ರಾಮನಗರ ನಗರಸಭೆ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿಗೆ ಗೆಲುವು.. ಜೆಡಿಎಸ್​​ಗೆ ಮುಖಭಂಗ

ರಾಮನಗರ ನಗರಸಭೆ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿಗೆ ಗೆಲುವು.. ಜೆಡಿಎಸ್​​ಗೆ ಮುಖಭಂಗ

ರಾಮನಗರ: ನಗರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದು, ಜೆಡಿಎಸ್​ ಅಭ್ಯರ್ಥಿ ಸೋಲುಂಡಿದ್ದಾರೆ.

ನಗರಸಭೆಯ 4ನೇ ವಾರ್ಡ್ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ತೇಜಸ್ವಿನಿ ಸುರೇಶ್ ಗೆಲುವಿನ ಹಾರ ಪಡೆದುಕೊಂಡಿದ್ದಾರೆ. ಅಂದಹಾಗೇ, ಅತ್ಯಧಿಕ ಅಂದರೇ 899 ಮತಗಳ ಅಂತರದಿಂದ ಕೈ ಅಭ್ಯರ್ಥಿ ಗೆಲುವು ಪಡೆದಿದ್ದು, ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಅನುಸೂಯ ಅವರು ಕೇವಲ 191 ಮತಗಳು ಪಡೆದುಕೊಂಡಿದ್ದಾರೆ.

ವಾರ್ಡ್​​ನಲ್ಲಿ ಕಾಂಗ್ರೆಸ್​ ಸದಸ್ಯೆಯಾಗಿದ್ದ ಲೀಲಾ ಗೋವಿಂದರಾಜು ಅವರು ಕೊರೊನಾದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ವಾರ್ಡ್​​ನಲ್ಲಿ ಉಪಚುನಾವಣೆ ನಡೆಸಲಾಗಿತ್ತು. ಆದರೆ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷ ಪ್ರಬಲವಾಗಿ ಗುರುತಿಸಿಕೊಂಡಿದ್ದು, ತಮ್ಮ ಪಕ್ಷದ ಅಭ್ಯರ್ಥಿಯ ಸೋಲಿನಿಂದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಮುಖಭಂಗ ಎದುರಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

Source: newsfirstlive.com Source link