ದಿಶಾ ಪಟಾಣಿ ವರ್ಕೌಟ್ ಸ್ಟಂಟ್​; ಬಾಲಿವುಡ್ ಖ್ಯಾತ ನಟ ಬೆರಗು!

ದಿಶಾ ಪಟಾಣಿ ವರ್ಕೌಟ್ ಸ್ಟಂಟ್​; ಬಾಲಿವುಡ್ ಖ್ಯಾತ ನಟ ಬೆರಗು!

ಬಾಲಿವುಡ್​ ನಟಿ ದಿಶಾ ಪಟಾನಿ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರ್ತಾರೆ. ಫಿಟ್ನೆಸ್ ಫ್ರೀಕ್​ ಆಗಿರುವ ದಿಶಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕೌಟ್ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಾರೆ. ಅದರಂತೆ ಈ ಬಾರಿಯು ದಿಶಾ ಹೈ ಕಿಕ್​ ಮಾಡುವ ವಿಡಿಯೋವೊಂದನ್ನ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಬಾಲಿವುಡ್​ನ ಖ್ಯಾತ ನಟ ಫುಲ್​ ಫಿದಾ ಆಗಿದ್ದಾರೆ.

ಹೌದು, ಬಾಲಿವುಡ್​ ನಟ ಟೈಗರ್ ಶ್ರಾಫ್ ದಿಶಾ ಹೈ ಕಿಕ್​ ಮಾಡುವ ವಿಡಿಯೋವನ್ನು ಮೆಚ್ಚಿ ಅದಕ್ಕೆ ಕಮೆಂಟ್​ ಮಾಡಿದ್ದಾರೆ. ಇನ್ನು ದಿಶಾ ನಟ ಜಾನ್ ಅಬ್ರಹಾಂ ಮತ್ತು ಅರ್ಜುನ್ ಕಪೂರ್ ನಟಿಸಿರುವ ‘ಏಕ್ ವಿಲನ್ ರಿಟರ್ನ್ಸ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ದಿಶಾರ ಈ ಹೊಸ ವರ್ಕೌಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಅಗಿದೆ.

Source: newsfirstlive.com Source link