ಲಿಯಾಂಡರ್ ಪೇಸ್ ರಿಲೇಷನ್​ಶಿಪ್​​ಗೆ ಅಧಿಕೃತ ಮುದ್ರೆ ಒತ್ತಿದ್ರಾ ಕಿಮ್​ ಶರ್ಮಾ?

ಲಿಯಾಂಡರ್ ಪೇಸ್ ರಿಲೇಷನ್​ಶಿಪ್​​ಗೆ ಅಧಿಕೃತ ಮುದ್ರೆ ಒತ್ತಿದ್ರಾ ಕಿಮ್​ ಶರ್ಮಾ?

ಬಾಲಿವುಡ್​ ನಟಿ ಕಿಮ್​ ಶರ್ಮಾ ಮತ್ತು ಭಾರತದ ಖ್ಯಾತ ಟೆನಿಸ್​ ಆಟಗಾರ ಲಿಯಾಂಡರ್ ಪೇಸ್ ಇಬ್ಬರು ಡೇಟಿಂಗ್ ನಡೆಸುತ್ತಿರೋ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಆದರೆ ಈ ಬಗ್ಗೆ ಇಬ್ಬರು ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ. ಆದರೆ ಇದೀಗ ಸ್ವತಃ ನಟಿ ಕಿಮ್ ಶರ್ಮಾ ಅವರೇ ಈ ವದಂತಿಗೆ ತೆರೆ ಎಳೆದಿದ್ದಾರೆ.

blank

ಹೌದು, ನಟಿ ಕಿಮ್​ ಶರ್ಮಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಟೋವೊಂದನ್ನು ಪೋಸ್ಟ್​ ಮಾಡುವ ಮೂಲಕ ತಮ್ಮ ಹಾಗೂ ಲಿಯಾಂಡರ್ ಪೇಸ್ ನಡುವಿನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಕಿಮ್​ ಶರ್ಮಾ, ಲಿಯಾಂಡರ್ ಪೇಸ್ ಜೊತೆಗಿರುವ ಫೋಟೋಗೆ ಇಬ್ಬರ ನಡುವೆ ಲವ್​​ ಇಮೋಜಿ ಹಾಕುವ ಮೂಲಕ ರಿಲೇಷನ್​ಶಿಪ್​​ ಬಗ್ಗೆ ಸುಳಿವು ಕೊಟ್ಟಿದ್ದಾರೆ.

blank

ಈ ಹಿಂದೆ ಹಲವು ಬಾರಿ ಇಬ್ಬರ ನಡುವಿನ ಸಂಬಂಧದ  ಬಗ್ಗೆ ವದಂತಿಗಳು ಹಲವು ಬಾರಿ ಸುದ್ದಿಯಾಗಿದವು. ಅದ್ರೆ ಇಬ್ಬರು ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕಿಮ್​ ಶರ್ಮಾ ತಾವು ಲಿಯೆಂಡರ್​ ಪೇಸ್ ಜೊತೆಗೂ ರಿಲೇಶನ್​ ಶಿಪ್​ನಲ್ಲಿ ಇದ್ದಾರೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಇನ್ನು ಕಿಮ್​ ಶರ್ಮಾ ಅವರಿಗೆ 2010 ರಲ್ಲಿ ಅಲಿ ಪೂಂಜನಿ ಎಂಬುವವರ ಜೊತೆ ವಿವಾಹವಾಗಿದ್ರು, 2017 ಪತಿಯಿಂದ ವಿಚ್ಛೇದನ ಪಡೆದಿದ್ರು.

ಇದನ್ನೂ ಓದಿ: ಟೆನ್ನಿಸ್ ಅಖಾಡದಿಂದ ಹೊಸ ಅಖಾಡಕ್ಕೆ ಲಿಯಾಂಡರ್ ಪೇಸ್; ಕಿಮ್ ಶರ್ಮಾ ಜೊತೆ ರೊಮ್ಯಾನ್ಸ್?

ಇದನ್ನೂ ಓದಿ: ಮತ್ತೆ ಕಾಣಿಸಿಕೊಂಡ ಕಿಮ್​ ಶರ್ಮಾ & ಲಿಯಾಂಟರ್​ ಪೇಸ್​.. ಪ್ರೀತಿಯ ಶ್ವಾನದ ಜೊತೆ ವಾಕಿಂಗ್​

 

View this post on Instagram

 

A post shared by Kimi Sharma (@kimsharmaofficial)

Source: newsfirstlive.com Source link