ಟಿ20 ವಿಶ್ವಕಪ್ ತಂಡ ಪ್ರಕಟದತ್ತ ಎಲ್ಲರ ಚಿತ್ತ.. ಪ್ರಮುಖ ಆಟಗಾರರಿಗೆ ಶುರುವಾಯ್ತು ನಡುಕ!

ಟಿ20 ವಿಶ್ವಕಪ್ ತಂಡ ಪ್ರಕಟದತ್ತ ಎಲ್ಲರ ಚಿತ್ತ.. ಪ್ರಮುಖ ಆಟಗಾರರಿಗೆ ಶುರುವಾಯ್ತು ನಡುಕ!

ಕೆನ್ನಿಂಗ್ಟನ್​ ಓವಲ್​ ಟೆಸ್ಟ್​ ಪಂದ್ಯ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಯಾರು ಗೆಲ್ತಾರೆಂಬ ನಿರೀಕ್ಷೆ ಗರಿಗೆದರಿದೆ. ಇದಕ್ಕಿಂತ ಮಿಗಿಲಾಗಿ ಕ್ರಿಕೆಟ್​ ಪ್ರೇಮಿಗಳ ಚಿತ್ತ ಮಾತ್ರ, ಇಂದು ಅಥವಾ ನಾಳೆ ಪ್ರಕಟವಾಗೋ ಟಿ20 ವಿಶ್ವಕಪ್​ ತಂಡದ ಮೇಲೆಯೇ ನೆಟ್ಟಿದೆ. ಇದು ಕ್ರಿಕೆಟ್​ ಪ್ರೇಮಿಗಳ ಕುತೂಹಲ ಮೂಡಿಸಿದ್ರೆ, ಆಟಗಾರರಲ್ಲಿ ನಡುಕ ಹುಟ್ಟಿಸಿದೆ.

ಟಿ20 ವಿಶ್ವಕಪ್​​ಗೆ ಟೀಮ್ ಇಂಡಿಯಾ ಪ್ರಕಟಿಸುವ ಸಲುವಾಗಿ, ಬಿಸಿಸಿಐ ಸಲೆಕ್ಷನ್​ ಕಮಿಟಿ ಸಭೆ ಸೇರುತ್ತಿದೆ. ಸಭೆಯ ಬಳಿಕ ಟಿ20 ವಿಶ್ವಕಪ್ ತಂಡವನ್ನ ಪ್ರಕಟಿಸೋದು ಕನ್ಫರ್ಮ್​ ಆಗಿದೆ. ಬಲಿಷ್ಠ ಹಾಗೂ ಸಮತೋಲಿತ ತಂಡವನ್ನ ಪ್ರಕಟಿಸುವ ಇರಾದೆ ಹೊಂದಿರುವ ಸೆಲೆಕ್ಷನ್​ ಕಮಿಟಿ 15 ಆಟಗಾರರಿಗೆ ಮಣೆ ಹಾಕಲಿದೆ ಎನ್ನಲಾಗ್ತಿದೆ. ಆ 15 ಆಟಗಾರರ ತಂಡದಲ್ಲಿ ಇವರಿಗಂತೂ ಸ್ಥಾನ ಫಿಕ್ಸ್​ ಅಂತಾನೇ ಹೇಳಲಾಗ್ತಿದೆ.

blank

ಆರಂಭಿಕರಾಗಿ ರೋಹಿತ್-ರಾಹುಲ್ ಫಿಕ್ಸ್​, ಶ್ರೇಯಸ್ ಕನಸು ಭಗ್ನ..?
ಬಹುನಿರೀಕ್ಷಿತ ವಿಶ್ವಕಪ್​​ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಆಡೋದು ಬಹುತೇಕ ಖಚಿತವಾಗಿದೆ. ಇವರ ಜೊತೆಗೆ ಹೆಚ್ಚುವರಿ ಆರಂಭಿಕರಾಗಿ ಶಿಖರ್ ಧವನ್ ಸ್ಥಾನ ಗಿಟ್ಟಿಸಿಕೊಳ್ಳೋ ಸಾಧ್ಯತೆಯಿದೆ. ನಾಯಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋದು ಕನ್​ಫರ್ಮ್​. ಆದ್ರೆ, 4 ರಿಂದ 6ನೇ ಕ್ರಮಾಂಕದವರೆಗಿನ ಆಯ್ಕೆಯೇ ಸೆಲೆಕ್ಷನ್ ಕಮಿಟಿಗೆ ತಲೆನೋವಾಗಿ ಪರಿಣಮಿಸಿದೆ. ಗಾಯದ ಕಾರಣದಿಂದ ಹೊರಗುಳಿದಿದ್ದ ಶ್ರೇಯಸ್​ ಅಯ್ಯರ್​ ಕನಸು ಭಗ್ನವಾಗೋ ಸಾಧ್ಯತೆಯಿದ್ದು, ಸೂರ್ಯಕುಮಾರ್​​, ರಿಷಭ್​ ಪಂತ್​ಗೆ ಸ್ಥಾನ ಸಿಗೋದು ಬಹತೇಕ ಖಚಿತ.

