ಮಕ್ಕಳು ಖುಷಿಯಿಂದ ಶಾಲೆಗೆ ಬರ್ತಿದ್ದಾರೆ, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ -ನಾಗೇಶ್

ಮಕ್ಕಳು ಖುಷಿಯಿಂದ ಶಾಲೆಗೆ ಬರ್ತಿದ್ದಾರೆ, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ -ನಾಗೇಶ್

ಬೆಂಗಳೂರು: ರಾಜ್ಯಾದ್ಯಂತ ಬರೊಬ್ಬರಿ 18 ತಿಂಗಳ ಬಳಿಕ ಇಂದಿನಿಂದ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿವೆ. ಕೋವಿಡ್ ಸುರಕ್ಷತಾ ಕ್ರಮ ಅನುಸರಿಸಿ ತರಗತಿಗಳು ನಡೆಯುತ್ತಿವೆ. ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸಲು ಸರ್ಕಾರ ಸೂಚನೆ ಹೊರಡಿಸಿದ್ದು ವಿದ್ಯಾರ್ಥಿಗಳು ಶಾಲೆಯತ್ತ ಸಂಭ್ರಮದಿಂದಲೇ ಹೆಜ್ಜೆ ಹಾಕಿದ್ದಾರೆ.

May be an image of one or more people, people standing and outdoors

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​, ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಬಂದಿದ್ದಾರೆ. ಕೊರೊನಾ ತಗ್ಗಿದಂತೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲು ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ. ಶಾಲೆ ಆರಂಭ ನಿಮಿತ್ತ ಶಾಲೆಗಳಲ್ಲಿ ಮಕ್ಕಳಿಗೆ ಸ್ಯಾನಿಟೈಜ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಕೂಡ ಸಾಮಾಜಿಕ ಅಂತರ ಹಾಗೂ ‌ಮಾಸ್ಕ್ ಧರಿಸಿ ಶಾಲೆಗೆ ಬಂದಿದ್ದಾರೆ ಎಂದರು.

May be an image of 5 people and people standing

ಇದನ್ನೂ ಓದಿ:18 ತಿಂಗಳ ಬಳಿಕ ಶಾಲೆ ಆರಂಭ.. ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಹಳೆಯ ಪಾಸ್ ನಲ್ಲಿ ಬಸ್ ನಲ್ಲಿ ಸಂಚಾರ ಮಾಡಲು ರಿಯಾಯಿತಿ ಕಲ್ಪಿಸಲಾಗಿದೆ. ಜೊತೆಗೆ ಪಾಸ್​ ಇಲ್ಲವಾದಲ್ಲಿ ಶಾಲೆಯ ಐಡಿ ಕಾರ್ಡ್​ ತೋರಿಸಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ. ಇನ್ನು ಕೆಲವೊಂದು ಕಡೆ ಕೊರೊನಾ ಕಾಲದಲ್ಲಿ ತಡೆಹಿಡಿಯಲಾಗಿದ್ದ ಶಾಲಾ ಸಮಯದ ಬಸ್​ಗಳನ್ನು ಪುನರ್​ ಆರಂಭಿಸುವಂತೆ ಸಾರಿಗೆ ಸಂಸ್ಥೆಗೆ ಸೂಚಿಸಲಾಗಿದೆ ಎಂದರು.

Source: newsfirstlive.com Source link