‘ರಾತ್ರಿ 8 ಗಂಟೆಯೊಳಗೆ ಪೂಜೆ, 9 ಗಂಟೆ ವೇಳೆಗೆ ಗಣೇಶ ವಿಸರ್ಜನೆ ಕಡ್ಡಾಯ’- ಸಚಿವ ಆರ್​​.ಅಶೋಕ್​

‘ರಾತ್ರಿ 8 ಗಂಟೆಯೊಳಗೆ ಪೂಜೆ, 9 ಗಂಟೆ ವೇಳೆಗೆ ಗಣೇಶ ವಿಸರ್ಜನೆ ಕಡ್ಡಾಯ’- ಸಚಿವ ಆರ್​​.ಅಶೋಕ್​

ಬೆಂಗಳೂರು: ಮಾರಕ ಕೊರೊನಾ ಬಿಕ್ಕಟ್ಟಿನ ನಡುವೆ ಹಲವು ಷರತ್ತುಬದ್ಧ ನಿಯಮಗಳೊಂದಿಗೆ ಗರಿಷ್ಠ ಐದು ದಿನಗಳ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ಹಬ್ಬದ ನಿಯಮ ಪಾಲನೆಯ ಉಸ್ತುವಾರಿ ಬಿಬಿಎಂಪಿಗೆ ವಹಿಸಲಾಗಿದೆ. ಈ ಸಂಬಂಧ ಮಾತಾಡಿದ ಆರ್​​. ಅಶೋಕ್​​​, ಕೊರೋನಾ ಕಾರಣ ಎಲ್ಲರೂ 8 ಗಂಟೆಯೊಳಗೆ ಪೂಜೆ ಮುಗಿಸಿ 9 ಗಂಟೆಯೊಳಗೆ ಗಣೇಶನ ವಿಸರ್ಜನೆ ಮಾಡಬೇಕು ಎಂದಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯಿಂದ ಗಣೇಶ ವಿಸರ್ಜನೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಗಣೇಶ ವಿಸರ್ಜನೆಗೆ ಸಾರ್ವಜನಿಕರಿಗೆ ಅವಕಾಶ ಇಲ್ಲ. ನುರಿತ ಈಜುಗಾರರ ತಂಡ ಗಣೇಶ ವಿಸರ್ಜನೆ ಮಾಡಲಿದೆ. ಗಣೇಶ ವಿಸರ್ಜನೆಗೆ 20 ಜನರು ಮಾತ್ರ ಬರಬೇಕು ಎಂದು ಹೇಳಿದರು.

ಗಣೇಶ್ ಕೂರಿಸುವ ಸ್ಥಳಗಳಲ್ಲಿ ಲಸಿಕೆ ಅಭಿಯಾನ ಮಾಡುತ್ತೇವೆ. 9 ಗಂಟೆಗೆ ಕರ್ಫ್ಯೂ ಇರುವ ಕಾರಣ 8 ಗಂಟೆ ಒಳಗೆ ಗಣೇಶ ಪೂಜೆಗಳನ್ನ ಮುಗಿಸಬೇಕು. ಮನೆಗಳಲ್ಲಿ ಗಣೇಶ ಮೂರ್ತಿ ಇಡುವವರಿಗಾಗಿ ವಿಸರ್ಜನೆಗಾಗಿ ಮೊಬೈಲ್​​ ಟ್ಯಾಂಕ್​​ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ನಿರೀಕ್ಷೆ ತಕ್ಕಂತೆ ಚುನಾವಣಾ ಫಲಿತಾಂಶ ಬಂದಿಲ್ಲ, ತೀರ್ಪು ಒಪ್ಪಿಕೊಳ್ತೇವೆ -ಸಿದ್ದರಾಮಯ್ಯ

ನಿಮ್ಮ ಏರಿಯಾಗಳಿಗೆ ವಿತ್ ಮೈಕ್ ಅನೌನ್ಸ್​ಮೆಂಟ್​​​​​ ಮೂಲಕ ಮೊಬೈಲ್​​ ಟ್ಯಾಂಕ್​​ ಬರಲಿದೆ. ಸಾಧ್ಯವಾದಷ್ಟು ಬೆಳಿಗ್ಗೆಯೇ ಗಣೇಶನ ಕೂರಿಸಿ ಸಂಜೆಯ ವೇಳೆ ವಿಸರ್ಜನೆ ಮಾಡಿ ಎಂದು ಸಾರ್ವಜನಿಕರಿಗೆ ಆರ್​​. ಅಶೋಕ್​​ ಮನವಿ ಮಾಡಿದ್ದಾರೆ.

Source: newsfirstlive.com Source link