ಆಲ್​ರೌಂಡರ್ ಕೋಟಾದಲ್ಲಿ ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಜೊತೆಗೆ ಶಾರ್ದೂಲ್ ಫಿಕ್ಸ್ ಆಗೋ ಸಾಧ್ಯತೆ ಇದೆ. ಸ್ಪಿನ್ನರ್​ ಕೋಟಾದಲ್ಲಿ ಯಜುವೇಂದ್ರ ಚಹಲ್​​ ಜೊತೆಗೆ ಲೆಗ್ ಸ್ಪಿನ್ನರ್ ರಾಹುಲ್ ಚಹರ್, ತಂಡದಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಖಚಿತವಾಗಿದೆ.

blank

ವೇಗಿಗಳ ಆಯ್ಕೆಯ ಗೊಂದಲದಲ್ಲಿ ಸೆಲೆಕ್ಷನ್ ಕಮಿಟಿ..!
ವೇಗಿಗಳ ಆಯ್ಕೆಯೂ ಸೆಲೆಕ್ಷನ್ ಕಮಿಟಿಗೆ ಚಾಲೆಂಜ್ ಆಗಿದೆ. ಮುಖ್ಯವಾಗಿ ಜಸ್​ಪ್ರೀತ್ ಬೂಮ್ರಾ, ಭುವನೇಶ್ವರ್​, ಮಹಮ್ಮದ್ ಶಮಿ, ದೀಪಕ್ ಚಹರ್, ಮಹಮ್ಮದ್ ಸಿರಾಜ್, ಟಿ ನಟರಾಜನ್​ರಂಥ ವೇಗಿಗಳು ರೇಸ್​ನಲ್ಲಿದ್ದಾರೆ. ಜೊತೆಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಕೂಡ ಸ್ಥಾನದ ಆಕಾಂಕ್ಷಿಯೇ ಆಗಿದ್ದಾರೆ. ಈ ಏಳು ಜನರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೂ ಇನ್ನು ಕೆಲ ಗಂಟೆಗಳಲ್ಲೇ ಸೆಲೆಕ್ಷನ್​ ಕಮಿಟಿ ಯಾವ ಉತ್ತರ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಸಂಭಾವ್ಯ ಟಿ20 ವಿಶ್ವಕಪ್​ ತಂಡ..

ವಿರಾಟ್​​ ಕೊಹ್ಲಿ (ನಾಯಕ), ರೋಹಿತ್​ ಶರ್ಮಾ (ಉಪನಾಯಕ), ಕೆಎಲ್​ ರಾಹುಲ್​ (BAT/WK), ಶಿಖರ್​​ ಧವನ್​ (ಬ್ಯಾಟ್ಸ್​ಮನ್), ಸೂರ್ಯಕುಮಾರ್​ ಯಾದವ್​ (ಬ್ಯಾಟ್ಸ್​​​ಮನ್), ರಿಷಭ್​ ಪಂತ್​ (BAT/WK), ಹಾರ್ದಿಕ್​ ಪಾಂಡ್ಯ (ಆಲ್​ರೌಂಡರ್), ರವೀಂದ್ರ ಜಡೇಜಾ (ಆಲ್​ರೌಂಡರ್), ರಾಹುಲ್​ ಚಹರ್​ (ಸ್ಪಿನ್ನರ್), ಯುಜುವೇಂದ್ರ ಚಹಲ್​ (ಸ್ಪಿನ್ನರ್​​), ಜಸ್​​ಪ್ರಿತ್​​ ಬೂಮ್ರಾ (ವೇಗಿ), ದೀಪಕ್​ ಚಹರ್​ (ವೇಗಿ), ಮೊಹಮದ್​ ಶಮಿ (ವೇಗಿ), ಶಾರ್ದೂಲ್​ ಠಾಕೂರ್​ (ವೇಗಿ) ಮೊಹಮದ್​ ಸಿರಾಜ್​ (ವೇಗಿ)..

ಮೀಸಲು ಆಟಗಾರರು..

ಇಶಾನ್​ ಕಿಶನ್​ (ಬ್ಯಾಟ್ಸ್​ಮನ್), ಕೃನಾಲ್​ ಪಾಂಡ್ಯ (​ಆಲ್​ರೌಂಡರ್), ಪೃಥ್ವಿ ಷಾ (ಬ್ಯಾಟ್ಸ್​ಮನ್).

 

Source: newsfirstlive.com Source link