JDS ಜತೆ ಮೈತ್ರಿ ಕುರಿತು ಮಲ್ಲಿಕಾರ್ಜುನ ಖರ್ಗೆ ಬಳಿ ಚರ್ಚಿಸುತ್ತೇನೆ- ಸಿದ್ದರಾಮಯ್ಯ

JDS ಜತೆ ಮೈತ್ರಿ ಕುರಿತು ಮಲ್ಲಿಕಾರ್ಜುನ ಖರ್ಗೆ ಬಳಿ ಚರ್ಚಿಸುತ್ತೇನೆ- ಸಿದ್ದರಾಮಯ್ಯ

ಬೆಂಗಳೂರು: ಕಲಬುರಗಿಯ ಪಾಲಿಕೆ ಚುನಾವಣೆಯ ಒಟ್ಟು 55 ವಾರ್ಡ್​​ಗಳ ಮತ ಎಣಿಕೆ ಮುಕ್ತಾಯವಾಗಿದೆ. 55 ವಾರ್ಡುಗಳ ಪೈಕಿ ಕಾಂಗ್ರೆಸ್​ 27ರಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 23, ಜೆಡಿಎಸ್​​ 4, ಪಕ್ಷೇತರೊಬ್ಬರು ಗೆದ್ದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್​​ ನಂಬರ್​​ 28 ಆಗಿದ್ದು, ಕಾಂಗ್ರೆಸ್​ಗೆ ಇನ್ನೂ ಒಂದು ಸೀಟು ಬೇಕಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ.

ಜೆಡಿಎಸ್​​ ಮತ್ತು ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ಬಳಿ ಮಾತಾಡುತ್ತೇನೆ. ಮೊದಲು ಖರ್ಗೆ ಬಳಿ ಚರ್ಚಿಸಿ ಅಮೇಲೆ ಒಂದು ತೀರ್ಮಾನಕ್ಕೆ ಬರುತ್ತೇವೆ. ನಾನು ಈಗಲೇ ಇದರ ಕುರಿತು ಮಾತಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಬಿಜೆಪಿ ತೆಕ್ಕೆಗೆ ಬೆಳಗಾವಿ ಪಾಲಿಕೆ: ‘ಫಲಿತಾಂಶ ನೋಡಿ ಆಶ್ಚರ್ಯವಾಯ್ತು’ ಅಂದ್ರು ಹೆಬ್ಬಾಳ್ಕರ್​

Source: newsfirstlive.com Source link