ಟ್ರಾಫಿಕ್​ ಪೊಲೀಸರ ಮೇಲೆ ಆರಗ ಜ್ಞಾನೇಂದ್ರ ಗರಂ..! ಯಾಕೆ ಗೊತ್ತಾ..?

ಟ್ರಾಫಿಕ್​ ಪೊಲೀಸರ ಮೇಲೆ ಆರಗ ಜ್ಞಾನೇಂದ್ರ ಗರಂ..! ಯಾಕೆ ಗೊತ್ತಾ..?

ಬೆಂಗಳೂರು: ಟ್ರಾಫಿಕ್​ ಪೊಲೀಸರ ಕಾರ್ಯ ವೈಖರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ವಾಹನ ಟೋಯಿಂಗ್ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ನ್ಯೂಸ್ ಚಾನೆಲ್ ನೋಡಿ ಕಲಿಯಿರಿ ಎಂದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿಐಜಿಪಿ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ನ್ಯೂಸ್​ಫಸ್ಟ್ ವರದಿಯನ್ನು ಉಲ್ಲೇಖಿಸಿ, ನ್ಯೂಸ್ ಚಾನೆಲ್ ನೋಡಿ ಕಲಿಯಿರಿ ಅವರು ರೂಲ್ಸ್​ ಬಗ್ಗೆ ಹೇಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಟೋಯಿಂಗ್​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕಾರು ಜಖಂ -ಚಪ್ಪಾಳೆ ತಟ್ಟಿ, ವಿಷಲ್ ಹಾಕಿ ಸಾರ್ವಜನಿಕರಿಂದ ವ್ಯಂಗ್ಯ

ನಾವು ಮಾಡಿದ ರೂಲ್ಸ್ ನಮ್ಮವರಿಗೆ ಫಾಲೋ ಮಾಡೋದು ಕಷ್ಟನಾ? ಇನ್ನಾದ್ರೂ ಟೋಯಿಂಗ್ ಮಾಡುವಾಗ ರೂಲ್ಸ್  ಫಾಲೋ ಮಾಡಿ. ಟೋಯಿಂಗ್​ ಮಾಡೋ ಮುನ್ನ ಕೆಲ ನಿಯಮಗಳನ್ನು ಪಾಲಿಸಬೇಕು ಆದರೆ ಹಾಗೆ ಮಾಡಲ್ಲ. ಹಾಗೆ ಮಾಡಿದ್ರೆ ಸಂಬಂಧಪಟ್ಟವರು ಬಂದು ವಾಹನ ತೆಗೆಯುತ್ತಾರೆ. ಅದಕ್ಕೆ ಅವಕಾಶ ನೀಡದೇ ಟ್ರಾಫಿಕ್​ ಪೊಲೀಸರು ಟೋಯಿಂಗ್ ಮಾಡ್ತಾ ಇರುವ ಆರೋಪ ಕೇಳಿ ಬಂದಿದೆ. ಇನ್ಮುಂದೆ ಟೋಯಿಂಗ್ ವೇಳೆ ವಾಹನಗಳು ಡ್ಯಾಮೇಜ್ ಆದ್ರೆ ಕ್ರಮಕೈಗೊಳ್ಳಲಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ:ಗಾಡಿ ಕೊಂಡೊಯ್ಯಲು ಬಂದ ಟೋಯಿಂಗ್​​ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಇದನ್ನೂ ಓದಿ:  ಟೋಯಿಂಗ್​​ ಸಿಬ್ಬಂದಿ ದೌರ್ಜನ್ಯದ ಬಗ್ಗೆ ದೂರು; ಯೂನಿಫಾರ್ಮ್​​ಗೆ ಕ್ಯಾಮರಾ ಅಳವಡಿಸಲು ಚಿಂತನೆ

Source: newsfirstlive.com Source link