ಗೋವಿಂದಪುರ ಡ್ರಗ್ಸ್ ಕೇಸ್​: ನಾಲ್ವರು ಸೆಲಬ್ರಿಟಿಗಳ ಮೇಲೆ ದಾಳಿ ಮಾಡಲು ಸಜ್ಜಾದ ಖಾಕಿ ಪಡೆ

ಗೋವಿಂದಪುರ ಡ್ರಗ್ಸ್ ಕೇಸ್​: ನಾಲ್ವರು ಸೆಲಬ್ರಿಟಿಗಳ ಮೇಲೆ ದಾಳಿ ಮಾಡಲು ಸಜ್ಜಾದ ಖಾಕಿ ಪಡೆ

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಕೇಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸ್ಫೋಟಕ ಮಾಹಿತಿಗಳು ದಿನ ಕಳೆದಂತೆ ಹೋರ ಬೀಳುತ್ತಿವೆ. ಡ್ರಗ್ಸ್ ಕೇಸ್ ಸಂಬಂಧ ವಿಚಾರಣೆ ಚುರುಕುಗೊಳಿಸಿರೋ ಪೊಲೀಸ್ರು, ತೀವ್ರ ತನಿಖೆ ನಡೆಸಿದ್ದು, ಮೊಬೈಲ್ ರಿಟ್ರೀವ್ ಮಾಹಿತಿಗಾಗಿ ಕಾಯುತ್ತಿದ್ದಾರೆ. ಅದರ ಬೆನ್ನಲ್ಲೇ ನಾಲ್ವರು ಸೆಲಬ್ರಿಟಿಗಳ ಮನೆ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಹೌದು ಬಗೆದಷ್ಟು ಆಳಕ್ಕೆ ಹೋಗ್ತಿದೆ ಗೋವಿಂದಪುರ ಡ್ರಗ್ ಕೇಸ್. ಆರೋಪಿ ಸೋನಿಯಾ ಅಗರ್ವಾಲ್ ಕಾಂಟ್ಯಾಕ್ಟ್ ನಲ್ಲಿದ್ದ ನಾಲ್ವರು ಸೆಲಬ್ರಿಟಿಗೆ ಶಾಕ್ ಕೊಡೋಕೆ ಪೊಲೀಸರು ತಯಾರಿ ನಡೆಸಿದ್ದಾರೆ ಎನ್ನಲಾಗಿದ್ದು, ನಾಲ್ವರು ಸೆಲಬ್ರಿಟಿಗಳು ಡ್ರಗ್ಸ್ ಚಟಕ್ಕೆ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಆ ನಾಲ್ವರು ಸೆಲೆಬ್ರಿಟಿಗಳ ವಿರುದ್ಧ ಸಾಕ್ಷಿ ಕಲೆ ಹಾಕುತ್ತಿರುವ ಪೊಲೀಸರು ಸಾಕ್ಷಿ ಸಮೇತ ಸೆಲಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಲು ಖಾಕಿ ಪಡೆ ಸನ್ನದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಆ ನಾಲ್ವರು ಸೆಲೆಬ್ರಿಟಿಗಳು ಯಾರೆಂಬುದೇ ಕೂತೂಹಲ ಮೂಡಿಸಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

ಸೋನಿಯಾ ಮತ್ತು ಸ್ನೇಹಿತರಿಗೆ ಹೋಟೆಲ್ ಗಳೇ ಡ್ರಗ್​ ಸೇವನೆಗೆ ಅಡ್ಡಗಳಾಗಿದ್ದವು ಎನ್ನಲಾಗಿದ್ದು, ಸೋನಿಯಾ ಕೊಕೇನ್ ಮತ್ತ ಚರಸ್ ಡ್ರಗ್​ನ್ನ ಅತಿ ಹೆಚ್ಚಾಗಿ ಬಳಸ್ತಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ. ಕೊಕೇನ್‌ ಮತ್ತು ಚರಸ್ ಗೆ ಚರ್ಲಿ ಅಂತ ಹೆಸರಿಟ್ಟು ಚಾಟ್ ಮಾಡ್ತಿದ್ರಂತೆ. ಕೋಡ್ ವರ್ಡ್ ಮೂಲಕ ಡ್ರಗ್ಸ್ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ನಗರದ ಐಷಾರಾಮಿ ಹೋಟೆಲ್ ಗಳಲ್ಲಿ ರೂಂ‌ಮ್​ ಬುಕ್ ಮಾಡಿ ಅಲ್ಲಿಯೂ ಡ್ರಗ್​ ಸೇವನೆ ನಡೆಯುತ್ತಿತ್ತು ಎನ್ನಲಾಗಿದ್ದು, ಪೇಜ ತ್ರೀ ಪಾರ್ಟಿಗಳಿಗೆ ಹೋದ್ರೆ ಮಾತ್ರ ಕಾರಲ್ಲೇ ಸೇವನೆ ಮಾಡ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಸೋನಿಯಾಗೆ ಡ್ರಗ್ಸ್ ಸಪ್ಲೈಗೆ ಸಾಥ್ ನೀಡ್ತಿದ್ದ 12 ಮಂದಿ ಸ್ನೇಹಿತರಿಗೆ ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

Source: newsfirstlive.com Source link