ಕೊಪ್ಪಳ ಪುರಸಭೆ ಬಿಜೆಪಿ ತೆಕ್ಕೆಗೆ; ಒಂಟೆ ಮೇಲೇರಿ ಧ್ವಜ ಹಿಡಿದು ಸಂಭ್ರಮಿಸಿದ ಕಾರ್ಯಕರ್ತರು

ಕೊಪ್ಪಳ ಪುರಸಭೆ ಬಿಜೆಪಿ ತೆಕ್ಕೆಗೆ; ಒಂಟೆ ಮೇಲೇರಿ ಧ್ವಜ ಹಿಡಿದು ಸಂಭ್ರಮಿಸಿದ ಕಾರ್ಯಕರ್ತರು

ಕೊಪ್ಪಳ: ಜಿಲ್ಲೆಯ ಪುರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ನಾಯಕವಾಡಿ ಜಯಗಳಿಸಿದ ಹಿನ್ನೆಲೆ ಕಾರ್ಯಕರ್ತರು ಒಂಟೆಮೇಲೆ ಪಕ್ಷದ ಧ್ವಜ ಹಿಡಿದು ಸಂಭ್ರಮಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: ನಿರೀಕ್ಷೆ ತಕ್ಕಂತೆ ಚುನಾವಣಾ ಫಲಿತಾಂಶ ಬಂದಿಲ್ಲ, ತೀರ್ಪು ಒಪ್ಪಿಕೊಳ್ತೇವೆ -ಸಿದ್ದರಾಮಯ್ಯ

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಪಾರ್ವತಿ ವಿರುದ್ಧ 166 ಮತಗಳಿಂದ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ನಾಯಕವಾಡಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ಪುರಸಭೆ ಅಧ್ಯಕ್ಷ ಗಂಗಾಧರ್ ಹಿರೇಮಠ ಸೇರಿದಂತೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

Source: newsfirstlive.com Source link