ವಿದ್ಯಾರ್ಥಿಗಳು ಕಾಲೇಜಿನ ID ತೋರಿಸಿ ತಾತ್ಕಾಲಿಕವಾಗಿ ಪ್ರಯಾಣಿಸಬಹುದು: ಶಿಕ್ಷಣ ಸಚಿವ

ವಿದ್ಯಾರ್ಥಿಗಳು ಕಾಲೇಜಿನ ID ತೋರಿಸಿ ತಾತ್ಕಾಲಿಕವಾಗಿ ಪ್ರಯಾಣಿಸಬಹುದು: ಶಿಕ್ಷಣ ಸಚಿವ

ಬೆಂಗಳೂರು: ಬರೊಬ್ಬರಿ 18 ತಿಂಗಳ ಬಳಿಕ ಶಾಲೆಗಳು ವಿದ್ಯಾರ್ಥಿಗಳ ಕಲರವದಿಂದ ಕಂಗೊಳಿಸುತ್ತಿವೆ. ಇಂದಿನಿಂದ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಕೋವಿಡ್ ಸುರಕ್ಷತಾ ಕ್ರಮ ಅನುಸರಿಸಿ ತರಗತಿಗಳು ನಡೆಯುತ್ತಿವೆ. ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸಲು ಸರ್ಕಾರ ಸೂಚನೆ ಹೊರಡಿಸಿದ್ದು ವಿದ್ಯಾರ್ಥಿಗಳು ಶಾಲೆಯತ್ತ ಸಂಭ್ರಮದಿಂದಲೇ ಹೆಜ್ಜೆ ಹಾಕಿ ಶಾಲಾ ಆವರಣವನ್ನ ರಂಗೇರಿಸಿದ್ದಾರೆ.

ಇದನ್ನೂ ಓದಿ:18 ತಿಂಗಳ ಬಳಿಕ ಶಾಲೆ ಆರಂಭ.. ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​, ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಬಂದಿದ್ದಾರೆ. ಕೊರೊನಾ ತಗ್ಗಿದಂತೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲು ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ.

ಪಾಸ್ ಕಳೆದುಕೊಂಡವರಿಗೆ ಮಾತ್ರ
ಜೊತೆಗೆ 18 ತಿಂಗಳುಗಳಿಂದ ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿಗಳಿಗೆ ಬಸ್​ ಪಾಸ್​ಗಳನ್ನು ಸಮರ್ಪಕವಾಗಿ ವಿತರಿಸಲಾಗಿಲ್ಲ. ಬಹುತೇಕ ವಿದ್ಯಾರ್ಥಿಗಳು ಇದುವರೆಗೆ ಈ ಶೈಕ್ಷಣಿಕ ವರ್ಷದ ಬಸ್​ಪಾಸ್​ಗಳನ್ನು ತೆಗೆದುಕೊಂಡಿಲ್ಲ. ಈ ಕುರಿತು ಸ್ಪಷ್ಟನೆ ನೀಡಿದ ಸಚಿವರು ಸದ್ಯ ಹೋದ ವರ್ಷದ ಬಸ್​ಪಾಸ್​ಗಳನ್ನು ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಲು ಸಾರಿಗೆ ಇಲಾಖೆ ಅನುಮತಿ ನೀಡಿದೆ ಎಂದಿದ್ದಾರೆ. ಜೊತೆಗೆ ಪಾಸ್​ ಅರ್ಹ ವಿದ್ಯಾರ್ಥಿಗಳು ಹಳೆಯ ಪಾಸ್​ಗಳನ್ನು ಕಳೆದುಕೊಂಡಿದ್ದರೆ ಕಾಲೇಜಿನ ಐಡಿ ಕಾರ್ಡ್​ ತೋರಿಸಿ ಪ್ರಯಾಣಿಸಲು ಸಾರಿಗೆ ಇಲಾಖೆ ಅವಕಾಶ ನೀಡಿದೆ ಎಂದಿದ್ದಾರೆ.

ಇದನ್ನೂ ಓದಿ:ಮಕ್ಕಳು ಖುಷಿಯಿಂದ ಶಾಲೆಗೆ ಬರ್ತಿದ್ದಾರೆ, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ -ನಾಗೇಶ್

Source: newsfirstlive.com Source link