T20 ವಿಶ್ವಕಪ್​​​; ಅನುಭವಿಗಳಿಗೆ ಟಕ್ಕರ್​​ ಕೊಡ್ತಾರಾ ಯುವಕರು? ಪಡಿಕ್ಕಲ್​​ಗೆ ಹೊಡೆಯುತ್ತಾ ಜಾಕ್​ಪಾಟ್?

T20 ವಿಶ್ವಕಪ್​​​; ಅನುಭವಿಗಳಿಗೆ ಟಕ್ಕರ್​​ ಕೊಡ್ತಾರಾ ಯುವಕರು? ಪಡಿಕ್ಕಲ್​​ಗೆ ಹೊಡೆಯುತ್ತಾ ಜಾಕ್​ಪಾಟ್?

ತಂಡಕ್ಕೆ ಆಯ್ಕೆಯಾಗಲಿರೋ ಪ್ರಮುಖ ಆಟಗಾರರು, ತಂಡದಿಂದ ಹೊರಗುಳಿಯೋ ಆಟಗಾರರ ಪಟ್ಟಿಯಂತೆ, ಸರ್ಪ್ರೈಸ್​​​ ಆಗಿ ತಂಡಕ್ಕೆ ಎಂಟ್ರಿಕೊಡೋಕೂ ಯುವ ಆಟಗಾರರ ದಂಡೇ ಕಾದು ಕುಳಿತಿದೆ. ಯಾವೆಲ್ಲಾ ಯುವ ಆಟಗಾರರು ಅಚ್ಚರಿಯ ಆಯ್ಕೆಯಾಗಿ ತಂಡಕ್ಕೆ ಎಂಟ್ರಿ ಕೊಡೋ ಸಾಧ್ಯತೆಯಿದೆ ಅನ್ನೋದರ ಡಿಟೇಲ್ಸ್​​ ಇಲ್ಲಿದೆ ನೋಡಿ.

ಯಾರಿಗೆ ಸ್ಥಾನ..? ಯಾರಿಗೆ ಗೇಟ್​​ಪಾಸ್..? ಇವು ಚುಟುಕು ವಿಶ್ವಕಪ್​ ಟೂರ್ನಿಗೆ ತಂಡವನ್ನ ಸೆಲೆಕ್ಟ್​​ ಮಾಡಲು ಕೌಂಟ್​​​ಡೌನ್​ ಆರಂಭವಾಗಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿಯೋ ಪ್ರಶ್ನೆಗಳು. ಕ್ರಿಕೆಟ್​​ ಏಕ್ಸ್​​ಪರ್ಟ್ಸ್​​​, ಮಾಜಿ ಕ್ರಿಕೆಟರ್ಸ್​​​ ಎಲ್ಲರೂ ಟಾಪ್​​ ಆಟಗಾರರನ್ನ ಒಳಗೊಂಡ ತಂಡವನ್ನೇ ಪ್ರಕಟಣೆ ಮಾಡ್ತಿದ್ದಾರೆ. ಆದ್ರೆ, ಮಹತ್ವದ ಟೂರ್ನಿಯಲ್ಲಿ ಆಡಲು ಸಮರ್ಥ ಸಾಮರ್ಥ್ಯ ಹೊಂದಿರೋ ಹಲ ಯುವ ಆಟಗಾರರು ಕೂಡ ರೇಸ್​​​ನಲ್ಲಿದ್ದಾರೆ ಅನ್ನೋದನ್ನ ಮರೆಯುವಂತಿಲ್ಲ.

blank

ಭರವಸೆಯ ಪ್ರದರ್ಶನ ನೀಡಿರುವ ಯಂಗ್​ಗನ್ಸ್​

ಪಿಎಲ್​ನ ರಾಯಲ್​ ಚಾಲೆಂಜರ್ಸ್​​​ ಬೆಂಗಳೂರು ತಂಡದ ಆರಂಭಿಕ ಆಟಗಾರ, ಕನ್ನಡಿಗ ದೇವದತ್​ ಪಡಿಕ್ಕಲ್​ ಕೂಡ ವಿಶ್ವಕಪ್​ ಟಿಕೆಟ್​​ನ ಪ್ರಬಲ ಆಕಾಂಕ್ಷಿ. ಈಗಾಗಲೇ ಐಪಿಎಲ್​ ಹಾಗೂ ದೇಶಿ ಕ್ರಿಕೆಟ್​​ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿರೋ ಪಡಿಕ್ಕಲ್,​ ಸ್ವತಃ ನಾಯಕ ವಿರಾಟ್​​ ಕೊಹ್ಲಿಯ ಮನವನ್ನೂ ಗೆದ್ದಿದ್ದಾರೆ. ಪಡಿಕ್ಕಲ್​ ಜೊತೆಗೆ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಬ್ಯಾಟರ್​​​ ಋತುರಾಜ್​ ಗಾಯಕ್ವಾಡ್​ ಕೂಡ ಪ್ರಾಮಿಸಿಂಗ್​ ಪ್ರದರ್ಶನ ನೀಡಿದ್ದಾರೆ. ಇವರನ್ನೂ ಆಯ್ಕೆಯಿಂದ ಹೊರಗಿಡೋದು ಕಠಿಣ ನಿರ್ಧಾವಾಗಲಿದೆ.

