ಮಗನ ಪ್ರಾಣ ಉಳಿಸಿಕೊಳ್ಳಲು ವೈದ್ಯರ ಕಾಲು ಹಿಡಿದ ತಾಯಿ

ಲಕ್ನೋ: ತನ್ನ ಮಗನ ಪ್ರಾಣ ಉಳಿಸಿಕೊಳ್ಳಲು ವೈದ್ಯರ ಕಾಲಿಗೆ ತಾಯಿ ಬಿದ್ದ ಮನಕಲಕುವಂತಹ ಘಟನೆ ಪಶ್ಚಿಮ ಉತ್ತರಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ.

ಪಶ್ಚಿಮ ಉತ್ತರಪ್ರದೇಶದ ಫಿರೋಜಾಬಾದ್‍ನಲ್ಲಿ 12 ವರ್ಷದ ಬಾಲಕನಿಗೆ ಡೆಂಗ್ಯೂ ಬಂದ ಕಾರಣ ಆತನ ತಾಯಿ ಮತ್ತು ಕುಟುಂಬದವರು ಚಿಕಿತ್ಸೆ ಕೊಡಿಸಲು ಸರ್ಕಾರಿ ಆಸ್ಪತ್ರೆಯ ಹೊರಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ. ತಾಯಿಗೆ ತನ್ನ ಮಗನ ಪರಿಸ್ಥಿತಿ ಮಿತಿಮೀರುತ್ತಿರುವುದನ್ನು ಕಂಡು ಸಾಯಿಸಲಾಗದೆ ಡಾ.ಅನೀಜಾ ಕನ್ಸೋಲ್ ಅವರ ಕಾಲಿಗೆ ಬಿದ್ದು, ದಯವಿಟ್ಟು ನನ್ನ ಮಗನನ್ನು ನೋಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು

ಈ ಕಾರಣ ವೈದ್ಯರಿಗೆ ಅವರ ಮೇಲೆ ಅನುಕಂಪ ಹುಟ್ಟಿ ಬಾಲಕನಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ಸದ್ಯ ಬಾಲಕನಿಗೆ ಯಾವುದೇ ರೀತಿಯ ಪ್ರಾಣಪಾಯವಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನೀಜಾ, ಆಸ್ಪತ್ರೆಯಲ್ಲಿ 540ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ಪರಿಣಾಮ ಒಂದೇ ಹಾಸಿಗೆಯಲ್ಲಿ ಇಬ್ಬರನ್ನು ಮಲಗಿಸಿದ್ದೇವೆ. ಈ ಬಾಲಕನ ತಾಯಿ ಬಂದು ತಮ್ಮ ಪರಿಸ್ಥಿತಿಯನ್ನು ಹೇಳಿದ ತಕ್ಷಣ ನಾವು ಬಾಲಕನಿಗೆ ಚಿಕಿತ್ಸೆಯನ್ನು ಕೊಟ್ಟಿದ್ದೇವೆ. ನಾವು ಯಾರಿಗೂ ಏನು ಆಗಬಾರದೆಂದು ಎಲ್ಲಿಯೂ ಹೋಗದೆ ಇಲ್ಲೇ ಇದ್ದೇವೆ. ಯಾವ ರೋಗಿಗಳಿಗೂ ತೊಂದರೆಯಾಗದಂತೆ ನಾವು ನೋಡಿಕೊಳ್ಳತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

ದಿನೇ ದಿನೇ ಹೆಚ್ಚುತ್ತಿರುವ ಮಕ್ಕಳ ಸಾವು!
ಜಿಲ್ಲೆಯಲ್ಲಿ ಡೆಂಗ್ಯೂ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಮಕ್ಕಳನ್ನು ತುಂಬಾ ಬಾಧಿಸುತ್ತಿದೆ. ಫಿರೋಜಾಬಾದ್ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಡೆಂಗ್ಯೂನಿಂದ 40 ಮಕ್ಕಳು ಸೇರಿದಂತೆ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ. ‘ಡೆಂಗ್ಯೂ ಹೆಮರಾಜಿಕ್ ಫೀವರ್’ದಿಂದಾಗಿ ಈ ಹೆಚ್ಚಿನ ಸಾವು ಸಂಭವಿಸುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಇದು ರೋಗ ತೀವ್ರ ಸ್ವರೂಪವನ್ನು ದಿನೇ ದಿನೇ ಪಡೆಯುತ್ತಿದೆ.

Source: publictv.in Source link