6-8 ನೇ ತರಗತಿ ಶಾಲೆ ಪ್ರಾರಂಭ.. ಮಾಸ್ಕ್​ ಹಾಕಲಿಲ್ಲ ಅಂದ್ರೆ ಶಾಲೆನೇ ಬಂದ್​ ಮಾಡ್ತಿನಿ ಎಂದ ಶಿಕ್ಷಣ ಸಚಿವ

6-8 ನೇ ತರಗತಿ ಶಾಲೆ ಪ್ರಾರಂಭ.. ಮಾಸ್ಕ್​ ಹಾಕಲಿಲ್ಲ ಅಂದ್ರೆ ಶಾಲೆನೇ ಬಂದ್​ ಮಾಡ್ತಿನಿ ಎಂದ ಶಿಕ್ಷಣ ಸಚಿವ

ಬೆಂಗಳೂರು: ರಾಜ್ಯಾದ್ಯಂತ ಬರೊಬ್ಬರಿ 18 ತಿಂಗಳ ಬಳಿಕ ಇಂದಿನಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿವೆ. ಕೋವಿಡ್ ಸುರಕ್ಷತಾ ಕ್ರಮ ಅನುಸರಿಸಿ ತರಗತಿಗಳು ನಡೆಯಲಿವೆ. ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸಲು ಸರ್ಕಾರ ಸೂಚನೆ ಹೊರಡಿಸಿದ್ದು ವಿದ್ಯಾರ್ಥಿಗಳು ಶಾಲೆಯತ್ತ ಸಂಭ್ರಮದಿಂದಲೇ ಹೆಜ್ಜೆ ಹಾಕಿದ್ದಾರೆ.

blank

ಈ ವೇಳೆ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಕಂಡು ಕಾರಿನಿಂದ ಇಳಿದು ಮಾತನಾಡಿಸಿದ್ದಾರೆ. ​ಇಂದಿನಿಂದ ಶಾಲೆ ಓಪನ್ ಹಿನ್ನೆಲೆ ಜೆ. ಬಿ ನಗರದ ಶಾಲೆಗೆ ತೆರಳ್ತಾ ಇದ್ದ ಸಚಿವರು, ನಗರದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಶಾಲೆಗೆ ಹೊರಟಿದ್ದ ಮಕ್ಕಳನ್ನು ಕಂಡು ಕಾರಿನಿಂದ ಇಳಿದು ಮಾತನಾಡಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಜೊತೆ ಮಾತಿಗಿಳಿದ ಸಚಿವ ಎಲ್ಲರೂ ಮಾಸ್ಕ್​ ಧರಿಸಿಯೇ ಶಾಲೆಗೆ ಹೋಗ್ಬೆಕು, ಇಲ್ಲಾ ಅಂದ್ರೆ ಶಾಲೆನೇ ಬಂದ್​ ಮಾಡಿ ಬಿಡ್ತಿನಿ ಎಂದಿದ್ದಾರೆ.

ಇಂದಿನಿಂದ 6 ರಿಂದ 8 ನೇ ತರಗತಿ ಶಾಲೆ ಪ್ರಾರಂಭ ನಿಮಿತ್ತ ಶಾಲೆಗಳಿಗೆ ಭೇಟಿ ನೀಡಿ ಕೋವಿಡ್-19 ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ (SOP))ಪರಿಶೀಲನೆ ನಡೆಸುತ್ತಿರುವ ಸಚಿವರು, ಶಾಲೆಗೆ ಬಂದ ಮಕ್ಕಳ ಜೊತೆ ಸಂವಾದ ನಡೆಸಲಿದ್ದಾರೆ.

ನಾಳೆಯಿಂದ ರಾಜಾದ್ಯಂತ 6-8 ನೇ ತರಗತಿಗಳು ಆರಂಭ.. ಶಾಲಾ ಅಂಗಳಕ್ಕಿಳಿಯಲು ಸಜ್ಜಾದ ವಿದ್ಯಾರ್ಥಿಗಳು

Source: newsfirstlive.com Source link