blank

ಸರ್​​ಪ್ರೈಸ್​ ಪ್ಯಾಕೇಜ್​ ಆಗಿ ಎಂಟ್ರಿ ಕೊಡ್ತಾರಾ.?

ಇವರ ಜೊತೆಗೆ ವೇಗಿಗಳಾದ ಚೇತನ್​ ಸಕಾರಿಯಾ, ಹರ್ಷಲ್​ ಪಟೇಲ್​, ಆರ್ಷ್​​ದೀಪ್​ ಸಿಂಗ್​ ಕೂಡ ಪೈಪೋಟಿಯಲ್ಲಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮೊದಲಾರ್ಧದಲ್ಲಿ ಈ ಮೂವರೂ ಅಮೋಘ ಪ್ರದರ್ಶನ ನೀಡಿದ್ದಾರೆ. ಜೊತೆಗೆ ದೇಶಿ ಕ್ರಿಕೆಟ್​​ನಲ್ಲಿ ಮ್ಯಾಜಿಕ್​ ಮಾಡಿದ ಅನುಭವವೂ ಇವರಿಗಿದೆ. ಹೀಗಾಗಿ ಇವರು ಸರ್​​ಪ್ರೈಸ್​ ಆಯ್ಕೆಯಾಗೋ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗದಂತೆ ಸ್ಪಿನ್​ ವಿಭಾಗದಲ್ಲೂ ಸರ್​​​ಪ್ರೈಸ್​​ ಆಯ್ಕೆಯಾಗೋ ಸಾಮರ್ಥ್ಯವಿರೋ ಆಟಗಾರರಿದ್ದಾರೆ. ವಾಷಿಂಗ್ಟನ್ ಸುಂದರ್​​ ಇಂಜುರಿಗೆ ತುತ್ತಾಗಿರೋದ್ರಿಂದ ಅಕ್ಷರ್​​ ಪಟೇಲ್​ ಅವಕಾಶ ನೀಡೋ ಸಾಧ್ಯತೆಯಿದೆ. ಬೌಲ್​ ಜೊತೆ ಜೊತೆಗೆ ಬ್ಯಾಟ್​ನಲ್ಲೂ ಮ್ಯಾಜಿಕ್​ ಮಾಡೋ ಸಾಮರ್ಥ್ಯ ಅಕ್ಷರ್​ಗಿದೆ. ಪಂಜಾಬ್​ ಕಿಂಗ್ಸ್​ನ ಹರ್ಪ್ರೀತ್​ ಬ್ರಾರ್​, ಆರ್​ಸಿಬಿ ಆಲ್​​ರೌಂಡರ್​​ ಶಹಬಾಜ್ ಅಹ್ಮದ್​ ಕೂಡ ಸ್ಥಾನದ ನಿರೀಕ್ಷೆಯಲ್ಲಿರೋ ಆಟಗಾರರಾಗಿದ್ದಾರೆ.

ಯಾವೆಲ್ಲಾ ಆಟಗಾರರಿಗಿದೆ ಸ್ಥಾನ ಸಿಗೋ ಸಾಧ್ಯತೆ.?

ದೇವದತ್ತ್ ಪಡಿಕ್ಕಲ್​ (ಬ್ಯಾಟ್ಸ್​ಮನ್), ಋತುರಾಜ್​ ಗಾಯಕ್ವಾಡ್​ (ಬ್ಯಾಟ್ಸ್​ಮನ್), ಅಕ್ಷರ್​ ಪಟೇಲ್​ (ಆಲ್​ರೌಂಡರ್)​, ಶಹಬಾಜ್ ಅಹ್ಮದ್​​ (ಆಲ್​ರೌಂಡರ್)​, ಆರ್ಷ್​​ದೀಪ್​ ಸಿಂಗ್​ (ವೇಗಿ), ಚೇತನ್​ ಸಕಾರಿಯಾ (ವೇಗಿ), ಹರ್ಷಲ್ ಪಟೇಲ್​ ವೇಗಿ, ಹರ್ಪ್ರೀತ್​ ಬ್ರಾರ್​​ (ಸ್ಪಿನ್ನರ್​)..

Source: newsfirstlive.com Source link