ಪಂಜ್​ಶೀರ್​ ತಾಲಿಬಾನಿಗಳ ಪಾಲಾಗಲು ಸಹಾಯ ಮಾಡಿದ್ದು ಪಾಕ್ -ವರದಿ

ಪಂಜ್​ಶೀರ್​ ತಾಲಿಬಾನಿಗಳ ಪಾಲಾಗಲು ಸಹಾಯ ಮಾಡಿದ್ದು ಪಾಕ್ -ವರದಿ

ಸ್ಥಳೀಯ ಸೇನಾ ಮುಖಂಡನ ತೆಕ್ಕೆಯಲ್ಲಿದ್ದ ಅಫ್ಘಾನಿಸ್ತಾನದ ಪಂಜ್​ಶೀರ್​ ಪ್ರಾಂತ್ಯ ಇದೀಗ ತಾಲಿಬಾನಿಗಳ ವಶವಾಗಿದೆ. ಪಂಜ್​ಶೀರ್​ ತಾಲಿಬಾನಿಗಳ ಪಾಲಾಗುವಂತೆ ಮಾಡಿದ್ದು, ಪಾಕಿಸ್ತಾನ ಅನ್ನೋ ಮಾಹಿತಿ ಕೂಡ ಬಹಿರಂಗವಾಗುತ್ತಿದೆ.

ಕೆಲವು ವರದಿಗಳ ಪ್ರಕಾರ.. ನಿನ್ನೆ ಪಂಜ್​​ಶೀರ್ ವ್ಯಾಲಿಯಲ್ಲಿ ದೊಡ್ಡ ಕದನವೇ ನಡೆದುಹೋಗಿದೆ. ಪಾಕಿಸ್ತಾನ ವಾಯುಸೇನೆ, ತಾಲಿಬಾನಿಗಳಿಗೆ ಸಹಾಯ ಮಾಡಿದೆ. ತಾಲಿಬಾನ್ ಮತ್ತು ಪಾಕ್​ ಸೇನೆ ಒಟ್ಟಿಗೆ ಪಂಜ್​ಶೀರ್​ ಪ್ರಾಂತ್ಯಕ್ಕಾಗಿ ಕಾರ್ಯಾಚರಣೆ ನಡೆಸಿ, ಬಾಂಬಿನ ದಾಳಿ ನಡೆಸಲಾಗಿದೆ. ಪಂಜ್​ಶೀರ್ ಕಣಿವೆಯಲ್ಲಿ ಪಾಕಿಸ್ತಾನದ ಡ್ರೋಣ್​ಗಳು ಹಾರಾಟ ನಡೆಸಿವೆ. ಡ್ರೋಣ್ ಮೂಲಕ ದಾಳಿ ನಡೆಸುವುದು ಪಾಕ್​ ಹಾಗೂ ತಾಲಿಬಾನಿಗಳ ಉದ್ದೇಶವಾಗಿತ್ತು. ಇಲ್ಲಿ ಅಫ್ಘಾನಿಸ್ತಾನದ ಕೇರ್​ ಟೇಕರ್ ಅಧ್ಯಕ್ಷ ಅಮರುಲ್ಲಾ ಸಲೇಹ್ ಅವರನ್ನ ಟಾರ್ಗೆಟ್ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ‘MUSIC’ ಅಂದ್ರೆ ಯಾಕಿಷ್ಟು ಕೋಪ..? ತಾಲಿಬಾನಿಗಳಿಂದ ಸ್ಟುಡಿಯೋಗಳಿಗೆ ನುಗ್ಗಿ ಸಂಗೀತ ವಾದ್ಯಗಳ ಧ್ವಂಸ

ಇನ್ನು ಪಾಕಿಸ್ತಾನ ಡ್ರೋಣ್ ಮೂಲಕ ‘ಸ್ಮಾರ್ಟ್ ಬಾಂಬ್’ ದಾಳಿ ಮಾಡಿರೋದನ್ನ ಅಫ್ಘಾನಿಸ್ತಾನದ ಮಾಜಿ ಎಂಪಿ ಜಿಯಾ ಅರಿಂಜಾದ್ ನ್ಯೂಸ್​ ಚಾನಲ್ ಒಂದಕ್ಕೆ ಮಾಹಿತಿ ನೀಡಿದ್ದಾರೆ. ಜೊತೆಗೆ ಅಹಮ್ಮದ್ ಮಸೂದ್​, ಪಾಕಿಸ್ತಾನದ ಏರ್​ಫೋರ್ಸ್ ಮತ್ತು ಐಎಸ್​ಐ ಬೆಂಬಲ ನೀಡಿರುವ ಬಗ್ಗೆ ಹೇಳಿದ್ದಾನೆ. ಪಂಜ್​ಶೀರ್ ಮೇಲೆ ದಾಳಿ ಮಾಡಲು ತಾಲಿಬಾನ್ ಸಾಧ್ಯವಾಗಿರಲಿಲ್ಲ. ಹೀಗಾಗಿ ಡ್ರೋಣ್ ಹಾಗೂ ಹೆಲಿಕಾಪ್ಟರ್​​ಗಳನ್ನ ನೀಡುವ ಮೂಲಕ ಪಾಕಿಸ್ತಾನ ನಮಗೆ ಸಹಾಯ ಮಾಡಿದೆ ಅಂತಾ ಅಹಮ್ಮದ್ ಮಸೂದ್ ಹೇಳಿದ್ದಾನೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ತಾಲಿಬಾನಿಗಳ ಪಾಲಾದ ಪಂಜ್​ಶೀರ್​​ -ರಾಜ್ಯಪಾಲರ ಕಚೇರಿ ಧ್ವಂಸ ಮಾಡಿ, ಧ್ವಜ ಹಾರಿಸಿದ ತಾಲಿಬಾನಿಗಳು

ಈ ಮೂಲಕ ಸಂಪೂರ್ಣ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ. ಪಾಕಿಸ್ತಾನದ ಕುತಂತ್ರದಿಂದ ನಾರ್ಥರ್ನ್ ಅಲಯನ್ಸ್​​ಗೆ ದೊಡ್ಡ ಮಟ್ಟದ ಸೋಲಾಗಿದೆ.

Source: newsfirstlive.com Source link