‘ಯುದ್ಧ ಮುಗಿದಿದೆ’ ಎಂದ ತಾಲಿಬಾನ್ -ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಯಾವೆಲ್ಲಾ ದೇಶಗಳಿಗೆ ಆಹ್ವಾನ..?

‘ಯುದ್ಧ ಮುಗಿದಿದೆ’ ಎಂದ ತಾಲಿಬಾನ್ -ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಯಾವೆಲ್ಲಾ ದೇಶಗಳಿಗೆ ಆಹ್ವಾನ..?

ಅಘ್ಫಾನಿಸ್ತಾನವನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿಗಳು, ಸರ್ಕಾರ ರಚನೆ ಮಾಡುವ ಹಂತಕ್ಕೆ ಬಂದಿದ್ದಾರೆ. ಈಗಾಗಲೇ ಪಂಜ್​ಶೀರ್​ ಕೂಟೆಯೂ ತಮ್ಮದಾಗಿದೆ ಎಂದು ಹೇಳಿಕೊಂಡಿರುವ ತಾಲಿಬಾನಿಗಳು, ಅಲ್ಲಿನ ರಾಜ್ಯಪಾಲರ ಕಚೇರಿಯಲ್ಲಿ ಧ್ವಜವನ್ನ ಹಾರಿಸಿ ಸಂಭ್ರಮಿಸಿದ್ದಾರೆ. ಆದರೆ ನಾರ್ಥರ್ನ್ ಅಲಯನ್ಸ್ ಪಂಜ್​ಶೀರ್​ ವ್ಯಾಲಿ ನಮ್ಮ ಹಿಡತದಲ್ಲಿಯೇ ಇದೆ ಎಂದಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ಪಾಲಾದ ಪಂಜ್​ಶೀರ್​​ -ರಾಜ್ಯಪಾಲರ ಕಚೇರಿ ಧ್ವಂಸ ಮಾಡಿ, ಧ್ವಜ ಹಾರಿಸಿದ ತಾಲಿಬಾನಿಗಳು

ಕೆಲವು ವರದಿಗಳ ಪ್ರಕಾರ, ತಾಲಿಬಾನಿಗಳು ಸರ್ಕಾರ ರಚನೆಯಲ್ಲಿ ಕಸರತ್ತು ನಡೆಸಿತ್ತಿದ್ದು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಇದರ ಮುಂದುವರಿದ ಭಾಗವಾಗಿ ಈಗಾಗಲೇ ಸರ್ಕಾರ ರಚನೆಯ ಕಾರ್ಯಕ್ರಮಕ್ಕೆ ಕೆಲವು ರಾಷ್ಟ್ರಿಗಳಿಗೆ ತಾಲಿಬಾನಿಗಳು ಆಹ್ವಾನ ನೀಡಿವೆ. ಪಾಕಿಸ್ತಾನ, ಚೀನಾ, ತುರ್ಕಿ, ರಷ್ಯಾ, ಖತಾರ್ ಹಾಗೂ ಇರಾನ್​ಗೆ ತಾಲಿಬಾನಿಗಳು ಆಹ್ವಾನ ನೀಡಿದ್ದಾರೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ‘MUSIC’ ಅಂದ್ರೆ ಯಾಕಿಷ್ಟು ಕೋಪ..? ತಾಲಿಬಾನಿಗಳಿಂದ ಸ್ಟುಡಿಯೋಗಳಿಗೆ ನುಗ್ಗಿ ಸಂಗೀತ ವಾದ್ಯಗಳ ಧ್ವಂಸ

ತಾಲಿಬಾನ್ ವಕ್ತಾರ ಜಬಿವುಲ್ಲಹ್ ಮುಜಾಹಿದ್ ನೀಡಿರುವ ಮಾಹಿತಿ ಪ್ರಕಾರ.. ಯುದ್ಧ ಮುಗಿದಿದೆ. ಅಫ್ಘಾನಿಸ್ತಾದಲ್ಲಿ ಇನ್ಮುಂದೆ ಸಹಜಸ್ಥಿತಿಯಲ್ಲಿರಲಿದೆ ಎಂಬ ವಿಶ್ವಾಸ ಇದೆ. ಇನ್ಮುಂದೆ ಯಾರಾದರೂ ಮತ್ತೆ ಶಸ್ತ್ರಸಜ್ಜಿತರಾದರೆ, ಅವರು ಮನುಷ್ಯ ವಿರೋಧಿಗಳು ಮತ್ತು ದೇಶ ವಿರೋಧಿಗಳು ಎಂದು ಇದೇ ವೇಳೆ ಹೇಳಿದ್ದಾನೆ. ಖತಾರ್​, ತುರ್ಕಿ ಹಾಗೂ UAEನಿಂದ ಟೆಕ್ನಿಕಲ್ ಟೀಂ ಬರುತ್ತಿದೆ. ಅವರು ಬಂದ ನಂತರ ಕಾಬೂಲ್ ಏರ್​ಪೋರ್ಟ್​ ಮತ್ತೆ ಕೆಲಸ ಆರಂಭಿಸಲಿದೆ.

ಇದನ್ನೂ ಓದಿ: ಪಂಜ್​ಶೀರ್​ ತಾಲಿಬಾನಿಗಳ ಪಾಲಾಗಲು ಸಹಾಯ ಮಾಡಿದ್ದು ಪಾಕ್ -ವರದಿ

Source: newsfirstlive.com Source link