ಒಂದು ಬಾವಿಯೊಳಗಿನ ಕಥೆ: ಚಿರತೆ ಮತ್ತು ಬೆಕ್ಕಿನ ಸೆಣಸಾಟ ಹೇಗಿತ್ತು?-ವಿಡಿಯೋ

ಒಂದು ಬಾವಿಯೊಳಗಿನ ಕಥೆ: ಚಿರತೆ ಮತ್ತು ಬೆಕ್ಕಿನ ಸೆಣಸಾಟ ಹೇಗಿತ್ತು?-ವಿಡಿಯೋ

ಇಲಿ ಮತ್ತು ಸಿಂಹದ ಕಥೆ ಬಗ್ಗೆ ನಿಮ್ಗೆ ಗೊತ್ತು. ಆದರೆ ಇದು ಚಿರತೆ ಮತ್ತು ಬೆಕ್ಕಿನ ಕಥೆ..! ಅದು ಒಂದು ಬಾವಿಯಲ್ಲಿ ನಡೆದ ಕತೆ. ಅಳಿವು, ಉಳಿವಿನ ಪ್ರಾಣ ಸಂಕಟದ ಹೋರಾಟದಲ್ಲಿ ಎರಡು ಪ್ರಾಣಿಗಳು ಜೀವ ಭಯದ ಆತಂಕಕ್ಕೆ ಸಿಲುಕಿ ಪರದಾಡಿದ ಘಟನೆ ಇದು.

ಮಹಾರಾಷ್ಟ್ರದ ಪಶ್ಚಿಮ ನಾಶಿಕ್​​ನಲ್ಲಿ ಚಿರತೆಯೊಂದು ಬೆಕ್ಕನ್ನು ನೋಡಿತ್ತು. ಇಂದಿನ ಊಟಕ್ಕೆ ಆಹಾರವಾಗಬಹುದು ಎಂದುಕೊಂಡ ಚಿರತೆ, ಬೆಕ್ಕಿನ ಬೆನ್ನ ಹಿಂದೆ ಬಿದ್ದಿದೆ. ಬೆಕ್ಕು ಚಿರತೆಯಿಂದ ತಪ್ಪಿಸಿಕೊಳ್ಳಲು ಓಡಿದೆ. ದುರಾದೃಷ್ಟವಶಾತ್ ಓಡುವ ರಭಸದಲ್ಲಿ ಬೆಕ್ಕು ಬಾವಿಗೆ ಬಿದ್ದಿದೆ.

ಬೆಕ್ಕಿನ ಬೆನ್ನ ಹಿಂದೆಯೇ ಇದ್ದ ಚಿರತೆ ಕೂಡ ಬಾವಿಗೆ ಜಾರಿದೆ. ಒಂದೇ ಬಾವಿಯಲ್ಲಿ ಚಿರತೆ ಹಾಗೂ ಬೆಕ್ಕುಗಳು ಸಿಲುಕಿಕೊಂಡಿವೆ. ನೀರಿಗೆ ಬಿದ್ದ ಎರಡೂ ಪ್ರಾಣಿಗಳು ಈಜಾಡಿ, ಪಕ್ಕದಲ್ಲಿದ್ದ ದಂಡೆಗೆ ಬಂದು ನಿಂತವು.
ಬೆಕ್ಕಿಗೆ ಎರಡೆರಡು ಪ್ರಾಣ ಸಂಕಟವಾದ್ರೆ, ಚಿರತೆಗೂ ಜೀವ ಭಯ ಕಾಡಿದೆ. ಆದರೂ ಹಸಿವು ಚಿರತೆಯನ್ನ ಬಿಡಲಿಲ್ಲ, ಬೆಕ್ಕನ್ನ ಬೇಟೆ ಆಡಲೇಬೇಕು ಅಂದ್ಕೊಂಡು ಹಿಡಿಯಲು ಹೊರಟಿದೆ. ಕಿಲಾಡಿ ಬೆಕ್ಕು ಚಿರತೆಗೆ ಚಳ್ಳೆಹಣ್ಣು ತಿನ್ನಿಸಲು ಏನೆಲ್ಲಾ ಪ್ಲಾನ್ ಮಾಡಬೇಕೋ ಅದನೆಲ್ಲಾ ಮಾಡಿದೆ. ಚಿರತೆ ಮತ್ತು ಬೆಕ್ಕಿನ ಆಟ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ಚಿರತೆಯನ್ನ ರಕ್ಷಣೆ ಮಾಡಲಾಗಿದೆ. ಆದರೆ ಬೆಕ್ಕು ಏನಾಯಿತು ಅನ್ನೋದ್ರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

Source: newsfirstlive.com Source link