‘MUSIC’ ಅಂದ್ರೆ ಯಾಕಿಷ್ಟು ಕೋಪ..? ತಾಲಿಬಾನಿಗಳಿಂದ ಸ್ಟುಡಿಯೋಗಳಿಗೆ ನುಗ್ಗಿ ಸಂಗೀತ ವಾದ್ಯಗಳ ಧ್ವಂಸ  

‘MUSIC’ ಅಂದ್ರೆ ಯಾಕಿಷ್ಟು ಕೋಪ..? ತಾಲಿಬಾನಿಗಳಿಂದ ಸ್ಟುಡಿಯೋಗಳಿಗೆ ನುಗ್ಗಿ ಸಂಗೀತ ವಾದ್ಯಗಳ ಧ್ವಂಸ  

ಅಫ್ಘಾನಿಸ್ತಾನವನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿಗಳ ಕೆಲವು ಪುಂಡರು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಸಂಗೀತ, ಸಿನಿಮಾ, ಜಾನಪದ, ಫ್ಯಾಷನ್​ ವಿರೋಧಿಸುತ್ತಿರುವ ತಾಲಿಬಾನಿಗಳ ಕ್ರೂರ ಕೆಲಸಗಳು ಒಂದೊಂದೇ ಹೊರಗೆ ಬರುತ್ತಿವೆ. ಇದೀಗ ಕಾಬೂಲ್​ನಲ್ಲಿದ್ದ ಎರಡು ದೊಡ್ಡ ಪಿಯಾನುಗಳನ್ನ ಧ್ವಂಸ ಮಾಡಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕೇವಲ ಪಿಯಾನು ಮಾತ್ರವಲ್ಲ, ಸಂಗೀತಕ್ಕೆ ಸಂಬಂಧಿಸಿದ ಎಲ್ಲಾ ಇನ್​ಸ್ಟ್ರುಮೆಂಟ್​ಗಳನ್ನ ಧ್ವಂಸ ಮಾಡಿದ್ದಾರೆ. ಕಾಬೂಲ್​ನಲ್ಲಿರುವ ಸ್ಟುಡಿಯೋ ಒಂದಕ್ಕೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಸಂಗೀತವನ್ನ ತಾಲಿಬಾನಿಗಳು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿದ್ದಾರೆ. 1996 ರಿಂದ 2001 ವರೆಗೆ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿದ್ದ ತಾಲಿಬಾನಿಗಳು, ಅಂದು ಸಂಗೀತವನ್ನ ಮ್ಯೂಸಿಕ್ ಬ್ಯಾನ್ ಮಾಡಿದ್ದರು. ಮಾತ್ರವಲ್ಲ ಮಹಿಳೆಯರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂಬ ಕಠಿಣ ನಿಯಮವನ್ನ ಹಾಕಿಕೊಂಡಿದ್ದರು.

ಇದೀಗ ಮತ್ತೆ ತಾಲಿವಾನಿಗಳು ತಮ್ಮ ಇಸ್ಲಾಮಿಕ್ ರೂಲ್​ಗಳನ್ನ ಮುಂದುವರಿಸುವ ಸೂಚನೆಯನ್ನ ಕೊಟ್ಟಿದ್ದಾರೆ. ಇನ್ನು ಆಗಸ್ಟ್​ 15 ರಂದು ಕಾಬೂಲ್​ಗೆ ಎಂಟ್ರಿ ಕೊಟ್ಟಿದ್ದ ತಾಲಿಬಾನಿಗಳು, ಅಪ್ಘಾನಿಸ್ತಾನ ಸಂಪೂರ್ಣ ನಮ್ಮ ವಶಕ್ಕೆ ಆಗಿದೆ ಎಂದು ಘೋಷಣೆ ಮಾಡಿದ್ದರು. ಇದೀಗ ಅಲ್ಲಿನ ಪಂಜ್​ಶೀರ್ ವ್ಯಾಲಿ ಕೂಡ ತಾಲಿಬಾನಿಗಳ ತೆಕ್ಕೆಗೆ ಸೇರಿದೆ.

Source: newsfirstlive.com Source link