ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ ಡಾಲಿ ಧನಂಜಯ್, ಶ್ರುತಿ ಹರಿಹರನ್

ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ ಡಾಲಿ ಧನಂಜಯ್, ಶ್ರುತಿ ಹರಿಹರನ್

ಸ್ಯಾಂಡಲ್​ವುಡ್​​​ನಲ್ಲಿ ಸದ್ಯ ಡಾಲಿ ಧನಂಜಯ್​ ಆಭಿನಯದ ‘ಹೆಡ್​ ಬುಷ್’​ ಸಿನಿಮಾ ಸೌಂಡ್​ ಸಖತ್​ ಜೋರಾಗಿದೆ. ಹೆಡ್ ​ಬುಷ್ ಸಿನಿಮಾ ಬೆಂಗಳೂರಿನ ಭೂಗತ ಲೋಕದ ದೊರೆ ಡಾನ್​ ಜಯ್​ರಾಜ್ ಜೀವನ ಆಧಾರಿತ ಕಥೆಯನ್ನು ಹೊಂದಿರುವ ಸಿನಿಮಾ. ಇನ್ನು ಚಿತ್ರದಲ್ಲಿ ದೊಡ್ಡ ತಾರಾಗಣ ಇರಲಿದೆ ಅಂತಾ ಈ ಹಿಂದೆ ಡಾಲಿ ಧನಂಜಯ್​ ಹಲವು ಬಾರಿ ಹೇಳಿದ್ದಾರೆ.

ಅದರಂತೇ ಟಾಲಿವುಡ್ ನಟಿ ಪಾಯಲ್​ ರಜಪೂತ್, ನಟ ಲೂಸ್​ ಮಾದ ಯೋಗಿ ಮತ್ತು ನಟ ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸೋದು ಪಕ್ಕಾ ಆಗಿದೆ. ಈಗ ಕನ್ನಡದ ಖ್ಯಾತ ನಟಿ ಡಾಲಿಯ ಹೆಡ್​ ಬುಷ್ ಚಿತ್ರದಲ್ಲಿ ನಟಿಸೋದು ಕನ್ಫಮ್​ ಆಗಿದೆ.

ಇದನ್ನೂ ಓದಿ: ಲೂಸ್​ ಮಾದ ಯೋಗಿಗೆ ಅವಾಜ್​ ಹಾಕಿದ ಮುದ್ದು ಮಗಳು!

ಹೌದು, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯಾಗಿರುವ ಶ್ರುತಿ ಹರಿಹರನ್, ಧನಂಜಯ್​ ನಟನೆಯ ಹೆಡ್​ ಬುಷ್​ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದ ಮೂಲಕ ಶ್ರುತಿ ಹರಿಹರನ್​ ಸ್ಯಾಂಡಲ್​ವುಡ್​ನಲ್ಲಿ ತಮ್ಮ ಸೆಕೆಂಡ್​ ಇನಿಂಗ್ಸ್​ ಶುರು ಮಾಡೋಕೆ ಸಜ್ಜಾಗಿದ್ದಾರೆ. ಈ ಹಿಂದೆ ಡಾಲಿ ಮತ್ತು ಶ್ರುತಿ ಇಬ್ಬರು ‘ರಾಟೆ ‘ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

ಇದನ್ನೂ ಓದಿ: ಧನಂಜಯ್ ನಟನೆಯ ‘ಹೆಡ್​ ಬುಷ್’ ಚಿತ್ರಕ್ಕೆ  ಲೂಸ್ ಮಾದ ಜೊತೆಗೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ!

Source: newsfirstlive.com Source link