ಕಂಡವರ ಜಾಗದಲ್ಲಿ ಬೇಲಿ ಹಾಕಿ ಅವಾಜ್ ಹಾಕ್ತಿದ್ದ ರೌಡಿಗೆ ಪಾಠ ಕಲಿಸಿದ ಪೊಲೀಸರು

ಕಂಡವರ ಜಾಗದಲ್ಲಿ ಬೇಲಿ ಹಾಕಿ ಅವಾಜ್ ಹಾಕ್ತಿದ್ದ ರೌಡಿಗೆ ಪಾಠ ಕಲಿಸಿದ ಪೊಲೀಸರು

ಬೆಂಗಳೂರು: ಬೇರೆಯವರ ಜಾಗಕ್ಕೆ ಬೇಲಿ ಹಾಕಿ ಅವಾಜ್​ ಹಾಕ್ತಿದ್ದ ರೌಡಿಶೀಟರ್​ನನ್ನು ಪೊಲೀಸರು ಬಂಧಿಸಿದ್ದಾರೆ. ​

ಕಂಡವರ ಜಾಗದಲ್ಲಿ ಬೇಲಿ ಹಾಕಿ ಆಟಾಟೋಪ ನಡೆಸಿದ್ದ ರೌಡಿಶೀಟರ್ ಪರಮೇಶ್​​ನನ್ನ ಕಾಡುಗೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿ ಬಿಸಿ ಮುಟ್ಟಿಸಿದ್ದಾರೆ.

blank

ಕಾಡುಗೋಡಿ ಹೊಸಕೋಟೆ ವೈಟ್​ಫೀಲ್ಡ್ ಭಾಗದ ಬಿಲ್ಡರ್ ಗಳಿಗೆ ಧಮ್ಕಿ ಹಾಕಿ, ದೊಮ್ಮಸಂದ್ರದಲ್ಲಿ ಖಾಸಗಿ ಕಂಪನಿಯ ಲೇಔಟ್ ನಿರ್ಮಾಣಕ್ಕೆ ಅಡ್ಡಿಪಡಿಸಿ ಅವಾಜ್ ಹಾಕಿ ರೌಡಿಶೀಟರ್ ಬೇಲಿ ಹಾಕಿದ್ದಾಗಿ ಆರೋಪ ಕೇಳಿ ಬಂದಿದೆ.

blank

ಯಾರನ್ನ ಕೇಳಿ ಕೆಲಸ ಮಾಡ್ತಿದ್ದೀರಾ? ಯಾವನ್ ಅವ್ನು ಜಿಎಂ? ಕೆಲಸ ನಿಲ್ಸಿ ಅವನ ಕರೆಸೋ ಮೊದ್ಲು. ಅಂತ ಅವಾಜ್ ಹಾಕಿದ್ದ ಎನ್ನಲಾಗಿದೆ. ಪರಮೇಶನಿಗೆ ಕ್ಯಾರೇ ಎನ್ನದೇ ಕೆಲಸ ಮುಂದುವರೆಸಿದ್ದಕ್ಕೆ ರೌಡಿಶೀಟರ್ ಕಾಮಗಾರಿ ನಿಲ್ಲಿಸಿದ್ದಾನೆ. ಮತ್ತು ಸೈಟ್ ಇಂಜಿನಿಯರ್​ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಘಟನೆ ಸಂಬಂಧ ಕಾಡುಗೋಡಿ ಠಾಣೆಗೆ ಜುನೈದ್ ಖಾನ್ ಎಂಬುವವರಿಂದ ದೂರು ದಾಖಲಾಗಿದೆ. ದೂರು ಆಧರಿಸಿ ರೌಡಿಶೀಟರ್ ಪರಮೇಶನನ್ನ ಕಾಡುಗೋಡಿ ಪೊಲೀಸರು ಲಾಕ್‌ ಮಾಡಿದ್ದಾರೆ.

ಇದನ್ನೂ ಓದಿ:  ಫಿಟ್ನೆಸ್ ಅಭಿಯಾನ: ಬೆಂಗಳೂರಲ್ಲಿ ವಾಲಿಬಾಲ್ ಆಡಿದ ಕೇಂದ್ರ ಸಚಿವ ಅನೂರಾಗ್ ಠಾಕೂರ್

Source: newsfirstlive.com Source link