ತಾಲಿಬಾನಿಗಳ ಪಾಲಾದ ಪಂಜ್​ಶೀರ್​​ -ರಾಜ್ಯಪಾಲರ ಕಚೇರಿ ಧ್ವಂಸ ಮಾಡಿ, ಧ್ವಜ ಹಾರಿಸಿದ ತಾಲಿಬಾನಿಗಳು

ತಾಲಿಬಾನಿಗಳ ಪಾಲಾದ ಪಂಜ್​ಶೀರ್​​ -ರಾಜ್ಯಪಾಲರ ಕಚೇರಿ ಧ್ವಂಸ ಮಾಡಿ, ಧ್ವಜ ಹಾರಿಸಿದ ತಾಲಿಬಾನಿಗಳು

ಅಫ್ಘಾನಿಸ್ತಾನದ ಪಂಜ್​ಶೀರ್ ಕಣಿವೆಯು ಅಲ್ಲಿನ ಸ್ಥಳೀಯ ಸೇನೆಯ ಹಿಡಿತ ಕೈತಪ್ಪಿದೆ. ನಿನ್ನೆ ಸಂಜೆ ವೇಳೆಗೆ ಪಂಜಶೀರ್​ ರಾಜ್ಯಪಾಲರ ಆಡಳಿತ ಭವನಕ್ಕೆ ಎಂಟ್ರಿಯಾಗಿದೆ ಎಂದು ಹೇಳಿಕೆ ನೀಡಿದ್ದ ತಾಲಿಬಾನಿಗಳು, ಇದೀಗ ಪಂಜ್​ಶೀರ್​ ಸಂಪೂರ್ಣ ನಮ್ಮ ವಶವಾಗಿದೆ ಅಂತಾ ತಾಲಿಬಾನಿಗಳು ಘೋಷಣೆ ಮಾಡಿದ್ದಾರೆ.

ತಾಲಿಬಾನಿ ವಿರೋಧಿ ಪಡೆಗಳ ಕೊನೆಯ ಭದ್ರಕೋಟೆಯಾಗಿರುವ ಪಂಜ್‌ಶಿರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ನಮ್ಮ ತೆಕ್ಕೆಗೆ ತೆಗೆದುಕೊಳ್ಳಲಾಗಿದೆ. ದೇಶವು ಯುದ್ಧದ ಸುಳಿಯಿಂದ ಕೊನೆಗೂ ಹೊರಬಂದಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಆದರೆ ಇವರ ಪ್ರತಿರೋಧ ಪಡೆಗಳು ತಾಲಿಬಾನ್ ಹೇಳಿಕೆಯನ್ನ ನಿರಾಕರಿಸಿವೆ.

ಪಾಕ್ ಸಹಾಯ..!
ಪಂಜ್​ಶೀರ್​ ಪ್ರಾಂತ್ಯವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡಿರೋದು ಮಾತ್ರವಲ್ಲ, ಪಂಜ್​ಶೀರ್​ ಗವರ್ನರ್​​ ಕಚೇರಿಯಲ್ಲಿ ನಮ್ಮ ಧ್ವಜವನ್ನ ಹಾರಿಸಲಾಗಿದೆ ಎಂದು ಹೇಳಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಫೋಟೋ ಕೂಡ ರಿಲೀಸ್ ಮಾಡಿದೆ.

ಈ ಮೂಲಕ ನಾರ್ಥರ್ನ್ ಅಲಯನ್ಸ್​​ಗೆ ದೊಡ್ಡ ಮಟ್ಟದ ಸೋಲಾಗಿದೆ. ಇನ್ನು ಅಲ್ಲಿನ ಗವರ್ನರ್​​ ಕಚೇರಿಗೆ ನುಗ್ಗಿರುವ ತಾಲಿಬಾನಿಗಳು, ಅಲ್ಲಿರುವ ವಸ್ತುಗಳನ್ನ ಹಾಳು ಮಾಡಿದ್ದಾರೆ ಅಂತಾ ವರದಿಯಾಗಿದೆ. ಜೊತೆಗೆ ಪಾಕಿಸ್ತಾನದ ಸೇನೆಯಿಂದಲೇ ಪಂಜಶೀರ್​ ಮೇಲೆ ದಾಳಿಯಾಗಿದೆ. ಪಾಕಿಸ್ತಾನದ ಡ್ರೋಣ್, ಹೆಲಿಕಾಪ್ಟರ್​​​ಗಳ ಬಳಕೆ ಮೂಲಕ ನಾರ್ಥರ್ನ್ ಅಲಯನ್​ಗಳನ್ನ ಹಿಮ್ಮೆಟ್ಟಿಸಲಾಗಿದೆ. ಜೊತೆಗೆ ತಾಲಿಬಾನಿಗಳಿಗೆ ಸ್ಯಾಟಲೈಟ್ ಮ್ಯಾಪ್ ಕೂಡ ಪಾಕಿಸ್ತಾನ ಒದಗಿಸಿಕೊಟ್ಟಿದೆ ಎನ್ನಲಾಗಿದೆ.

Source: newsfirstlive.com Source link