ಬಾಗಿಲು ಬಂದ್​ ಆಗಿತ್ತು.. ಆದ್ರೀಗ ಕೊರೊನಾ ಅಬ್ಬರ ಕೊಂಚ ತಗ್ಗಿದೆ. ಹೀಗಾಗಿ ನಿಧಾನವಾಗಿ ಒದೊಂದೇ ತರಗತಿಗಳ ಬಾಗಿಲು ತೆರೆಯುತ್ತಿವೆ. ಕಳೆದ 23ರಂದು 9,10 ಮತ್ತು ಪಿಯುಸಿ ತರಗತಿಗಳು ಆರಂಭವಾಗಿದ್ದವು. ಇದೀಗ ಇಂದಿನಿಂದ 6ರಿಂದ8 ನೇ ತರಗತಿ ಮಕ್ಕಳಿಗೂ ಶಾಲೆಗಳು ಕೈಬೀಸಿ ಕರೆದಿವೆ.

ಇಂದಿನಿಂದ ರಾಜ್ಯಾದ್ಯಂತ 6 ರಿಂದ 8ನೇ ತರಗತಿ ಶಾಲೆ ಆರಂಭ
ಬರೋಬ್ಬರಿ 18 ತಿಂಗಳ ಬಳಿಕ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ

ರಾಜ್ಯಾದ್ಯಂತ ಬರೊಬ್ಬರಿ 18 ತಿಂಗಳ ಬಳಿಕ ಇಂದಿನಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿವೆ. ಕೋವಿಡ್ ಸುರಕ್ಷತಾ ಕ್ರಮ ಅನುಸರಿಸಿ ತರಗತಿಗಳು ನಡೆಯಲಿವೆ. ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸಲು ಸರ್ಕಾರ ಸೂಚನೆ ಹೊರಡಿಸಿದ್ದು, ಶೇ 2 ಕ್ಕಿಂತ ಪಾಸಿಟಿವ್ ದರ ಕಡಿಮೆ ಇರೊ ಜಿಲ್ಲೆಗಳಲ್ಲಿ ಮಾತ್ರ ಶಾಲಾರಂಭವಾಗಲಿದೆ‌. ಇನ್ನು 6 ರಿಂದ 8ನೇ ತರಗತಿ ಆರಂಭದ ಬಗ್ಗೆ ಕೋವಿಡ್ ಮಾರ್ಗಸೂಚಿ ಬಿಡುಗಡೆಯಾಗಿದೆ.

blank

ಶಾಲೆಗೆ ಬರುವಾಗ ವಿದ್ಯಾರ್ಥಿಗಳು ಊಟದ ಬಾಕ್ಸ್, ಬಿಸಿ ನೀರು ತರಬೇಕು. ಜೊತೆಗೆ ಶಾಲೆಗಳಲ್ಲೂ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿರುತ್ತೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತರಗತಿಗಳು ನಡೆಯಲಿವೆ. ವಾರದಲ್ಲಿ 5 ದಿನ ಮಾತ್ರ ತರಗತಿ ನಡೆಸುವುದಕ್ಕೆ ಅವಕಾಶ ನೀಡಲಾಗಿದ್ದು, ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು. ವಿದ್ಯಾರ್ಥಿಗಳು ದಿನ ಬಿಟ್ಟು ದಿನ ತರಗತಿಗೆ ಬರಬೇಕು. ಶನಿವಾರ ಮತ್ತು ಭಾನುವಾರ ಶಾಲೆ ಸ್ವಚ್ಛಗೊಳಿಸಲು ಅವಕಾಶ ನೀಡಲಾಗಿದೆ.

blank

ಪ್ಯಾರಾ ಒಲಿಂಪಿಕ್​ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಕನ್ನಡಿಗ; ‘ದ್ರಾವಿಡ್​​​ ನನಗೆ ಪ್ರೇರಣೆ’ ಅಂದ್ರು IAS ಅಧಿಕಾರಿ

ಇನ್ನೂ, ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ. ಆನ್​ಲೈನ್​, ಪರ್ಯಾಯ ವಿಧಾನದಲ್ಲೂ ಹಾಜರಾಗಲು ಅವಕಾಶ ನೀಡಲಾಗಿದೆ. ಅಂತರ ಕಾಪಾಡುವುದಕ್ಕೆ ಮಕ್ಕಳ ತಂಡ ರಚಿಸಲು ಸೂಚನೆ ನೀಡಲಾಗಿದೆ. ಅದರಂತೆ 15 ರಿಂದ 20 ವಿದ್ಯಾರ್ಥಿಗಳ ತಂಡ ರಚಿಸಬೇಕು. ಅಷ್ಟೇ ಅಲ್ಲ ಶಾಲೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಲೇಬೇಕು. ಶಾಲಾ ಆವರಣದಲ್ಲಿ ಸ್ಯಾನಿಟೈಸ್​​ ಸೇರಿದಂತೆ ಅಗತ್ಯ ಕ್ರಮ ಕೈಗೊಳಲು ಸೂಚನೆ ನೀಡಲಾಗಿದೆ. ಮಕ್ಕಳಿಗೂ ಕೋವಿಡ್ ಮಾರ್ಗಸೂಚಿ ಪಾಲಿಸಲು ಶಿಕ್ಷಕರು ಮಾಹಿತಿ ನೀಡಬೇಕು.

blank

ಮಕ್ಕಳನ್ನು ಶಾಲೆಗೆ ವೆಲ್ಕಮ್ ಮಾಡಲು ಶಾಲೆಗಳು ಸಿದ್ಧವಾಗಿವೆ. ಎಲ್ಲಾ ಶಾಲೆಗಳನ್ನೂ ಸ್ಯಾನಿಟೈಸೇಷನ್ ಮಾಡಲಾಗಿದೆ‌. ಕ್ಲಾಸ್ ರೂಮ್ಸ್, ಕಾರಿಡಾರ್, ಲೈಬ್ರರಿ ಸೇರಿದಂತೆ ಆವರಣದ ಪ್ರತಿ ಕಾರ್ನರ್​ಅನ್ನು ಸ್ವಚ್ಛಗೊಳಿಸಲಾಗಿದೆ. ಒಟ್ನಲ್ಲಿ, ಇಷ್ಟು ದಿನ ಶಾಲೆಗಳ ಆವರಣದಲ್ಲಿ ನಿಂತುಹೋಗಿದ್ದ ಪುಟಾಣಿ ಮಕ್ಕಳ ಕಲರವ ಇಂದಿನಿಂದ ಕೇಳಿಸಲಿದೆ. 18 ತಿಂಗಳಿಂದ ಮನೆಯಲ್ಲೇ ಕುಳಿತಿದ್ದ ವಿದ್ಯಾರ್ಥಿಗಳು ಶಾಲೆಗಳತ್ತ ಮುಖಮಾಡಿದ್ದಾರೆ.

Source: newsfirstlive.com Source link