ಬಿಜೆಪಿ ತೆಕ್ಕೆಗೆ ಬೆಳಗಾವಿ ಪಾಲಿಕೆ: ‘ಫಲಿತಾಂಶ ನೋಡಿ ಆಶ್ಚರ್ಯವಾಯ್ತು’ ಅಂದ್ರು ಹೆಬ್ಬಾಳ್ಕರ್​

ಬಿಜೆಪಿ ತೆಕ್ಕೆಗೆ ಬೆಳಗಾವಿ ಪಾಲಿಕೆ: ‘ಫಲಿತಾಂಶ ನೋಡಿ ಆಶ್ಚರ್ಯವಾಯ್ತು’ ಅಂದ್ರು ಹೆಬ್ಬಾಳ್ಕರ್​

ಬೆಂಗಳೂರು: ಕುಂದಾನಗರಿಯಲ್ಲಿ ಬರೋಬ್ಬರಿ 30 ವರ್ಷದ ಬಳಿಕ ಕೇಸರಿ ಪಡೆ ಪಾಲಿಕೆ ಚುಕ್ಕಾಣಿ ಹಿಡಿದು ಗೆದ್ದು ಬೀಗಿದೆ. ಈ ಫಲಿತಾಂಶ ಎಂಇಎಸ್​, ವಿರೋಧ ಪಕ್ಷ ಕಾಂಗ್ರೆಸ್​ಗೆ ಬಾರಿ ಮುಖಭಂಗವಾಗಿದೆ.

ಈ ಕುರಿತು ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಕಾಂಗ್ರೆಸ್​ ನಾಯಕಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಫಲಿತಾಂಶ ನೋಡಿ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ. ನಮ್ಮ ನಿರೀಕ್ಷೆ ಹುಸಿಯಾಗಿದೆ ಬಿಜೆಪಿಯವರ ಸಾಫ್ಟ್​ ಹಿಂದುತ್ವ ಕೆಲಸ ಮಾಡಿದೆ ಎಂದಿದ್ದು, ಹಲವು ವರ್ಷಗಳಿಂದ ಎಂಇಎಸ್​ ಪಾಲಿಕೆಯಲ್ಲಿ ಆಡಳಿತ ನಡೆಸಿತ್ತು.   ಆದರೆ ಇವತ್ತು ಎಂಇಎಸ್​ ಕೇವಲ 3 ಸ್ಥಾನಗಳನ್ನು ಪಡೆದಿದ್ದು ಬೆರಗಾಗಿಸಿದೆ ಎಂದರು.

ಮತದಾರರು ಕೊಟ್ಟ ಫಲಿತಾಶವನ್ನು ಸ್ವೀಕರಿಸುತ್ತೇವೆ ಎಂದಿರುವ ಅವರು ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕೂಡ ಬಿಜೆಪಿ ಸರ್ಕಾರ ಇದ್ದು ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರ ವಾಲಿದ್ದಾರೆ ಎಂದರು. ಈ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ಯಾವುದೇ ಪ್ರಭಾವ ಬೀರುವುದಿಲ್ಲ, ಕ್ಷೇತ್ರದಲ್ಲಿ ಇನ್ನಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಪಾಲಿಕೆ ಚುನಾವಣೆ: MES ಭದ್ರಕೋಟೆ ಛಿದ್ರಗೊಳಿಸಿದ ಬಿಜೆಪಿ..!

Source: newsfirstlive.com Source link